ಸಿನಿವಾಣಿ

ನಾನು ನಿತ್ಯಾ ಮೆನನ್​ರನ್ನು ಮದ್ವೆ ಆಗಲ್ಲ, ಒಂದಲ್ಲ ಒಂದು ದಿನ ಆಕೆ ಪಶ್ಚಾತಾಪ ಪಟ್ಟೆ ಪಡುತ್ತಾಳೆ

ಕೊಚ್ಚಿ: ಮೋಹನ್ ​ಲಾಲ್​ ಅಭಿಮಾನಿಯೊಬ್ಬ ನಟಿ ನಿತ್ಯಾ ಮೆನನ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕಾಮೆಂಟ್ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಭಿಮಾನಿ ಸಂತೋಷ್​ ವಾರ್ಕಿ, ನಿತ್ಯಾ ಮೆನನ್​ ಅವರನ್ನು ತುಂಬಾ ಇಷ್ಟ ಪಡುತ್ತಿದ್ದಾರೆ. ಹಿಂದೊಮ್ಮೆ ಮದುವೆ ಆಗಲು ಅನುಮತಿ ಕೇಳಲು ಆಕೆಯ ಮನೆಗೆ ಹೋಗಿದ್ದರಂತೆ. ಇದೀಗ ನಿತ್ಯಾ ಬಗ್ಗೆ ಸಂತೋಷ್​ ಮತ್ತೊಂದು ಫೇಸ್​ಬುಕ್​ ಪೋಸ್ಟ್​ ಮಾಡಿದ್ದಾರೆ. ​

ಇದುವರೆಗೂ ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್​ ಇದೀಗ ನಿತ್ಯಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನಾನು ಇನ್ನೆಂದಿಗೂ ನಿತ್ಯಾ ಮೆನನ್​ ಅವರನ್ನು ಮದುವೆ ಆಗುವುದಿಲ್ಲ ಎಂದಿದ್ದಾರೆ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್​ ನಂಬರ್​ ಅನ್ನು ಕೊಡಬಹುದಿತ್ತು ಎಂದು ಫೇಸ್​ಬುಕ್​ ಪೋಸ್ಟ್​ ಮಾಡಿದ್ದಾರೆ.

ಸಂತೋಷ್​ ಅವರಿಗೆ ಈಗ ನಿತ್ಯಾ ಮೆನನ್ ಜತೆ ಮದುವೆಯಾಗುವ ಆಸಕ್ತಿ ಇಲ್ಲ. ಅದಕ್ಕಾಗಿ ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿದ್ದಾಗಿ ಪಶ್ಚಾತಾಪ ಪಡುತ್ತಿದ್ದಾರಂತೆ. ಚಿತ್ರ ಜಗತ್ತು ಹೃದಯಹೀನವಾಗಿದೆ ಮತ್ತು ಜನರು ಪರಸ್ಪರ ದ್ರೋಹ ಮಾಡುತ್ತಾರೆ ಎಂದು ಸಂತೋಷ್​ ಅವರ ಪೋಸ್ಟ್ ಹೇಳುತ್ತದೆ. ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್​ ಟೀಕಿಸಿದ್ದಾರೆ.

ಅಂದಹಾಗೆ ಸಂತೋಷ್​​ ವಾರ್ಕಿ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್​ಲಾಲ್​ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. (ಏಜೆನ್ಸೀಸ್​)