ಸಿನಿವಾಣಿ

ಶುಭಾ, ಶಮಂತ್​ ಎಲಿಮಿನೇಶನ್​ನಿಂದ ಲ್ಯಾಗ್​ ಮಂಜುಗೆ ಬಂಪರ್​, ಅರವಿಂದ್​ ಕನಸಿಗೆ ತಣ್ಣೀರು!

ಬೆಂಗಳೂರು: ಮುಂಜು ಪಾವಗಡ ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಖ್ಯಾತಿ ಗಳಿಸಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಸೀಸನ್​ 8ರ ವಿನ್ನಿಂಗ್​ ಟ್ರೋಫಿ ಮಂಜು ಪಾವಗಡ ಪಾಲಾಗಲಿದೆ ಎಂದು ಅವರ ಅಭಿಮಾನಿಗಳು ದೃಢವಾದ ನಂಬಿಕೆ ಇಟ್ಟುಕೊಂಡಿದ್ದಾರೆ.

ಈ ಮುಂಚೆ ಅರವಿಂದ್​ ಕೆ.ಪಿ ಮತ್ತು ದಿವ್ಯಾ ಉರುಡುಗ ತುಂಬಾ ಪ್ರಖ್ಯಾತಿಯನ್ನು ಗಳಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರು ಟ್ರೆಂಡ್​ ಸೃಷ್ಟಿ ಮಾಡಿದ್ದರು. ಆದರೆ, ಮಂಜು ಪಾವಗಡ ಇದೀಗ ಇಬ್ಬರನ್ನು ಓವರ್​ಟೇಕ್​ ಮಾಡಿದ್ದಾರೆ. ಕಳೆದ ವಾರದಿಂದ ಮಂಜು ಪಾವಗಡ ಒಳ್ಳೆಯ ವೋಟಿಂಗ್​ ಪ್ರಮಾಣವನ್ನು ಪಡೆದುಕೊಳ್ಳುತ್ತಿದ್ದಾರೆಂಬ ಮಾಹಿತಿ ಇದೆ.

ಇನ್ನೂ ಅರವಿಂದ್ ಕೆಪಿ ಮತ್ತು ಮಂಜು ಪಾವಗಡ ಮತದಾನ ಸಾಲಿನಲ್ಲಿ ಸಮಾನ ಅಂಕ ಗಳಿಸಿದ್ದಾರೆಂದು ಹೇಳಿದರೆ ತಪ್ಪಾಗುವುದಿಲ್ಲ. ಮಂಜು ದಿಢೀರನೇ ಹೇಗೆ ವೋಟಿಂಗ್​ ಪ್ರಮಾಣ ಹೆಚ್ಚಾಯಿತು ಎಂದು ನೋಡುವುದಾದರೆ, ಕಳೆದ ವಾರ ಮನೆಯಿಂದ ಎಲಿಮಿನೇಟ್​ ಆದ ಶುಭಾ ಪೂಂಜಾ ಮತ್ತು ಶಮಂತ್​ ಬ್ರೋ ಗೌಡ ಕಾರಣ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಬಿಗ್​ ಮನೆಯಲ್ಲಿ ಶುಭಾ ಮತ್ತು ಸಮಂತ್​ ಬ್ರೋ ಇಬ್ಬರು ಮಂಜು ಪಾವಗಡಗೆ ತುಂಬಾ ಆತ್ಮೀಯವಾಗಿದ್ದರು. ಇದೀಗ ಇಬ್ಬರು ಮನೆಯಿಂದ ಹೊರಬಂದಿರುವುದರಿಂದ ಇಬ್ಬರ ಅಭಿಮಾನಿಗಳು ಮಂಜು ಪಾವಗಡಗೆ ಬೆಂಬಲ ನೀಡುತ್ತಾರೆನ್ನಲಾಗಿದೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಮಂಜು ಪಾವಗಡ ಅವರು ಟ್ರೆಂಡಿಂಗ್​ನಲ್ಲಿದ್ದಾರೆ. ಮಂಜುಗೆ ವೋಟ್​ ಮಾಡುವಂತೆ ವೀಕ್ಷಕರನ್ನು ಕೇಳಿಕೊಳ್ಳುತ್ತಿದ್ದಾರೆ.

ಈ ಮುಂಚೆ ಅರವಿಂದ್​ ಕೆ.ಪಿ ಅಭಿಮಾನಿಗಳು ಮತ್ತು ಮಂಜು ಪಾವಗಡ ಅಭಿಮಾನಿಗಳು ಟ್ವೀಟ್​ ವಾರ್​ನಲ್ಲಿ ತೊಡಗಿಕೊಳ್ಳುತ್ತಿದ್ದರು. ಏನೇ ಇರಲಿ ಈ ಬಾರಿ ಮಂಜು ಮತ್ತು ಅರವಿಂದ್​ ಫೈನಲ್​ ಸುತ್ತಿಗೇರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಆದರೂ, ಕೊನೆಯಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಈ ಬಾರಿ ಬಿಗ್​ಬಾಸ್​ ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಎಂಬ ಕುತೂಹಲ ತುಂಬಾ ಗರಿಗೆದರಿದೆ. ಅದಕ್ಕಾಗಿ ಆಗಸ್ಟ್​ 8ರವರೆಗೆ ಎಲ್ಲರೂ ಕಾಯಬೇಕಿದೆ. (ಏಜೆನ್ಸೀಸ್​)