ಸಿನಿವಾಣಿ

ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ವೈರಲ್​ ಆಯ್ತು ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಹಾಟ್​ ಅವತಾರಗಳು!

ಬೆಂಗಳೂರು: ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ದಾಖಲಿಸಿದ ಅದೃಷ್ಟವಂತೆ ಯಾರು ಅಂದ್ರೆ ಅದು ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್​ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶ್ರೀನಿಧಿಗೆ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದಾಗ ಆಗುವ ಅನುಭವ ಆಗಿದೆ. ಅಲ್ಲದೆ, ಚಾಪ್ಟರ್​ 1ಕ್ಕಿಂತ ಕೆಜಿಎಫ್​ ಚಾಪ್ಟರ್​ 2ನ ಅದ್ಭುತ ಯಶಸ್ಸು ಶ್ರೀನಿಧಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಾಜಿ ಬ್ಯೂಟಿ ಕ್ವೀನ್​ ಶ್ರೀನಿಧಿ ಯಶಸ್ಸಿನ ಆರಂಭ ಕಂಡುಕೊಂಡಿದ್ದು, ಮುಂದಿನ ಕೊಬ್ರಾ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಒಂದೆಡೆ ಕೆಜಿಎಫ್​ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶ್ರೀನಿಧಿ ಅವರ ಹಾಟ್​ ಫೋಟೋಗಳು ವೈರಲ್​ ಆಗಿ ಭಾರೀ ಸಂಚಲನ ಮೂಡಿಸುತ್ತಿದೆ.

ಅಂದಹಾಗೆ ಶ್ರೀನಿಧಿ, ಮಿಸ್​ ಕರ್ನಾಟಕ 2015, ಮಿಸ್​ ದಿವಾ ಸೂಪರ್​ನ್ಯಾಷನಲ್​ 2016 ಮತ್ತು ಮಿಸ್​ ದಿವಾ 2016 ಸೌಂದರ್ಯ ಸ್ಪರ್ಧೆಯ ವಿಜೇತೆ. ಕೆಜಿಎಫ್​ ಸರಣಿಯ ಯಶಸ್ಸಿನ ಬಳಿಕ ಸಾಕಷ್ಟು ಸಿನಿಮಾ ಅವಕಾಶಗಳು ಶ್ರೀನಿಧಿ ಅವರನ್ನು ಹುಡುಕಿಕೊಂಡು ಬರುತ್ತಿದೆ. ಆದರೆ, ಒಳ್ಳೆಯ ಸ್ಕ್ರಿಪ್ಟ್​ಗಳನ್ನು ಆಯ್ದುಕೊಳ್ಳುವ ಕಡೆಗೆ ಶ್ರೀನಿಧಿ ಗಮನ ಹರಿಸುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಶ್ರೀನಿಧಿ ಅವರ ಬಿಕಿನಿ ಫೋಟೋಗಳು ದಿಢೀರ್​ ವೈರಲ್​ ಆಗಿವೆ. ಶ್ರೀನಿಧಿಯ ಬೋಲ್ಡ್​ ಅವತಾರ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. 30 ವರ್ಷದ ಶ್ರೀನಿಧಿ ಸ್ವಿಮ್​ಸೂಟ್​ ಧರಿಸಿ ವಿವಿಧ ಭಂಗಿಯಲ್ಲಿ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಸಾಕಷ್ಟು ಲೈಕ್ಸ್​ಗಳು ಹರಿದುಬರುತ್ತಿದ್ದು, ನೆಟ್ಟಿಗರ ತಮ್ಮದೇ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ತಮಿಳು ನಿರ್ದೇಶಕ ಅಜಯ್​ ಜ್ಞಾನಮುತ್ತು ನಿರ್ದೇಶನದ ಹಾಗೂ ಎ.ಆರ್​​. ರೆಹಮಾನ್​ ಸಂಗೀತವಿರುವ ಕೋಬ್ರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)