ಸಿನಿವಾಣಿ

ವಿಶೇಷತೆಗಳಿಂದ ಕೂಡಿರುವ ಕತ್ರಿನಾ ಕೈಫ್ ಧರಿಸಿರೋ ಮಂಗಳಸೂತ್ರದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಮುಂಬೈ: ಬಾಲಿವುಡ್​ ಸ್ಟಾರ್​ ಜೋಡಿಯಾದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ನಡೆದಿದೆ. ಮದುವೆ ಆದಾಗಿನಿಂದ ತಾರಾದಂಪತಿ ಭಾರೀ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನವಲನಗಳು ಸುದ್ದಿಯಾಗುತ್ತಲೇ ಇದೆ. ಇದೀಗ ಕತ್ರಿನಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಮೂರು ಫೋಟೋಗಳಲ್ಲಿ ಒಂದು ಫೋಟೋ ಭಾರೀ ವೈರಲ್​ ಆಗಿದೆ.

ಫೋಟೋದಲ್ಲಿ ಕತ್ರಿನಾ ಅವರು ಶಾರ್ಟ್ಸ್​ ಮತ್ತು ಜಿಪ್​ ಅಪ್​ ಕಾರ್ಡಿಗನ್​ ಧರಿಸಿ ತಮ್ಮ ಹೊಸ ಮನೆಯ ಸೋಫಾ ಮೇಲೆ ಕುಳಿತಿದ್ದಾರೆ. ಕತ್ರಿನಾ ಅವರ ಲುಕ್​ಗೆ ಫಿದಾ ಆಗಿರುವ ಕೆಲ ನೆಟ್ಟಿಗರು ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್​ ಮಾಡಿದ್ದಾರೆ. ಆದರೆ, ಬಹುತೇಕ ನೆಟ್ಟಿಗರ ಕಣ್ಣು ಕತ್ರಿನಾ ಪೋಸ್ಟ್​ ಮಾಡಿರುವ ಮೂರನೇ ಫೋಟೋ ಮೇಲೆ ಬಿದ್ದಿದೆ. ಅದಕ್ಕೆ ಕಾರಣ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ಮಾಂಗಲ್ಯ ಸರ ಅಥವಾ ಮಂಗಳಸೂತ್ರ.

ಮಂಗಳಸೂತ್ರವನ್ನು ಧರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತಿರುವುದು ನಿಜಕ್ಕೂ ಸುಂದರ. ಇತರ ನಟಿಯರು ನಿಮ್ಮಿಂದ ಕಲಿಯಬೇಕು ಎಂದು ನೆಟ್ಟಿಗನೊಬ್ಬ ಪ್ರಶಂಸಿಸಿದರೆ, ಇನ್ನೊಬ್ಬ ನೆಟ್ಟಿಗ ನೀವು ಮತ್ತು ನಿಮ್ಮ ಮಂಗಳೂಸೂತ್ರ ಬ್ಯೂಟಿಫುಲ್​ ಎಂದಿದ್ದಾನೆ. ಹೀಗೇ ಅನೇಕ ಮಾಂಗಲ್ಯಸರದ ಬಗ್ಗೆಯೇ ಮಾತನಾಡಿದ್ದಾರೆ.

ಇದರ ಜತೆಗೆ ಸೆಲೆಬ್ರಿಟಿಗಳ ಲೈಫ್​ ತುಂಬಾ ದುಬಾರಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರು ಧರಿಸುವ ಪ್ರತಿಯೊಂದು ಧಿರಿಸು, ಆಭರಣಗಳು ಸೇರಿದಂತೆ ಅವರು ಉಪಯೋಗಿಸುವ ಎಲ್ಲ ವಸ್ತುಗಳು ಕೂಡ ದುಬಾರಿಯೇ. ದಿನವೊಂದಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಸೆಲೆಬ್ರಿಟಿಗಳ ಐಷಾರಾಮಿ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಕತ್ರಿನಾ ಅವರ ಮಂಗಳಸೂತ್ರದ ಬೆಲೆಯ ಬಗ್ಗೆ ಬಹುತೇಕರು ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಇಲ್ಲಿದೆ.

ಕತ್ರಿನಾ ಅವರ ಮಂಗಳಸೂತ್ರವು ಚಿನ್ನದ ಸರ ಮತ್ತು ಚಿನ್ನದ ಪ್ಲೇಟ್​ ಮೇಲೆ ಇರಿಸಲಾದ ಎರಡು ಸಣ್ಣ ವಜ್ರದ ಹರಳು ಮತ್ತು ಕಪ್ಪು ಮಣಿಗಳ ಡಿಸೈನ್​ ಹೊಂದಿದೆ. ಇದು ಸವ್ಯಸಾಚಿಯವರ ಬೆಂಗಾಲ್ ಟೈಗರ್ ಕಲೆಕ್ಷನ್‌ನಿಂದ ಬಂದಿದೆ. ಇದರ ಬೆಲೆ ಬರೋಬ್ಬರಿ 5 ಲಕ್ಷ ರೂ. ಎಂದು ಹೇಳಲಾಗಿದೆ.

ಅಂದಹಾಗೆ ವಿಕ್ಕಿ ಮತ್ತು ಕತ್ರಿನಾ 2021ರ ಡಿಸೆಂಬರ್ 9ರಂದು ರಾಜಸ್ಥಾನದ ಅವಾಯಿ ಮಧೋಪುರ್​ನ ಸಿಕ್ಸ್​ ಸೆನ್ಸಸ್​ ಫೋರ್ಟ್​ ಬರ್ವಾರದಲ್ಲಿ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು. (ಏಜೆನ್ಸೀಸ್​)