ಮುಂಬೈ: 41 ವರ್ಷದ ನಟ ಹೃತಿಕ್ ರೋಷನ್ ಬಾಲ ನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿ, ಬಾಲಿವುಡ್ನಲ್ಲಿರುವ ಖಾನ್ಗಳು ಮತ್ತು ಇತರ ದೊಡ್ಡ ಸ್ಟಾರ್ ನಟರಿಗೆ ಒಂದೊಳ್ಳೆ ಕಾಂಪಿಟಿಷನ್ ಎಂದೆನಿಸಿಕೊಂಡಿದ್ದಾರೆ. ಆದರೆ, ಹೃತಿಕ್ ರೋಷನ್ ತಮ್ಮ ವೃತ್ತಿ ಜೀವನದಲ್ಲಿ ಕಂಡಷ್ಟು ಯಶಸ್ಸು, ಖಾಸಗಿ ಜೀವನದಲ್ಲಿ ಕಂಡಿಲ್ಲ. ಮೊದಲ ಪತ್ನಿ ಜತೆ 15 ವರ್ಷಗಳ ಸಂಸಾರದ ನಂತರ ವಿಚ್ಛೇದನ, ನಟಿ ಕಂಗನಾ ರಣಾವತ್ ಜತೆ ಡೇಟಿಂಗ್. ಹೀಗೆ ಹಲವಾರು ಕಾರಣಗಳಿಂದ ನಟ ಹೃತಿಕ್ ಖಾಸಗಿ ಜೀವನ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಇದೀಗ, ನಟನ ಮೊದಲ ಪತ್ನಿ ಸುಸೇನ್ ಖಾನ್ ಹೊಸ ಬಾಯ್ ಫ್ರೆಂಡ್ ಜತೆಗಿರುವ ಒಂದಿಷ್ಟು ಲೇಟೇಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೃತಿಕ್ ರೋಷನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈಗಾಗಾಲೇ ಹಲವು ಬಾರಿ ಸುಸೇನ್ ಖಾನ್ ಅವರ ಹೊಸ ಗೆಳೆಯನ ಕಥೆಗಳು ಸದ್ದು ಮಾಡಿವೆ. ಸುಸೇನ್ ಹೊಸ ಬಾಯ್ಫ್ರೆಂಡ್ ಇವರೇ ಎಂದು ಒಂದಿಷ್ಟು ಫೋಟೋಗಳು ಈ ಹಿಂದೆ ಸಹ ವೈರಲ್ ಆಗಿದ್ದವು. ಅದರ ಪ್ರಕಾರ ಸುಸೇನ್ ಖಾನ್ ಅವರು ಹೊಸದಾಗಿ ಡೇಟ್ ಮಾಡುತ್ತಿದ್ದದ್ದು ಅರ್ಸಲನ್ ಗೋನಿ ಎಂಬುವವರನ್ನು ಎನ್ನಲಾಗಿತ್ತು. ಹಾಗಾದರೆ, ಆ ಅರ್ಸಲನ್ ಗೋನಿ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅರ್ಸಲನ್ ಗೋನಿ ಒಬ್ಬ ಜನಪ್ರಿಯ ಹಿಂದಿ ಟಿವಿ ಸ್ಟಾರ್. ಇವರು ತುಂಬಾ ಸಿರಿಯಲ್ಗಳಲ್ಲಿ, ಟಿವಿ ಶೋಗಳಲ್ಲಿ, ವೆಬ್ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸಹೋದರ ಅಲಿ ಗೋನಿ ಸಹ ಖ್ಯಾತ ಟಿವಿ ನಟ. ಇತ್ತೀಚೆಗೆ, ಸುಸೇನ್ ಖಾನ್ ನಟ ಅರ್ಸಲನ್ ಗೋನಿ ಅವರೊಂದಿಗೆ ಗೋವಾದಲ್ಲಿ 43 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಸ್ನೇಹಿತರಾದ ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಸೇರಿದಂತೆ ಇತರರು ಪಾರ್ಟಿಯಲ್ಲಿ ಹಾಜರಿದ್ದರು. ಇಷ್ಟು ದಿನ ಖಚಿತವಾಗಿರದ ಸುಸ್ಸಾನ್ ಖಾನ್ ಹೊಸ ಗೆಳೆಯನ ಸುದ್ದಿಗಳು ಈ ಪಾರ್ಟಿಯ ಮುಲಕ ಹಾಗೂ ಅವರಿಬ್ಬರು ಜತೆಗಿದ್ದ ಫೋಟೋಗಳ ಮೂಲಕ ಮತ್ತೆ ದೃಢಪಟ್ಟಿದೆ.
ಹಾಗಾಗಿ, ನಟ ಹೃತಿಕ್ ಅವರ ಮೊದಲ ಪತ್ನಿ ಸುಸೇನ್ ಅವರ ಹೊಸ ಗೆಳೆಯನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಹೇಳಿ ಕೇಳಿ, ಇವರೆ ನೋಡಿ ಸುಸ್ಸಾನ್ರ ಹೊಸ ಬಾಯ್ ಫ್ರೆಂಡ್ ಅಂತ ಅಡಿಬರಹ ಬರೆದು ನೆಟ್ಟಿಗರು ಒಂದಿಷ್ಟು ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇವರಿಬ್ಬರೂ ಮದುವೆ ಆಗುವ ಸುದ್ದಿಗಳು ಕೇಳಿಬರುತ್ತಿದ್ದು, ಅವು ತುಂಬಾನೆ ಚರ್ಚೆಗೆ ಗ್ರಾಸವಾಗುತ್ತಿವೆ. ಇಷ್ಟೆಲ್ಲಾ ವಿಷಯಗಳು ಹರಿದಾಡುತ್ತಿದ್ದರು ಸುಸೇನ್ ಖಾನ್ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೇ ಮಾಜಿ ಗಂಡ ನಟ ಹೃತಿಕ್ ರೋಷನ್ರೊಡನೆ ವಿಚ್ಛೇದನದ ನಂತರವೂ ಒಳ್ಳೆಯ ಸಂಬಂಧವನ್ನೆ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.