ಬೆಂಗಳೂರು: ಕನ್ನಡ ಟೆಲಿವಿಷನ್ ಇತಿಹಾಸದಲ್ಲೇ ಬಿಗ್ಬಾಸ್ ಶೋ ಅಂತ್ಯಂತ ಜನಪ್ರಿಯತೆ ಗಳಿಸಿರುವ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಅದರಲ್ಲೂ ನಟ ಸುದೀಪ್ ನಿರೂಪಣೆಯಿಂದಾಗಿ ಬಿಗ್ಬಾಸ್ ಭಾರಿ ಜನಮನ್ನಣೆ ಗಳಿಸಿದೆ. ಟಿಆರ್ಪಿಯಲ್ಲೂ ಶೋ ಹಿಂದೆ ಬಿದ್ದಿಲ್ಲ.
ಕರೊನಾ ಲಾಕ್ಡೌನ್ನಿಂದಾಗಿ 75 ದಿನಗಳಿಗೆ ಮೊಟಕುಗೊಂಡಿದ್ದ ಬಿಗ್ಬಾಸ್ 8ನೇ ಆವೃತ್ತಿ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಸ್ಪರ್ಧಿಗಳು ಸಹ ತಮ್ಮ ಗೇಮ್ ಪ್ಲಾನ್ ಬದಲಾವಣೆಯೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ.
ಎಂದಿನಂತೆ ಕಲರ್ಸ್ ಕನ್ನಡ ಪ್ರೋಮೋ ಮೂಲಕವೇ ಶೋ ಮೇಲೆ ಹೆಚ್ಚು ಕುತೂಹಲ ಮೂಡಿಸುತ್ತದೆ. ಅದರಂತೆಯೇ ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ದಿವ್ಯಾ ಸುರೇಶ್ ಮತ್ತು ಪ್ರಶಾಂತ್ ಸಂಬರಗಿ ವಾಗ್ವಾದಕ್ಕಿಳಿದಿರುವುದು ಹೆಚ್ಚು ಗಮನ ಸೆಳೆದಿದೆ. ದಿವ್ಯಾ ಸುರೇಶ್ ಅವರೊಂದಿಗೆ ಜಗಳವಾಡುತ್ತಿರುವುದು ಕಂಡುಬರುತ್ತದೆ.
ಪ್ರಶಾಂತ್ ಪ್ರತಿವಾರ ನನ್ನ ಮೇಲೆ ಟಾರ್ಗೆಟ್ ಮಾಡುತ್ತಾರೆ. ನೀವು ಯಾವಾಗಲೂ ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತೀರಿ ಎಂದು ದಿವ್ಯಾ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಾಬರಗಿ ನಾಮಿನೇಶನ್ ಸಮಯದಲ್ಲಿ ಮಾತ್ರ ನಿಮ್ಮ ಬಗ್ಗೆ ಮಾತನಾಡುತ್ತೇನೆ. ಅದನ್ನು ಬಿಟ್ಟು ನಿಮ್ಮನ್ನು ನಾನು ಟಾರ್ಗೆಟ್ ಮಾಡುತ್ತಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಅವಳು ಉಚಿತ ಸಲಹೆಯನ್ನು ಬಯಸಿದಾಗಲೆಲ್ಲಾ ಕೊಡುವುದೇ ನಾನು ಮಾಡಿವ ತಪ್ಪು ಎಂದರು.
ಪ್ರೋಮೋ ನೋಡಿದ ನೆಟ್ಟಿಗರು ಪ್ರಶಾಂತ್ ಸಂಬರಗಿ ಬೆಂಬಲಕ್ಕೆ ನಿಂತಿದ್ದು, ಅವರು ನ್ಯಾಯಯುತ ಆಟ ಆಡುತ್ತಿದ್ದಾರೆಂದು ಹೊಗಳಿದ್ದಾರೆ. ದಿವ್ಯಾ ಸುರೇಶ್ ಮೇಲೆಯೇ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಈ ಶೋನಲ್ಲಿ ಟಾಪ್ ಐವರಲ್ಲಿ ಪ್ರಶಾಂತ್ ಸಂಬರಗಿ ಸಹ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಏಕೆಂದರೆ ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. (ಏಜೆನ್ಸೀಸ್)