ಸಿನಿವಾಣಿ

ರಾಧಿಕಾ ಆಪ್ಟೆಯನ್ನು ಬಹಿಷ್ಕರಿಸಿ: ಹಣಕ್ಕಾಗಿ ಬೆತ್ತಲಾಗುವವರ ಸಿನಿಮಾ ನೋಡ್ಬೇಡಿ ಅಂದ್ರು ನೆಟ್ಟಿಗರು!

ಮುಂಬೈ: ನಟಿ ರಾಧಿಕಾ ಆಪ್ಟೆ ಅವರು ಟ್ವಿಟರ್​ನಲ್ಲಿ ದಿಢೀರ್​ ಟ್ರೆಂಡ್​ ಆಗಿದ್ದಾರೆ. ಬೋಲ್ಡ್​ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸದಾ ಟೀಕೆಗಳನ್ನು ಎದುರಿಸುವ ರಾಧಿಕಾ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಆದರೂ, ಟ್ವಿಟರ್​ನಲ್ಲಿ Boycott Radhika Apte (ರಾಧಿಕಾ ಆಪ್ಟೆಯನ್ನು ಬಹಿಷ್ಕರಿಸಿ) ಎಂಬ ಪದ ಸದ್ಯ ಟ್ರೆಂಡ್​ನಲ್ಲಿದೆ.

ಇನ್ನು ರಾಧಿಕಾ ಅವರ ಯಾವುದೇ ಚಿತ್ರಗಳು ತೆರೆಗೆ ಬರಲು ಸಜ್ಜಾಗಿಲ್ಲ. ಆದರೂ ಟ್ವಿಟರ್​ನಲ್ಲಿ ಹೇಗೆ ಟ್ರೆಂಡ್​ ಆದ್ರೂ ಎಂದು ನೋಡಿದಾಗ ಆಕೆಯ ಹಳೆಯ ಪಾರ್ಚ್ಡ್​​ ಸಿನಿಮಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವುದು ಆಕೆ ಟ್ರೆಂಡ್​ ಆಗುವುದಕ್ಕೆ ಕಾರಣವಾಗಿದೆ. ಅಜಯ್​ ದೇವಗನ್​ ನಿರ್ಮಾಣದ ಪಾರ್ಚ್ಡ್​ ಚಿತ್ರದಲ್ಲಿ ರಾಧಿಕಾ, ನಟ ಆದಿಲ್​ ಹುಸೈನ್​ ಜತೆ ಬೆತ್ತಲೆ ದೃಶ್ಯಗಳಲ್ಲಿ ನಟಿಸಿದ್ದಾರೆ.

ಪಾರ್ಚ್ಡ್​ ಸಿನಿಮಾದ ಫೋಟೋಗಳನ್ನು ಟ್ವೀಟ್​ ಮಾಡಿರುವ ನೆಟ್ಟಿಗರು ಬಾಲಿವುಡ್​ ಸೆಲೆಬ್ರಿಟಿಗಳ ವರ್ತನೆಯನ್ನು ವಿರೋಧಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ತುಟಿಯನ್ನೇ ಬಿಚ್ಚುವುದಿಲ್ಲ. ಅದೇ ಬೇರೆ ವಿಚಾರ ಬಂದಾಗ ಉದ್ದುದ್ದ ಮಾತನಾಡುತ್ತಾರೆ. ಪಾರ್ಚ್ಡ್​ ಸಿನಿಮಾವು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಗುಡುಗಿದ್ದಾರೆ.

ರಾಧಿಕಾ ಆಪ್ಟೆ ಕೇವಲ ಹಣಕ್ಕಾಗಿ ನಟಿಸುತ್ತಿದ್ದಾರೆ, ಭಾರತೀಯ ಸಂಪ್ರದಾಯಗಳಿಗೆ ವಿರುದ್ಧವಾಗಿ ಮತ್ತು ಮೌಲ್ಯಗಳನ್ನು ತ್ಯಜಿಸಿದ್ದಾರೆ ಎಂದು ಟೀಕಿಸಿದ್ದಾರೆ. ಬಾಲಿವುಡ್ ಇಂತಹವರಿಗೆ ಅವಕಾಶ ನೀಡಬಾರದೆಂದು ಕೆಲವರು ಬಯಸಿದರೆ, ಇನ್ನು ಕೆಲವರು ಇಂತಹ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಿದರೆ ಸಾಕು ಎಂದು ಸಲಹೆ ನೀಡುತ್ತಿದ್ದಾರೆ.

ರಾಜ್​ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ರಾಧಿಕಾ ಆಪ್ಟೆಯನ್ನು ನೆಟ್ಟಿಗರು ಎಳೆದುತಂದಿದ್ದು, ಇವರು ನಮ್ಮ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆಂದು ಅನೇಕ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ. ಇಬ್ಬರನ್ನು ಬಹಿಷ್ಕರಿಸಿ ಎಂದು ಒತ್ತಾಯ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದಾಗ ವಾಸನ್ ಬಾಲಾ ಅವರ 'ಮೋನಿಕಾ, ಓ ಮೈ ಡಾರ್ಲಿಂಗ್' ನಲ್ಲಿ ರಾಧಿಕಾ ರಾಜ್‌ಕುಮಾರ್​ ರಾವ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)