ಸಿನಿವಾಣಿ

ರಾಕೇಶ್​ ಬಗ್ಗೆ ವೀಕ್ಷಕರ ಈ ಊಹೆ ಸರಿಯಾಗಿದೆಯೇ? ಹಿಂದಿಯಂತೆ ಇಲ್ಲೂ ನಡೆಯುತ್ತಿದ್ದೀಯಾ ಈ ತಂತ್ರಗಾರಿಕೆ?

ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಾಂತ್ಯಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್​ ಯೋಗೇಶ್ವರ್​ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಇದೀಗ ಮೂರನೇ ವಾರದಲ್ಲಿ ಯಾರು ದೊಡ್ಮನೆ ತೊರೆಯಲ್ಲಿದ್ದಾರೆ ಎಂಬ ಊಹೆಗಳು ನಡೆಯುತ್ತಿದೆ. ಇದರ ನಡುವೆ ಎಲಿಮಿನೇಶನ್​ ವಿಚಾರದಲ್ಲಿ ರಾಕೇಶ್​ ಅಡಿಗ ಸುದ್ದಿಯಾಗಿದ್ದಾರೆ.

ಕನ್ನಡದ ರ್ಯಾಪರ್​ ರಾಕೇಶ್​ ಅಡಿಗ ಸ್ಯಾಂಡಲ್​ವುಡ್​ನ ಯುವ ನಟರ ಪೈಕಿ ಒಬ್ಬರು. ಜೋಶ್​ ಮೂಲಕ ಎಲ್ಲರ ಮನ ಗೆದ್ದ ರಾಕೇಶ್​ ಅವರಿಗೆ ನಂತರ ಬಂದ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ. ಸದ್ಯ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ರಾಕೇಶ್​, ಸದ್ಯ ಬಿಗ್​ಬಾಸ್​ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಬಿಗ್​ಬಾಸ್​ನಲ್ಲಿ ಸ್ಪರ್ಧಿಸಿದ ಬಳಿಕ ರಾಕೇಶ್​ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ, ಅಭಿಮಾನಿಗಳು ರಾಕೇಶ್​ ಅವರ ಹೆಸರನ್ನು ಜಾಲತಾಣದಲ್ಲಿ ಟ್ರೆಂಡ್​ ಸಹ ಮಾಡುತ್ತಿದ್ದಾರೆ.

ರಾಕೇಶ್​ ಈಗಾಗಲೇ ಬಿಗ್​ಬಾಸ್​ ಮನೆಯಲ್ಲಿ ಎಲಿಮಿನೇಶನ್​ಗೆ ನಾಮಿನೇಟ್​ ಆಗಿದ್ದರು ಅತ್ಯಧಿಕ ಮತಗಳಿಂದ ಮನೆಯಲ್ಲೇ ಪ್ರತಿ ವಾರ ಉಳಿದುಕೊಳ್ಳುತ್ತಿದ್ದಾರೆ. ಐದು ಫೈನಲ್​ ಸ್ಪರ್ಧಿಗಳಲ್ಲಿ ರಾಕೇಶ್​ ಕೂಡ ಇರುತ್ತಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಅಲ್ಲದೆ, ಬಿಗ್​ಬಾಸ್​ ವಿಜೇತರು ಆಗಬಹುದು ಎಂದು ಅಂದಾಜಿಸಿದ್ದಾರೆ.

ಆದರೆ, ಒಂದು ವರ್ಗದ ವೀಕ್ಷಕರು ಹೇಳುವ ಪ್ರಕಾರ ರಾಕೇಶ್​ ಅಡಿಗ ಬಲವಾದ ಪಿಆರ್​ ಟೀಮ್​ ಹೊಂದಿದ್ದಾರಂತೆ. ಟಾಸ್ಕ್​ನಲ್ಲಿ ಸರಿಯಾಗಿ ನಿರ್ವಹಣೆ ತೋರದಿದ್ದರೂ ಪಿಆರ್​ ಟೀಮ್​ ಮೂಲಕ ರಾಕೇಶ್​​ ಎಲಿಮಿನೇಶನ್​ನಿಂದ ಬಚಾವ್​ ಆಗುತ್ತಿದ್ದಾರೆ ಎಂದು ಕೆಲ ವೀಕ್ಷಕರು ಹೇಳುತ್ತಿದ್ದಾರೆ. ಅಲ್ಲದೆ, ಪ್ರತಿ ಬಿಗ್ ಬಾಸ್ ಸ್ಪರ್ಧಿಗಳು ಅವರಿಗೆ ಬೇರೂರಲು ಪಿಆರ್​ ತಂಡಗಳನ್ನು ನೇಮಿಸಿಕೊಳ್ಳುತ್ತಾರೆ ಮತ್ತು ಹಿಂದೆ ಸೇರಿದಂತೆ ಎಲ್ಲಾ ಭಾಷೆಗಳ ಬಿಗ್​ಬಾಸ್​ನಲ್ಲಿಯೂ ಇದು ನಡೆಯುತ್ತಿದೆ. PR ತಂಡವು ನಿರ್ದಿಷ್ಟ ಸ್ಪರ್ಧಿಯನ್ನು ಕಾರ್ಯಕ್ರಮದಿಂದ ಹೊರಹಾಕುವುದನ್ನು ತಡೆಯಲು ಅವರನ್ನು ಉತ್ತೇಜಿಸುತ್ತದೆ. ಬಲವಾದ ಪಿಆರ್​ ಟೀಮ್​ ನೇಮಕ ಮಾಡಿಕೊಂಡರು, ಕೆಲವೊಮ್ಮೆ ಶೇಕಡವಾರು ಮತಗಳಿಂದಾಗಿ ಮನೆಯಿಂದ ಹೊರ ನಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಸದ್ಯ ರಾಕೇಶ್​ ತಮ್ಮ ಉತ್ತಮವಾದದ್ದನ್ನು ನೀಡಲು ಪ್ರಯತ್ನ ಪಡುತ್ತಿದ್ದಾರೆ. ಇತ್ತೀಚೆಗೆ ಟಾಸ್ಕ್​ಗಳಲ್ಲಿಯೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಜನರ ಮನ ಗೆದ್ದರೆ, ರಾಕೇಶ್​, ಬಿಗ್​ಬಾಸ್​ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)