ಸಿನಿವಾಣಿ

ಮಲಯಾಳಿ ಬ್ಯೂಟಿಯ ಟಾಪ್​ಲೆಸ್​ ಫೋಟೋ ವೈರಲ್​: ಜಾನಕಿಯ ಮೈಮಾಟಕ್ಕೆ ಮನಸೋತ ಫ್ಯಾನ್ಸ್​

ಕೊಚ್ಚಿ: ಮಲಯಾಳಂ ನಟಿ ಜಾನಕಿ ಸುಧೀರ್​ ಅವರು ತಮ್ಮ ಟಾಪ್​ಲೆಸ್​ ಫೋಟೋಗಳನ್ನು ಹರಿಬಿಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಟಿಯ ಸಖತ್​ ಹಾಟ್​ ಅವತಾರವನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಒಡವೆಗಳಿಂದಲೇ ತಮ್ಮ ಎದೆಯನ್ನು ಮುಚ್ಚಿಕೊಂಡು, ಅರೆಬೆತ್ತಲೆ ಅವತಾರದಲ್ಲಿ ವಿವಿಧ ಭಂಗಿಯಲ್ಲಿ ಜಾನಕಿ ಸುಧೀರ್ ಅವರು​ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈಗಾಗಲೇ 25 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ.

ಜಾನಕಿ ಫೋಟೋ ನೋಡಿ ಅನೇಕರು ಹುಬ್ಬೇರಿಸಿದ್ದಾರೆ. ಅಲ್ಲದೆ, ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಬೋಲ್ಡ್​ ಅವತಾರಕ್ಕೆ ಕೆಲವರು ಫಿದಾ ಆಗಿದ್ದರೆ, ಇನ್ನು ಕೆಲವರು ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕೆ ಗರಂ ಆಗಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ​​

ನಟಿ ಹಾಗೂ ಮಾಡೆಲ್​ ಆಗಿರುವ ಜಾನಕಿ ಸುಧೀರ್​​ ಅವರು 2017ರಿಂದಲೂ ಸಿನಿ ಜಗತ್ತಿನಲ್ಲಿ ಸಕ್ರೀಯರಾಗಿದ್ದಾರೆ. ಮಲಯಾಳಂನಲ್ಲಿ ತೆರೆಕಂಡ ಚಂಕ್ಸ್​, ಯೆಮಾಂಡನ್​ ಪ್ರೇಮಕತಾ ಮತ್ತು ಹೋಲಿ ವುಂಡ್​ ಸಿನಿಮಾಗಳಲ್ಲಿ ಜಾನಕಿ ನಟಿಸಿದ್ದಾರೆ. ಅಲ್ಲದೆ, ಸೂಪರ್​ಸ್ಟಾರ್​ ಮೋಹನ್​ ಲಾಲ್​ ನಡೆಸಿಕೊಟ್ಟ ಬಿಗ್​ಬಾಸ್​ ಸೀಸನ್​ 4ರ ಸ್ಪರ್ಧಿ ಆಗಿದ್ದರು.

ಜಾನಕಿ ಸುಧೀರ್ ಅವರು ನಟಿಸಿರುವ ಇತ್ತೀಚೆಗೆ ಬಿಡುಗಡೆಯಾದ 'ಹೋಲಿ ವುಂಡ್​' ಸಿನಿಮಾ ಭಾರೀ ವಿವಾದ ಹುಟ್ಟುಹಾಕಿದೆ. ಇದರಲ್ಲಿ ಜಾನಕಿ ಅವರು ತಮ್ಮ ಶಾಲಾ ಸಹಪಾಠಿಯೊಂದಿಗೆ ಸಲಿಂಗಕಾಮಿ ಸಂಬಂಧ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 12 ರಿಂದ OTT ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. (ಏಜೆನ್ಸೀಸ್​)