ಸಿನಿವಾಣಿ

ಹಾಟ್​ನೆಸ್​ ಇರುವುದು ನನ್ನ ತೊಡೆಯಲ್ಲಿ ಅಲ್ಲ ನಿಮ್ಮ.... ನಟಿ ಆಶು ರೆಡ್ಡಿ ಬೋಲ್ಡ್​ ಸ್ಟೇಟ್​ಮೆಂಟ್​ ವೈರಲ್​!

ಹೈದರಾಬಾದ್​: ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಆಶು ರೆಡ್ಡಿ, ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬೋಲ್ಡ್​ ಕಂಟೆಂಟ್​ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಟ್ರೋಲ್​ಗು ಗುರಿಯಾಗುತ್ತಿರುತ್ತಾರೆ. ಕೆಲ ತಿಂಗಳ ಹಿಂದಷ್ಟೇ ಸ್ಟಾರ್​ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಜತೆಗಿನ ಸಂದರ್ಶನದಲ್ಲಿ ಸೆಕ್ಸ್​ ಲೈಫ್​ ಬಗ್ಗೆ ಮಾತನಾಡಿ ಆಶು ರೆಡ್ಡಿ ಸುದ್ದಿಯಾಗಿದ್ದರು.

ಜಾಲತಾಣದಲ್ಲಿ ತೀರ ವೈಯಕ್ತಿಕವಾಗಿ ಕಾಮೆಂಟ್​ ಮಾಡುವ ನೆಟ್ಟಿಗರನ್ನು ತಮ್ಮ ಖಾರವಾದ ಮಾತಿನಿಂದಲೇ ಆಶು ರೆಡ್ಡಿ ಆಗಾಗ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಫೋಟೋಶೂಟ್​ ನಡೆಸಿರುವ ಆಶು, ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಕೆಲವರಿಗೆ ತಿರುಗೇಟನ್ನೂ ನೀಡಿದ್ದಾರೆ.

ಫೋಟೋದಲ್ಲಿ ಆಶು ರೆಡ್ಡಿ ಟಾಪ್​ ಹಾಗೂ ಜಾಕೆಟ್​ ಧರಿಸಿ ಪೋಸ್​ ನೀಡಿದ್ದು, "ಹಾಟ್​ನೆಸ್​ ಇರುವುದು ನನ್ನ ತೊಡೆಯಲ್ಲೆಲ್ಲ...ನಿಮ್ಮ ಕಣ್ಣುಗಳಲ್ಲಿ" ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಟ್ರೋಲ್​ ಮಾಡುವವರನ್ನು ವ್ಯಂಗ್ಯವಾಡಿದ್ದಾರೆ. ಆದಾಗ್ಯೂ ಟ್ರೋಲಿಗರು ಆಶು ರೆಡ್ಡಿಯನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ತೊಡೆ ಸುಂದರಿ ಎಂದು ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್​)