ಸಿನಿವಾಣಿ

VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ಪುನೀತ್​ ಕಡೆಯಿಂದ ಬಂತು ಶುಭಾಶಯ

ಬೆಂಗಳೂರು: ಟಾಲಿವುಡ್ ನಟ ಜೂ. ಎನ್​ಟಿಆರ್ ಬರ್ತ್​ಡೇ ನಿಮಿತ್ತ ಟಾಲಿವುಡ್​ ಸೇರಿ ದಕ್ಷಿಣ ಭಾರತದ ಹಲವು ಇಂಡಸ್ಟ್ರಿಗಳ ಸ್ನೇಹಿತರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಕನ್ನಡದ ಹಲವು ಕಲಾವಿದರು, ನಿರ್ದೇಶಕರು ವಿಶ್​ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್​ ನೀಲ್​, ನಟಿ ಪ್ರಣೀತಾ ಸುಭಾಷ್​ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಇದೀಗ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಕಡೆಯಿಂದಲೂ ಸ್ನೇಹಿತನಿಗೆ ಶುಭಾಶಯದ ವಿಡಿಯೋ ಸಂದೇಶ ರವಾನೆಯಾಗಿದೆ.

ಹೌದು, ಸಿನಿಮಾ ಇಂಡಸ್ಟ್ರಿ ಬೇರೆ ಬೇರೆಯಾದರೂ, ಪುನೀತ್​ ಮತ್ತು ಎನ್​ಟಿಆರ್ ಆಪ್ತ ಸ್ನೇಹಿತರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆ ಸ್ನೇಹಕ್ಕೆ ಬೆಲೆ ಕೊಟ್ಟು ಪುನೀತ್​ ನಟನೆಯ ಚಕ್ರವ್ಯೂಹ ಚಿತ್ರದ ‘ಗೆಳೆಯಾ ಗೆಳೆಯಾ..’ ಹಾಡಿಗೆ ಎನ್​ಟಿಆರ್ ಧ್ವನಿ ನೀಡಿದ್ದರು. ಬೆಂಗಳೂರಿಗೆ ಬಂದಾಗ ಪುನೀತ್​ಗೆ ಭೇಟಿಯಾಗಿಯೇ ತೆರಳುತ್ತಿದ್ದರು. ಇದೀಗ ಅಂಥ ಸ್ನೇಹಿತನ ಜನ್ಮದಿನಕ್ಕೆ ಪುನೀತ್​ ವಿಡಿಯೋ ಮಾಡಿ ಆ ಮೂಲಕ ಜನ್ಮದಿನದ ಶುಭಾಶಯವನ್ನು ರವಾನಿಸಿದ್ದಾರೆ.

‘ಹ್ಯಾಪಿ ಬರ್ತ್​ಡೇ ಬ್ರದರ್​.. ವಿತ್​ ಗುಡ್​ ಹೆಲ್ತ್​ ಆ್ಯಂಡ್​ ಹ್ಯಾಪಿನೆಸ್​.. ಆಲ್ವೇಸ್​ ಹ್ಯಾಪಿನೆಸ್​’ ಎಂದು ಹೇಳಿ ವಿಶ್ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಟಾಲಿವುಡ್ ಎನ್​ಟಿಆರ್ ಅಭಿಮಾನಿಗಳು ಶೇರ್​ ಮಾಡಿಕೊಂಡಿದ್ದು, ಪವರ್​ಸ್ಟಾರ್ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.