ಸಿನಿವಾಣಿ

ಪುನೀತ್ ನಿರ್ಮಾಣದಲ್ಲಿ ಬರಲಿದೆ ಓ2

Mandara

ಬೆಂಗಳೂರು: ಈಗಾಗಲೇ ಪುನೀತ್ ರಾಜ್​ಕುಮಾರ್ ತಮ್ಮ ಬ್ಯಾನರ್​ನಲ್ಲಿ ನವ ನಿರ್ದೇಶಕರ ಬೆನ್ನಿಗೆ ನಿಂತು, ಚಿತ್ರ ನಿರ್ಮಾಣಕ್ಕೆ ಕಾಸು ಹಾಕುತ್ತಿದ್ದಾರೆ. ಇದೀಗ ಹೊಸದೊಂದು ಚಿತ್ರಕ್ಕೆ ಬಂಡವಾಳ ಹೂಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಚಿತ್ರದ ಶೀರ್ಷಿಕೆ ಅಷ್ಟೇ ವಿಚಿತ್ರವಾಗಿದ್ದು, ‘ಓ2’ ಎಂದು ಅಂತಿಮ ಮಾಡಲಾಗಿದೆ.

ಅಂದಹಾಗೆ, ಈ ಹಿಂದೆ ಪುನೀತ್ ಬ್ಯಾನರ್​ನಲ್ಲಿ ‘ಮಾಯಾಬಜಾರ್’ ಚಿತ್ರ ನಿರ್ದೇಶಿಸಿದ್ದ ರಾಧಾಕೃಷ್ಣ, ಈ ಚಿತ್ರದ ನಿರ್ವಣದಲ್ಲಿ ಕೈ ಜೋಡಿಸಿದ್ದು, ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಪ್ರಶಾಂತ್ ರಾಜ್ ಮತ್ತು ಟ್ಯಾಟೂ ಕಲಾವಿದ ರಾಘವ್ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಮೆಡಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಸಿದ್ಧವಾಗಲಿದ್ದು, ಈಗಾಗಲೇ ಒಂದು ಹಂತದ ಸ್ಕ್ರಿಪ್ಟ್ ಸಿದ್ಧವಾಗಿದೆ.

ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳನ್ನೇ ಆಯ್ದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಆಡಿಷನ್ ಪ್ರಕ್ರಿಯೆ ಸಹ ಶುರುವಾಗಿದ್ದು, ಇನ್ನೇನು ಶೀಘ್ರದಲ್ಲಿ ತಾಂತ್ರಿಕ ವರ್ಗ ಮತ್ತು ಪಾತ್ರವರ್ಗದ ಆಯ್ಕೆ ಅಂತಿಮವಾಗಲಿದೆ. ಇದನ್ನು ಹೊರತುಪಡಿಸಿದರೆ, ಪಿಆರ್​ಕೆ ಬ್ಯಾನರ್​ನಲ್ಲಿ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ನಿರ್ವಣವಾಗಿದ್ದು, ಶೀಘ್ರ ಓಟಿಟಿಯಲ್ಲಿ ಬಿಡುಗಡೆ ಆಗಲಿವೆ.