ಸಿನಿವಾಣಿ

ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

ಹೈದರಾಬಾದ್​: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಬೋಲ್ಡ್​ ನಟನೆಯಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 2017ರಲ್ಲಿ ಮುಸ್ತಾಫ್​ ರಾಜ್​ ಎಂಬುವರನ್ನು ವರಿಸಿದ ಬಳಿಕ ಪ್ರಿಯಾಮಣಿ ಅವರು ಹೆಚ್ಚು ಚಿತ್ರಗಳಲ್ಲಿ ನಟಿಸಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅವರು ನಿರಂತರ ಸಂಪರ್ಕದಲ್ಲಿರುತ್ತಾರೆ.

ಸದ್ಯ ವೆಬ್​ ಸೀರಿಸ್​ ಮತ್ತು ಟೆಲಿವಿಷನ್​ ಶೋ ಒಂದರ ಜಡ್ಜ್​ ಆಗಿರುವ ಪ್ರಿಯಾಮಣಿ, ಇತ್ತೀಚೆಗಷ್ಟೇ ತಮ್ಮ ಹೊಸ ಫೋಟೋಶೂಟ್​ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಧಿರಿಸಿನಲ್ಲಿ ಕ್ಯಾಮೆರಾಗೆ ಮಾದಕ ಪೋಸ್​ ನೀಡಿದ್ದ ಫೋಟೋಗಳು ವೈರಲ್​ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಲತಾಣ ಅಂದ ಮೇಲೆ ಕೆಲವರು ಪುಂಡು ಪೊಕರಿಗಳು ಸಹ ಇರುತ್ತಾರೆ. ಇದೇ ಕ್ಯಾಟಗರಿಗೆ ಸೇರಿದ ನೆಟ್ಟಿಗನೊಬ್ಬ ಪ್ರಿಯಾಮಣಿಗೆ ಕಾಮೆಂಟ್​ ಮಾಡಿ ಬೆತ್ತಲೆ ಫೋಟೋಗಳನ್ನು ಕೇಳಿದ್ದಾನೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಮಣಿ, ಮೊದಲ ನಿಮ್ಮ ಅಮ್ಮ ಮತ್ತು ಅಕ್ಕ-ತಂಗಿಯರ ಬಳಿ ಕೇಳು, ಅವರು ಮಾಡಿದರೆ ನಾನು ಸಹ ಖಂಡಿತವಾಗಿ ಮಾಡುತ್ತೇನೆಂದು ಖಡಕ್​ ಉತ್ತರ ನೀಡಿದ್ದಾರೆ. ಕೊನೆಯಲ್ಲಿ ನೆಟ್ಟಗನು ಸಹ ಕ್ಷಮೆಯಾಚಿಸಿದ್ದಾನೆ.

ಪ್ರಿಯಾಮಣಿ ಅವರ ಉತ್ತರಕ್ಕೆ ಮಾರುಹೋದ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್​)