ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್, ಜೋರ್ಡಾನ್‌ನಿಂದ ಮೂರು ದಿನಗಳ ಹಿಂದಷ್ಟೇ ವಾಪಸ್ಸು ಬಂದಿರುವುದು ಗೊತ್ತಲ್ಲಾ? ಈಗ ಪೃಥ್ವಿರಾಜ್ ಕ್ವಾರಂಟೈನ್‌ನಲ್ಲಿ ಒಂದು ಹೊಸ ಫೋಟೋ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮಾನವ ದೇಹಕ್ಕೆ ಒಂದು ಮಿತಿ ಇದೆ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ವಿಡಿಯೋ ನೋಡಿ ನಿಮ್ಮ ಕಣ್ಣು ಒದ್ದೆಯಾಗೋದು ಗ್ಯಾರಂಟಿ!
ಇಷ್ಟಕ್ಕೂ ಈ ಪೋಸ್ಟ್ ಹಿಂದಿರುವ ಕಥೆಯೇನು ಎಂಬ ಪ್ರಶ್ನೆ ಬರುವುದು ಸಹಜ. ಪೃಥ್ವಿರಾಜ್ ಏನಾದರೂ ಲಾಕ್‌ಡೌನ್ ಸಮಯದಲ್ಲಿ, ಕಸರತ್ತು ಮಾಡಿ ಈ ರೀತಿ ಆಗಿದ್ದಾರಾ ಎಂಬ ಪ್ರಶ್ನೆಯೂ ಸಹಜವೇ. ಕಳೆದ ಒಂದು ತಿಂಗಳ ಹಿಂದೆ ಪೃಥ್ವಿರಾಜ್ ಹೀಗಿರಲಿಲ್ಲವಂತೆ. ಸಂಪೂರ್ಣ ವೀಕ್ ಆಗಿಹೋಗಿದ್ದರಂತೆ. ಒಂದು ತಿಂಗಳು ಆರೈಕೆ ಮಾಡಿಕೊಂಡ ನಂತರ, ಇದೀಗ ಅವರು ಸಹಜ ಸ್ಥಿತಿಗೆ ಮರಳಿದ್ದಾಗಿ ಹೇಳಿಕೊಂಡಿದ್ದಾರೆ.
‘ಆಡುಜೀವಿತಂ’ ಚಿತ್ರದಲ್ಲಿನ ಒಂದಿಷ್ಟು ದೃಶ್ಯಗಳಿಗೆ, ಸಾಕಷ್ಟು ಕಸರತ್ತು ಮಾಡಿ ತಮ್ಮ ದೇಹವನ್ನು ಹುರಿಗೊಳಿಸಿದ್ದರು ಪೃಥ್ವಿರಾಜ್. ಹೀಗೆ ಕಸರತ್ತು ಮಾಡಿ ಮಾಡಿ, ಚಿತ್ರೀಕರಣ ಮುಗಿಯುವಷ್ಟರಲ್ಲಿ ಸಂಪೂರ್ಣ ಸುಸ್ತಾಗಿ ಹೋಗಿದ್ದರಂತೆ ಅವರು.
ಇದನ್ನೂ ಓದಿ: ಮಹಿಳೆಯ ಉಗುರಿನಲ್ಲೂ ‘ಕೆಜಿಎಫ್’ ಕ್ರೇಜ್!
‘ಚಿತ್ರೀಕರಣದ ಕೊನೆಯ ದಿನ ನಾನು ಸಿಕ್ಕಾಪಟ್ಟೆ ವೀಕ್ ಆಗಿದ್ದೆ. ಲೋಫ್ಯಾಟ್ ಆಗಿದ್ದರಿಂದ ಬಳಲಿದ್ದೆ. ಕೊನೆಗೆ ಒಂದು ತಿಂಗಳ ಕಾಲ ಸಾಕಷ್ಟು ವಿಶ್ರಾಂತಿ ಪಡೆಯುವುದರ ಜತೆಗೆ, ಸೂಕ್ತ ವ್ಯಾಯಾಮ ಮಾಡಿದ್ದರಿಂದ ನಾನು ಈಗ ಸಹಜ ಸ್ಥಿತಿಗೆ ಮರಳಿದ್ದೇನೆ. ಶೂಟಿಂಗ್ ಸಂದರ್ಭದಲ್ಲಿ ನನ್ನನ್ನು ನೋಡಿದವರು, ಈಗ ನನ್ನನ್ನು ನೋಡಿ ಆಶ್ಚರ್ಯಗೊಳ್ಳುವುದು ಖಂಡಿತಾ. ಆ ಮಟ್ಟಿಗೆ ಒಂದು ತಿಂಗಳಲ್ಲಿ ಬದಲಾಗಿದ್ದೇನೆ. ಮನುಷ್ಯನ ದೇಹಕ್ಕೆ ಸಾಕಷ್ಟು ಇತಿಮಿತಿಗಳಿವೆ. ಆದರೆ, ಮನಸ್ಸಿಗಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು’ ಎಂದು ಪೃಥ್ವಿರಾಜ್ ಹೇಳಿಕೊಂಡಿದ್ದಾರೆ.
‘ಆಡುಜೀವಿತಂ’ ಎಂಬ ಮಲಯಾಳಂ ಚಿತ್ರದ ಚಿತ್ರೀಕರಣಕ್ಕೆ ಪೃಥ್ವಿರಾಜ್ ಜೋರ್ಡಾನ್‌ಗೆ ಹೋಗಿದ್ದರು. ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಅವರು ಭಾರತಕ್ಕೆ ಬರಲಿಕ್ಕಾಗದೇ, ಜೋರ್ಡಾನ್‌ನಲ್ಲೇ ಉಳಿಯಬೇಕಾಗಿತ್ತು. ಈಗ ಕೇರಳಕ್ಕೆ ವಾಪಸ್ಸಾಗಿರುವ ಪೃಥ್ವಿರಾಜ್, ಕ್ವಾರಂಟೈನ್‌ನಲ್ಲಿದ್ದು, ಮುಂದಿನ ತಿಂಗಳು ಮನೆಗೆ ವಾಪಸ್ಸಾಗಲಿದ್ದಾರೆ.