ಸಿನಿವಾಣಿ

ಮತ್ತೊಂದು ದೊಡ್ಡ ಪ್ರೊಡಕ್ಷನ್​ ಹೌಸ್​​ನೊಂದಿಗೆ ಕೈಜೋಡಿಸಿದ ಡಾರ್ಲಿಂಗ್ ಪ್ರಭಾಸ್?

ಮೋಹನ್​ ಶೆಟ್ಟಿ

ಕರ್ನಾಟಕ: ಆದಿಪುರುಷ್(Adipurush)​ ಚಿತ್ರದ ನಂತರ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್(Darling Prabhas) ಇದೀಗ ಸಾಲು ಸಾಲು ಬಿಗ್ ಬಿಜೆಟ್(Big Budget) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ(Sandalwood) ದೊಡ್ಡ ಪ್ರೊಡಕ್ಷನ್​ ಹೌಸ್​​ನೊಂದಿಗೆ ಹೊಸ ಸಿನಿಮಾ ಮಾಡಲು ಪ್ರಭಾಸ್ ನಿರ್ಧರಿಸಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಬಾಹುಬಲಿ, ಬಾಹುಬಲಿ-2, ಸಾಹೋ ಮತ್ತು ಆದಿಪುರುಷ್ ಚಿತ್ರಗಳು ಸಂಪೂರ್ಣ ಬಿಗ್ ಬಿಜೆಟ್ ಚಿತ್ರಗಳಾಗಿದ್ದು, ಈ ಸಾಲಿಗೆ ಇದೀಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಲು ಸಜ್ಜಾಗಿದೆ.

ಇತ್ತೀಚಿನ ವರದಿ ಅನುಸಾರ, ಕರ್ನಾಟಕದ ಟಾಪ್ ಪ್ರೊಡಕ್ಷನ್ ಹೌಸ್ ಆಗಿರುವ ಕೆವಿಎನ್ ಪ್ರೊಡಕ್ಷನ್‌ನೊಂದಿಗೆ(KVN Production) ಪ್ರಭಾಸ್ ಹೊಸದೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಪ್ರಭಾಸ್ ಮತ್ತು ಚಿತ್ರದ ನಿರ್ದೇಶಕರು ಮುಂದಿನ ಕೆಲಸಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).