ಸಿನಿವಾಣಿ

ಪವರ್​ಸ್ಟಾರ್ ಟ್ರೇಲರ್​ ಲೀಕ್​: ಚಂದಾದಾರರಿಗೆ ಹಣ ವಾಪಾಸ್ ನೀಡ್ತಾರಂತೆ ಆರ್​ಜಿವಿ!

manjunathktgns

ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ, 25 ರೂ ಪಾವತಿಸಿದರೆ ಪವರ್​ಸ್ಟಾರ್ ಚಿತ್ರದ ಟ್ರೇಲರ್​ ತೋರಿಸುವುದಾಗಿ ಹೇಳಿದ್ದರು. 150 ರೂ ಮುಂಗಡ ಬುಕಿಂಗ್​ ಮಾಡಿದರೆ ಸಿನಿಮಾ ತೋರಿಸುತ್ತೇನೆ ಎಂದಿದ್ದರು. ಇದೀಗ ಈ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

ಹೌದು, ಆರ್​ಜಿವಿ ಹೇಳಿಕೊಂಡ ಪ್ರಕಾರ, ಜು. 22 ರಂದು ಚಿತ್ರದ ಟ್ರೇಲರ್​ ಅನ್ನು ಆರ್​ಜಿವಿ ವರ್ಲ್ಡ್​ ಥಿಯೇಟರ್​ನಲ್ಲಿ ಅಪ್​ಲೋಡ್ ಮಾಡಬೇಕಿತ್ತು. ಆದರೆ, ಅಲ್ಲಿ ಅಪ್​ಲೋಡ್​ ಆಗುವುದಕ್ಕೂ ಮುನ್ನವೇ ಚಿತ್ರದ ಟ್ರೇಲರ್​ ಲೀಕ್​ ಆಗಿತ್ತು. ಹಾಗಾಗಿ ಅನಿವಾರ್ಯವಾಗಿ ಸ್ವತಃ ಆರ್​ಜಿವಿ ತಮ್ಮದೇ ಯೂಟ್ಯೂಬ್​ನಲ್ಲಿ ಲಿಂಕ್​ ಶೇರ್​ ಮಾಡಿದ್ದಾರೆ.

ಇತ್ತ ಟ್ರೇಲರ್​ ನೋಡುವ ಸಲುವಾಗಿ ಮುಂಚಿತವಾಗಿ ಸಬ್​ಸ್ಕ್ರೈಬ್​ ಆಗಿದ್ದವರಿಗೆ ಅವರವರ ಹಣವನ್ನು ಮರಳಿಸುವುದಾಗಿಯೂ ಆರ್​ಜಿವಿ ಹೇಳಿದ್ದಾರೆ. ಅಂದಹಾಗೆ ಜು.25ಕ್ಕೆ ಈ ಸಿನಿಮಾ ಆರ್​ಜಿವಿ ವರ್ಲ್ಡ್​ ಥಿಯೇಟರ್ ಆ್ಯಪ್​ನಲ್ಲಿ ಬಿಡುಗಡೆ ಆಗಲಿದೆ.

ಆರ್​ಜಿವಿ ನಿರ್ದೇಶನ ಮೂಡಿಬಂದಿರುವ ಈ ಟ್ರೇಲರ್​ನಲ್ಲಿ ಟಾಲಿವುಡ್​ ನಟ ಪವನ್​ ಕಲ್ಯಾಣ್​ ಅವರ ರಾಜಕೀಯ ಕಥೆಯನ್ನು ಸಿನಿಮಾ ಮಾಡಲಾಗಿದೆ. ಪವನ್​ ಕಲ್ಯಾಣ್​ ಬದಲಿಗೆ ಪ್ರವನ್​ ಕಲ್ಯಾಣ್​ ಎಂದು ಹೆಸರನ್ನೂ ಬದಲಿಸಿದ್ದಾರೆ ನಿರ್ದೇಶಕರು.