ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಯಾರು ನಂಬರ್ 1, ಯಾರು ನಂಬರ್ 2 ಎಂಬ ಪ್ರಶ್ನೆ ಆಗಾಗ ಅಭಿಮಾನಿ ವಲಯದಿಂದ ತೂರಿ ಬರುತ್ತಿರುತ್ತದೆ. ಕೊನೆಗೆ ಅವರವರ ಅಭಿಮಾನಿಗಳೇ ನಮ್ಮ ಹೀರೋ ನಂ 1 ಎಂದು ಹೇಳಿಕೊಂಡು ಖುಷಿ ಪಡುತ್ತಾರೆ. ಇದೀಗ ಈ ಒಂದು ವಿಚಾರವನ್ನು ಅಳತೆಗೋಲಿಗೆ ಹಚ್ಚಿದರೆ, ರಾಕಿಂಗ್ ಸ್ಟಾರ್ ಯಶ್ ನಂ. 1, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಂ. 2 ಎನ್ನಬಹುದು.
ಹೌದು, ಸ್ಯಾಂಡಲ್ವುಡ್ನಲ್ಲಿ ಅತೀ ಹೆಚ್ಚು ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿದವರಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದಾರೆ. ಬರೋಬ್ಬರಿ 2.9 (29 ಲಕ್ಷ) ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಇಲ್ಲಿಯವರೆಗೂ ನಾಯಕರ ಪಟ್ಟಿಯಲ್ಲಿ ಯಶ್ ಹೊರತುಪಡಿಸಿ ಕನ್ನಡದ ಬೇರಾವ ನಟ ಮಿಲಿಯನ್ ಗಡಿ ದಾಟಿರಲಿಲ್ಲ. ಇದೀಗ ಯಶ್ ನಂತರ ಪವರ್ಸ್ಟಾರ್ ಪುನೀತ್ 1 (10ಲಕ್ಷ) ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಹಾಗಾದರೆ ಇನ್ನುಳಿದ ಸ್ಯಾಂಡಲ್ವುಡ್ ಸ್ಟಾರ್ಗಳ ಇನ್ಸ್ಟಾ ಹಿಂಬಾಲಕರೆಷ್ಟು? ಇಲ್ಲಿದೆ ನೋಡಿ ಅದರ ವಿವರ. ರ್ಯಾಪರ್ ಚಂದನ್ ಶೆಟ್ಟಿ 9.5 ಲಕ್ಷ, ಶ್ರೀಮುರಳಿ 7.9 ಲಕ್ಷ ಸುದೀಪ್ 6.8 ಲಕ್ಷ, ರಕ್ಷಿತ್ ಶೆಟ್ಟಿ, 6.4 ಲಕ್ಷ, ಗಣೇಶ್ 5.4 ಲಕ್ಷ, ದರ್ಶನ್, 4.5 ಲಕ್ಷ, ಧ್ರುವ 3.3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.