'ಇಷ್ಟಕಾಮ್ಯ' ಫೇಮ್ನ ಕಾವ್ಯ ಶೆಟ್ಟಿ, 'ನಿಮಗೊಂದು ಸಿಹಿಸುದ್ದಿ' ಎಂಬ ವೆಬ್ಸೀರೀಸ್ನಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದೀರಿ ಎಂಬ ಸುದ್ದಿ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಈಗ ಆ ವೆಬ್ಸೀರೀಸ್ಗೆ ಚಾಲನೆ ಸಿಕ್ಕಿದ್ದು, ಇತ್ತೀಚೆಗೆ ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಕನ್ನಡದಲ್ಲಿ ಮಿಂಚು ಹರಿಸಲಿದ್ದಾನೆ ಮಲಯಾಳಂ ಮುರಳಿ!
ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರಯೋಗಗಳಾಗಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದ್ದು, ಅದೇ 'ನಿಮಗೊಂದು ಸಿಹಿಸುದ್ದಿ'ಯ ವಿಶೇಷತೆ.
ಹೆಣ್ಣು ಗರ್ಭಧರಿಸಿದಾಗ 'ಗುಡ್ ನ್ಯೂಸ್ ಫಾರ್ ಯೂ ...ʼಅಂತ ವೈದ್ಯರು ಹೇಳೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ಲವಾ? ಗಂಡಸು ಗರ್ಭ ಧರಿಸುತ್ತಾನೆ ಅನ್ನೋ ಕಲ್ಪನೆಯೇ ಒಂಥರಾ ವಿಲಕ್ಷಣ ಎನ್ನುವ ವಾತಾವರಣವೇ ಈ ಕ್ಷಣಕ್ಕೂ ಜಗದಗಲ ಚಾಲ್ತಿಯಲ್ಲಿದೆ. ಹೀಗಿರುವಾಗ ಅದನ್ನು ವೆಬ್ ಸರಣಿಯ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ವೆಬ್ಸೀರೀಸ್ ನಿರ್ದೇಶನ ಮಾಡುತ್ತಿರುವವರು ಸುಧೀಂದ್ರ ನಾಡಿಗೇರ್. ಈ ಹಿಂದೆ ಉಪೇಂದ್ರ ಅವರ 'ಟೋಪಿವಾಲಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಅವರು, ಈ ವೆಬ್ಸರಣಿಯ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್ ಬೆರೆಸಿ ಕೊಡು: ರಿಯಾ ವಾಟ್ಸ್ಆ್ಯಪ್ ಚಾಟ್ನಲ್ಲಿದೆ ಮಹತ್ವದ ಸುಳಿವು!
ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ 'ನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ಅನ್ನು ಅನಾವರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರೆಲ್ಲರೂ ಹಾಜರಿದ್ದರು.