ಸಿನಿವಾಣಿ

ಒಂಟಿತನಕ್ಕೆ ಬೈ ಬೈ ಹೇಳಿದ್ರು ಹಾಟ್​ ಬೆಡಗಿ ಪೂನಂ ಪಾಂಡೆ; ಬಹುಕಾಲದ ಗೆಳೆಯನ ಜತೆ ಎಂಗೇಜ್ಡ್..

ಸೋಶಿಯಲ್​ ಮೀಡಿಯಾಗಳಲ್ಲಿ ಹಾಟ್ ಅವತಾರದಲ್ಲಿಯೇ ಪಡ್ಡೆಗಳ ಎದೆ ಝಲ್​ ಎನಿಸುವಂಥ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಹುಕಾಲದ ಗೆಳೆಯನ ಜತೆಗೆ ಉಂಗುರ ಬಲಿಸಿಕೊಂಡು ನಾನೀಗ ಎಂಗೇಜ್ಡ್ ಎಂದಿದ್ದಾರೆ.

ಮುಂಬೈ ಮೂಲದ ಸ್ಯಾಮ್ ಅಹ್ಮದ್​ ಜತೆ ಉಂಗುರು ಬದಲಿಸಿಕೊಂಡಿರುವ ಫೋಟೋವನ್ನು ಶೇರ್​ ಮಾಡಿಕೊಂಡು, ಹರಿದಾಡುತ್ತಿದ್ದ ವದಂತಿಗಳಿಗೆ ಲಾಕ್​ಡೌನ್​ ಹೊತ್ತಲ್ಲೇ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ‘ಬೆಸ್ಟ್ ಫೀಲಿಂಗ್​’ ಎಂದಿದ್ದಾರೆ ಪೂನಂ.

ಇನ್ನು ಜಾಲತಾಣದಲ್ಲಿ ಪೂನಂ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದು, ಇನ್ನು ಮುಂದೆಯೂ ನಿಮ್ಮ ಹಾಟ್​ ಅವತಾರದ ಫೋಟೋಗಳನ್ನು ನೋಡಬಹುದೇ?, ಸ್ಯಾಮ್​ ನೀವು ಅದೃಷ್ಟವಂತ, ಏಕೆಂದರೆ ಪುನಂ ಈಗ ನಿಮ್ಮವರು.. ಹೀಗೆ ಬಗೆಬಗೆಯ ಕಮೆಂಟ್​ಗಳು ಸಂದಾಯವಾಗುತ್ತಿವೆ. ಆದರೆ, ಮದುವ ಯಾವಾಗ ಎಂಬ ಬಗ್ಗೆ ಈ ಜೋಡಿ ಎಲ್ಲಿಯೂ ಮಾಹಿತಿ ನೀಡಿಲ್ಲ.

ಇತ್ತೀಚೆಗಷ್ಟೇ ಪೂನಂ ಪಾಂಡೆ ಮತ್ತು ಪ್ರಿಯಕರ ಸ್ಯಾಮ್​, ಲಾಕ್​ಡೌನ್​ ಉಲ್ಲಂಘನೆ ಆರೋಪ ಹೊತ್ತು ಪೊಲೀಸ​ರ ಅತಿಥಿಯಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಅದೆಲ್ಲದಕ್ಕೂ ತೆರೆಎಳೆದ ಪೂನಂ, ಆ ಹೊತ್ತಿನಲ್ಲಿ ನಾವು ಮನೆಯಲ್ಲಿಯೇ ಟಿವಿ ನೋಡುತ್ತಿದ್ದೇವು ಎಂದಿದ್ದರು. (ಏಜೆನ್ಸೀಸ್​)