ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕತ್ವದ ‘ಪೊಗರು’ ಚಿತ್ರದ ‘ಖರಾಬು.. ಬಾಸು ಖರಾಬು.. ಸುಮ್ನೆ ಓಡೋಗು..’ ಹಾಡು ಏ.2ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಹಾಡು ಮತ್ತೆ ಸದ್ದು ಮಾಡುತ್ತಿದೆ. ಹೌದು, ಕ್ವಾರಂಟೈನ್ ಲಾಕ್ಡೌನ್ ಹೊತ್ತಲ್ಲಿ ಬರೋಬ್ಬರಿ 10 ಮಿಲಿಯನ್ ಬಾರಿ ವೀಕ್ಷಣೆ ಆಗಿದೆ. ಅಂದರೆ, 1ಕೋಟಿಗೂ ಅಧಿಕ ಜನರು ಹಾಡನ್ನು ವೀಕ್ಷಿಸಿದ್ದಾರೆ. ಈ ವಿಚಾರವನ್ನು ಸ್ವತಃ ಧ್ರುವ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಖುಷಿ ಹಂಚಿಕೊಂಡಿದ್ದಾರೆ.
ಹಾಡಿನಲ್ಲಿ ಪಕ್ಕಾ ಟಪೋರಿ ಸ್ಟೈಲ್ನಲ್ಲಿ ಕಾಣಿಸಿಕೊಂಡಿರುವ ಧ್ರುವ, ಮಾಸ್ ಅವತಾರದಲ್ಲಿ ಅಭಿಮಾನಿಗಳನ್ನು ಹಾಡಿನ ಮೂಲಕ ರಂಜಿಸಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಡೈಲಾಗ್ ಟೀಸರ್ ಮೂಲಕ ಅಬ್ಬರಿಸಿದ್ದ ಧ್ರುವ ಕರೊನಾ ಹೊತ್ತಲ್ಲಿ ‘ಪೊಗರಿನ’ ಖರಾಬು ದರ್ಶನ ಮಾಡಿಸಿದ್ದಾರೆ. ಅಂದಹಾಗೆ, ಈ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ ಬರೆದು ಧ್ವನಿ ನೀಡಿರುವುದು ಚಂದನ್ ಶೆಟ್ಟಿ. ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಮಾಡಿದ್ದು, ಬಿ.ಕೆ ಗಂಗಾಧರ್ ಬಂಡವಾಳ ಹೂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಾವಳಿಯಿಂದ ಸಿನಿಮಾ ರಿಲೀಸ್ ಮುಂದೂಡಲಾಗಿದೆ.