Peddi movie Janhvi Kapoor controversy 
ಸಿನಿವಾಣಿ

'ಪೆದ್ದಿ ಸಿನಿಮಾದಲ್ಲಿ ಜಾನ್ವಿರನ್ನು ಐಟಂ ಗರ್ಲ್​ನಂತೆ ತೋರಿಸಿದ್ದಾರೆ' ಎಂದು ಕಿಡಿ; ಕಾಂಟ್ರವರ್ಸಿ ಬೆನ್ನಲ್ಲೇ Buchi Babu Sana ಹೇಳಿದ್ದಿಷ್ಟು

ಪ್ರಮುಖ ಮುಖ್ಯಾಂಶಗಳು

  • 'ಪೆದ್ದಿ' ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಬಿಂಬಿಸಿದ ರೀತಿ ವಿರುದ್ಧ ಪ್ರೇಕ್ಷಕರು ಕಿಡಿ
  • ಪ್ರೇಕ್ಷಕರ ವಿಮರ್ಶೆ ಹಾಗೂ ಭಾವನೆ ಗೌರವಿಸಿ ವಿವಾದಾತ್ಮಕ ಭಾಗವನ್ನು ಪರಿಷ್ಕರಿಸುತ್ತೇವೆ ಎಂದ ನಿರ್ದೇಶಕ
  • ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಯಾವುದೇ ಉದ್ದೇಶ ನಮಗಿರಲಿಲ್ಲ ಎಂದ ಬುಚ್ಚಿಬಾಬು
Peddi movie Janhvi Kapoor controversy: ಟಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ಪೆದ್ದಿ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ವಿಶ್ವದಾದ್ಯಂತ ಬರೋಬ್ಬರಿ 135 ಕೋಟಿ ಗಳಿಕೆ ಕಂಡಿದೆ. ಕೆಡಿ ಸಿನಿಮಾದ ಸೆರಗ ಸರ್ಸೆ ಹಾಡಿನಂತೆ ಪೆದ್ದಿ ಸಹ ವಿವಾದಕ್ಕೆ ಕಾರಣವಾಗಿದೆ.  ಜಾನ್ವಿ ಅವರನ್ನು ನಟಿಯಾಗಿ ತೋರಿಸುವುದಕ್ಕಿಂತ ಐಟಂ ಗರ್ಲ್​​ನಂತೆ ಪ್ರದರ್ಶಿಸಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಪ್ರೇಕ್ಷಕರು ಕೆಂಡ

ಸಿನಿಮಾದಲ್ಲಿ ಜಾನ್ವಿ ಕಪೂರ್​ ನಿರ್ವಹಿಸಿರುವ ಅಚ್ಚಿಯಮ್ಮನನ್ನು ತೋರಿಸಿರುವ ರೀತಿ ಬಗ್ಗೆ ಭಾರಿ ವಿವಾದವೆದ್ದಿದೆ. ಜಾನ್ವಿ ಅವರ ಪಾತ್ರಕ್ಕಿಂತ ಅವರ ದೇಹದ ಸೌಂದರ್ಯವನ್ನೇ ವರ್ಣಿಸಲಾಗಿದೆ. ಹಾಡೊಂದರಲ್ಲಿ ರಾಮ್​ ಚರಣ್​ ಅವರು ಜಾನ್ವಿ ಅವರ ಕಣ್ಣನ್ನು ವಿವರಿಸಿದರೆ ಆಕೆಯ ಎದೆಯನ್ನು ತೋರಿಸುತ್ತಾರೆ. ಇನ್ನು ಕಣ್ಣುಗಳನ್ನು ವಿವರಿಸಿದರೆ,  ಅವಳ ಸೊಂಟ ತೋರಿಸುತ್ತಾರೆ. ನಿರ್ದೇಶಕರು ನಿಜಕ್ಕೂ ಅಜ್ಞಾನಿನ. ಕಣ್ಣು ತುಟಿಗಳು ಏನೆಂದು ನಿಮಗೆ ತಿಳಿದಿಲ್ಲವೇ ಎಂದು ನೆಟ್ಟಿಗರು, ಸಿನಿ ಪ್ರೇಮಿಗಳು ಭಾರಿ ವಾಗ್ದಾಳಿ  ನಡೆಸಿದ್ದಾರೆ. 

ಬುಚ್ಚಿ ಬಾಬು ಸನಾ ಹೇಳಿದ್ದಿಷ್ಟು

ತೀವ್ರ ಟೀಕೆಗೆ ಗುರಿಯಾಗುತ್ತಲೇ ಎಚ್ಚೆತ್ತ  ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಹೇಳಿದ್ದು ಹೀಗೆ, "ನಾನೊಬ್ಬ ಸಿನಿಮಾ ನಿರ್ದೇಶಕನಾಗಿ, ಪ್ರೇಕ್ಷಕರನ್ನು ರಂಜಿಸಬೇಕು, ಪ್ರೇರೇಪಿಸಬೇಕು ಎನ್ನುವುದು ನನ್ನ ಉದ್ದೇಶ. ಇದನ್ನೇ ನಾನು ನಂಬುವುದು. ಆದರೆ, ನನ್ನ ಸಿನಿಮಾದಿಂದ  ಅಗೌರವಿಸುವುದು,  ಮುಜುಗರಕ್ಕೀಡಾಗುವಂತೆ ನಡೆದುಕೊಳ್ಳುವುದು ನನ್ನ ಉದ್ದೇವಾಗಿರಲಿಲ್ಲ. ಪೆದ್ದಿ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಕೇಳಿ ಬಂದಿರುವ ಟೀಕೆ ಹಾಗೂ ಪ್ರತಿಕ್ರಿಯೆಯನ್ನು ನಾವು ಪರಿಗಣಿಸಿದ್ದೇವೆ. ಅದರಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡುತ್ತೇವೆ" ಎಂದು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. 
"ತೆರೆಯ ಮೇಲೆಯೂ ಮತ್ತು ನಿಜ ಜೀವನದಲ್ಲೂ ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವವನ್ನು ನೀಡುತ್ತಾ ಬಂದಿದ್ದೇನೆ. ಯಾವುದೇ ಮಹಿಳಾ ಪಾತ್ರವನ್ನು ವಸ್ತುಪ್ರದರ್ಶನದಂತೆ ತೋರಿಸುವ ಅಥವಾ ಗೌರವ ರಹಿತವಾಗಿ ಬಿಂಬಿಸುವ ಯಾವುದೇ ಉದ್ದೇಶ ನಮಗೆ ಇರಲಿಲ್ಲ. ಒಂದು ವೇಳೆ ಚಿತ್ರದ ಯಾವುದೇ ಭಾಗವು ಆ ರೀತಿ ಬಿಂಬಿತವಾಗಿದೆ ಎಂದು ಜನರಿಗೆ ಅನಿಸಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ. ಸಾರ್ವಜನಿಕರು ಎತ್ತಿರುವ ಕಳಕಳಿಯನ್ನು ನಾವು ಅರ್ಥಮಾಡಿಕೊಂಡಿದ್ದು, ಇದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ" ಎಂದಿದ್ದಾರೆ.

ನೆಟ್ಟಿಗರು ಏನಂದ್ರು?

ಜಾನ್ವಿ ಕಪೂರ್​ನನ್ನು ಐಟಂ ಗರ್ಲ್​ ಎನ್ನುವಂತೆ ಬಿಂಬಿಸಲಾಗಿದೆ.  ಈ ಸಿನಿಮಾ ಮಾತ್ರವಲ್ಲ ಬೇರೆ ಸಿನಿಮಾದಲ್ಲಿಯೂ ಅವರನ್ನು ಹೀಗೆ ನಡೆಸಿಕೊಂಡಿದ್ದಾರೆ. ನಟಿ ಎನ್ನುವುದಕ್ಕಿಂತ ಸೌಂದರ್ಯ ಪ್ರದರ್ಶಿಸಲು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಉದಾಹರಣೆ ಇದೆ ಎಂದಿದ್ದಾರೆ. ನಾಯಕ  ನಟಿಯ ಕಣ್ಣು, ತುಟಿಯನ್ನು ವರ್ಣನೆ ಮಾಡಿದರೆ, ಈ ಕ್ಯಾಮೆರಾ ಹಾಗೂ ಎಡಿಟಿಂಗ್​ಗಳು ಆಕೆಯ ಸೊಂಟ ಸೇರಿದಂತೆ ಇತರ ಭಾಗವನ್ನು ತೋರಿಸುವಂತೆ ಇದೆ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ, (ಏಜೆನ್ಸೀಸ್).