ಸಿನಿವಾಣಿ

ಇಬ್ಬರ ನಡುವೆ ಚಿರಂಜೀವಿ ಪರದಾಟ! ಪವನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ ಮೆಗಾಸ್ಟಾರ್

ಆಂಧ್ರದಲ್ಲಿ ಸಿನಿಮಾಗಳ ಟಿಕೆಟ್ ಬೆಲೆಯನ್ನು ಇಳಿಸಲಾಗಿದ್ದು, ದಿನಕ್ಕೆ ನಾಲ್ಕು ಶೋಗಿಂತ ಹೆಚ್ಚು ನಿಶಿದ್ಧವೆಂಬ ನೀತಿಯನ್ನು ಜಗನ್ ಸರ್ಕಾರ ನವೆಂಬರ್ 26 ರಂದು ಜಾರಿಗೆ ತಂದಿತ್ತು. ಈ ನೀತಿಯನ್ನು ಟಾಲಿವುಡ್‌ನ ಸೆಲೆಬ್ರೆಟಿಗಳು, ವಿರೋಧ ಪಕ್ಷದ ನಾಯಕರು, ಸಾಮಾನ್ಯರು ಖಂಡಿಸಿದರು. ಅಂದಹಾಗೆ, ಈ ನೀತಿಯನ್ನು ಜಾರಿಗೆ ತಂದ ನಂತರ ಬಿಗ್ ಬಜೆಟ್ ಸಿನಿಮಾಗಳನ್ನು ರಿಲೀಸ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಸಣ್ಣ ಪುಟ್ಟ ಸಿನಿಮಾಗಳಂತೂ ಲಸ್ ಅನುಭವಿಸುತ್ತಿವೆ. ಇದೇ ಕಾರಣಕ್ಕೆ ನಟ ಮೆಗಾಸ್ಟಾರ್ ಚಿರಂಜೀವಿ ಹಾಗೂ ಕೆಲ ನಟರು ಸಿಎಂ ಜಗನ್ ಅವರನ್ನು ಫೆಬ್ರವರಿ 10 ರಂದು ಭೇಟಿ ಮಾಡಿದ್ದರು.
ಆ ಭೇಟಿಯ ಪರಿಣಾಮ ಟಿಕೆಟ್ ಬೆಲೆ ಏರಿಸಲು ಹಾಗೂ ವಿಶೇಷ ಪ್ರದರ್ಶನಗಳಿಗೆ ಅವಕಾಶ ನೀಡಲಿದೆ ಸರ್ಕಾರ ಎನ್ನಲಾಗಿತ್ತು. ಈ ವಿಷಯಕ್ಕೆ ಚಿತ್ರತಂಡ ಖುಷಿಯಾಗಿದ್ದರೆ, ಮೆಗಾ ಕುಟುಂವದ, ಪವನ್ ಕಲ್ಯಾಣ್ ಫ್ಯಾನ್ಸ್ ಮಾತ್ರ ಜಗನ್ ಸರ್ಕಾರದ ಹೊಸ ಆರ್ಡರ್ ಪಾಸ್ ಆದರೆ, ಜಗನ್ ಪರವಾಗಿ ಟ್ವೀಟ್ ಮಾಡಬೇಡಿ ಎಂದು ಚಿರಂಜೀವಿಗೆ ಒತ್ತಾಯಿಸಿದ್ದಾರೆ. ಹೌದು, ಹೆಚ್ಚು ಖುಷಿಯಲ್ಲಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿ, ಟ್ವೀಟ್ ಮಾಡಬೇಡಿ ಎಂದು ಫ್ಯಾನ್ಸ್ ಚಿರಂಜೀವಿಗೆ ಒತ್ತಡ ಹೇರುತ್ತಿದ್ದಾರಂತೆ. ಅಂದಹಾಗೆ, ಚಿರುಗೆ ಫ್ಯಾನ್ಸ್ ಟ್ವೀಟ್ ಮಾಡಬೇಡಿ ಎಂದು ಒತ್ತಾಯಿಸುತ್ತಿರುವುದು ಏಕೆ ಅಂತೀರಾ?
ಮೆಗಾ ಸ್ಟಾರ್ ನಟ ಚಿರಂಜೀವಿ ಅವರನ್ನು ಅಭಿಮಾನಿಗಳು ಟ್ವೀಟ್ ಮಾಡದೆ ಇರುವಂತೆ ಒತ್ತಡ ಹೇರಲು ಬಲವಾದ ಕಾರಣ ಎಂದರೆ, ಅದು ಟಾಲಿವುಡ್ ಪವರ್‌ಸ್ಟಾರ್ ಹಾಗೂ ಚಿರಂಜೀವಿ ಅವರ ಸಹೋದರ ನಟ ಪವನ್ ಕಲ್ಯಾಣ್. ಹೌದು, ಪವನ್ ಕಲ್ಯಾಣ್ ಹಾಗೂ ಆಂಧ್ರದ ಸಿಎಂ ಜಗನ್​ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿದೆ. ರಾಜಕೀಯ ವೈಷಮ್ಯ ಮತ್ತು ಜಗಳಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಟ ಪವನ್ ಅವರ ಸಿನಿಮಾ 'ಭೀಮ್ಲಾ ನಾಯಕ್' ಬಿಡುಗಡೆಯಾಗುತ್ತಿದ್ದಂತೆ ಜಗನ್ ಸರ್ಕಾರ ಅದರ ಮೇಲೆ ಸೇಡು ತೀರಿಸಿಕೊಂಡಿದೆ ಎನ್ನುವುದು ಅಭಿಮಾನಿಗಳ ಆರೋಪ.
'ಭೀಮ್ಲಾ ನಾಯಕ್' ಚಿತ್ರ ಕಳೆದ ತಿಂಗಳು ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. 'ಭೀಮ್ಲಾ ನಾಯಕ್' ಸಿನಿಮಾಗೆ ಆಂಧ್ರದಲ್ಲಿ ಬರೋಬ್ಬರಿ 15 ಕೋಟಿ ನಷ್ಟ ಆಗಿದೆ ಎಂದು ವರದಿಗಳು ಕೂಡಾ ಹೇಳುತ್ತಿವೆ. ಹಾಗಾಗಿ, ನಟ ಚಿರಂಜೀವಿ ಅವರಿಗೆ ಮೆಗಾ ಕುಟುಂಬದ ಅಭಿಮಾನಿಗಳು ಜಗನ್ ಸರ್ಕಾರದ ಪರ ಯಾವುದೇ ಟ್ವೀಟ್ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಸದ್ಯ, ಪವನ್ VS ಜಗನ್ ಎಂಬ ಕಿತ್ತಾಟ ನಟ ಚಿರಂಜೀವಿಗೆ ತಲೆಬಿಸಿಯಾದಂತಿದೆ.