ಸಿನಿವಾಣಿ

ಜಾಲತಾಣದಲ್ಲಿ ಕಿಚ್ಚು ಹಚ್ಚಿದ ನಟಿಯ ಬೆತ್ತಲೆ ಫೋಟೋ: ಈಕೆ ಐಪಿಎಲ್​ ಆ್ಯಂಕರ್​ ಸಹ ಹೌದು!

ರಮೇಶ್​ ಕುಮಾರ್​​ ಬಿ ಎಡಮೋಳೆ

ಭುವನೇಶ್ವರ್​: ಒಡಿಶಾದ ಪ್ರಖ್ಯಾತ ಮಾಡೆಲ್​, ಆ್ಯಂಕರ್​ ಹಾಗೂ ನಟಿ ಸುನಿತಾ ಗರಬಾಡು ಅವರು ತಮ್ಮ ಮಾದಕ​ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಇಂಟರ್​ನೆಟ್​ಗೆ ಬೆಂಕಿ ಹಚ್ಚಿದ್ದಾರೆ.

ಸುನಿತಾ ಅವರು ಭಾನುವಾರ ರಾತ್ರಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೆತ್ತಲೆ ಚಿತ್ರವನ್ನು ಅಪ್​ಲೋಡ್​ ಮಾಡಿದ್ದಾರೆ. ಮಿರರ್​ ಸೆಲ್ಫಿಗೆ ನೀಡಿರುವ ಮಾದಕ ಪೋಸ್​ ಇದಾಗಿದ್ದು, "ಸ್ಪೇನ್​ ಬಗ್ಗೆ ಕಲ್ಪನೆ ಮಾಡಿಕೊಳ್ಳುವಾಗ ಸೂರ್ಯ ನೆನೆಸಿದ" ಎಂದು ಅಡಿಬರಹ ನೀಡಿದ್ದಾರೆ.

ಜಾಲತಾಣದಲ್ಲಿ ಸುನಿತಾ ಪೋಸ್ಟ್​ ಸಂಚಲನ ಸೃಷ್ಟಿ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟಿಯ ಧೈರ್ಯವನ್ನು ಮೆಚ್ಚಿದ್ದರೆ, ಇನ್ನು ಕೆಲವರು ಬೆತ್ತಲೆ ಫೋಟೋ ಹಾಕಿದ್ದಕ್ಕೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಸುನಿತಾ ಅವರ ವೃತ್ತಿ ಬದುಕಿನ ವಿಚಾರಕ್ಕೆ ಬಂದರೆ, ಅವರು ಒಡಿಯಾದ ಕೆಲ ಟಿವಿ ಸೀರಿಯಲ್ಸ್​ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಐಪಿಎಲ್​ನಲ್ಲಿ ಆ್ಯಂಕರಿಂಗ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, 2016ರಲ್ಲಿ ನಾಗ್ಪುರದಲ್ಲಿ ನಡೆದ ಟಿ20 ವಿಶ್ವಕಪ್​ ಪಂದ್ಯಗಳಲ್ಲಿಯೂ ಆ್ಯಂಕರಿಂಗ್​ ಮಾಡಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ