ಸಿನಿವಾಣಿ

ಕೊನೇ ಹಂತಕ್ಕೆ ಓ ಮೈ ಲವ್; ಹಾಡಿನ ಚಿತ್ರೀಕರಣದಲ್ಲಿ ಬಿಜಿ..

ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್, ಕೀರ್ತಿ ಕಲ್ಕೆರೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಓ ಮೈ ಲವ್’ ಚಿತ್ರ ಇದೀಗ ಕೊನೇ ಹಂತಕ್ಕೆ ಬಂದು ನಿಂತಿದೆ. ಸ್ಮೈಲ್ ಶ್ರೀನು ನಿರ್ದೇಶನದ ಈ ಚಿತ್ರ ಮಾತಿನ ಭಾಗದ ಶೂಟಿಂಗ್ ಮುಗಿಸಿಕೊಂಡು, ಹಾಡಿನ ಚಿತ್ರೀಕರಣದಲ್ಲಿ ಬಿಜಿಯಾಗಿದೆ.

ಇತ್ತೀಚೆಗಷ್ಟೇ ನಾಗೇಂದ್ರ ಪ್ರಸಾದ್ ಸಾಹಿತ್ಯ ನೀಡಿರುವ, ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿದ ‘ಏನಾಯ್ತೋ ಕಾಣೆ..’ ಹಾಡಿನ ಚಿತ್ರೀಕರಣ ಮುಗಿದಿದ್ದು, ಮೂರು ಹಾಡುಗಳು ಬಾಕಿ ಉಳಿದಿವೆ. ಜಿ. ರಾಮಾಂಜಿನಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ತೆಲುಗು ನಟ ದೇವಗಿಲ್ ಖಳನಾಗಿ ನಟಿಸಿದ್ದಾರೆ.