ಮುಂಬೈ: ಕರೊನಾ ಎಫೆಕ್ಟ್ನಿಂದ ಸಿನಿಮಾ ಇಂಡಸ್ಟ್ರಿಗೆ ಒಂದಲ್ಲ ಒಂದು ರೀತಿ ತೊಂದರೆಯಾಗುತ್ತಿದೆ. ನಷ್ಟದ ಪಟ್ಟಿ ಒಂದೆಡೆ ಸಾಗಿದರೆ, ಸಿನಿಮಾ ಶೂಟಿಂಗ್ ಸ್ಥಗಿತಗೊಂಡು, ನಿರ್ಮಾಪಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತ ಲಾಕ್ಡೌನ್ ನಿಧಾನವಾಗಿ ಸಡಿಲವಾಗುತ್ತಿದೆಯಾದರೂ, ಸದ್ಯಕ್ಕೆ ಸಿನಿಮಾ ಶೂಟಿಂಗ್ಗೆ ಅನುಮತಿ ಇಲ್ಲ. ಎಲ್ಲವೂ ಮೊದಲಿನಂತಾದರೆ ಆಗ ಮಾತ್ರ ಚಿತ್ರೀಕರಣಕ್ಕೆ ಅನುಮತಿ ದೊರಕಲಿದೆ. ಆದರೆ, ಅದೂ ಕಟ್ಟುನಿಟ್ಟಿನ ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಹೀಗಿರುವಾಗಲೇ ಬಾಲಿವುಡ್ನ ನಿರ್ದೇಶಕ ಸೂಜಿತ್ ಸಿರ್ಕಾರ್ ಕರೊನಾ ಎಫೆಕ್ಟ್ ಅನ್ನು ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಲಿಪ್ಲಾಕ್ ಅನ್ನು ಬ್ಯಾನ್ ಮಾಡಿದ್ದಾರಂತೆ. ಅಷ್ಟೇ ಅಲ್ಲ ಲವ್ ಸೀನ್ಗಳನ್ನೂ ಸ್ಕ್ರಿಪ್ಟ್ನಿಂದ ಕಿತ್ತೆಸೆದಿದ್ದಾರಂತೆ.
ಹೌದು, ಕರೊನಾ ಎಫೆಕ್ಟ್ನಿಂದ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ ಸೂಜಿತ್. ನೇರವಾಗಿ ಚುಂಬನದ ಬದಲು, ಗ್ರಾಫಿಕ್ಸ್ ಮೂಲಕ ಸೃಷ್ಟಿಮಾಡಲಿದ್ದಾರಂತೆ. ಲವ್ ಸನ್ನಿವೇಶದ ದೃಶ್ಯಗಳಿಗೂ ಕತ್ತರಿ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲ ಕಡ್ಡಾಯವಾಗಿ ಶೂಟಿಂಗ್ ಸೆಟ್ನಲ್ಲಿ ಮಾಸ್ಕ್ ಮತ್ತು ಗ್ಲೌಸ್ ಹಾಕಿಕೊಳ್ಳುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಸೆಟ್ನಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡುವಂತಿಲ್ಲ. ಅವರ ಪಾತ್ರದ ಶೂಟ್ ಮುಗಿದ ತಕ್ಷಣ ಅವರೇ ವ್ಯಾನ್ನಲ್ಲಿಯೇ ವಿಶ್ರಮಿಸಬೇಕು ಎಂದೂ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)