More

    ಲಾಕ್​ಡೌನ್​ ಹಿನ್ನೆಲೆ; ರಾಮಾಯಣ ಆಯ್ತು, ಮಹಾಭಾರತ ಬಂದಾಗಿದೆ. ಈಗ ಶ್ರೀಕೃಷ್ಣನ ಆಗಮನ; ದೂರದರ್ಶನದಲ್ಲಿ ಶೀಘ್ರದಲ್ಲಿ ಮರು ಪ್ರಸಾರ ಆರಂಭ

    ಮುಂಬೈ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಳೇ ಶೋ, ಧಾರಾವಾಹಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ ದಶಕಗಳ ಹಿಂದೆ ಇತಿಹಾಸ ಸೃಷ್ಟಿಸಿದ್ದ ಎಷ್ಟೋ ಧಾರಾವಾಹಿಗಳು ಮರುಪ್ರಸಾರ ಆರಂಭಿಸಿವೆ. ಇದೀಗ ಆ ಸಾಲಿಗೆ ಕೊಂಚ ತಡವಾಗಿಯಾದರೂ ದರ್ಶನ ಕೊಡಲು ಸಿದ್ಧವಾಗಿದೆ ಶ್ರೀಕೃಷ್ಣ ಧಾರಾವಾಹಿ. ಹೌದು, 1993ರಿಂದ 1996ರವರೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶ್ರೀಕೃಷ್ಣ ಧಾರಾವಾಹಿ ಇದೀಗ ಮತ್ತೆ ಮರುಪ್ರಸಾರಕ್ಕೆ ಅಣಿಯಾಗಿದ್ದು, ಶೀಘ್ರದಲ್ಲಿ ಪ್ರಸಾರದ ದಿನಾಂಕವನ್ನು ದೂರದರ್ಶನದಲ್ಲಿ ಬಿತ್ತರಿಸಲಾಗುವುದು. ಅಂದಹಾಗೆ ಈ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದು ರಾಮಾಯಣ ಖ್ಯಾತಿಯ ರಮಾನಂದ್ ಸಾಗರ್. ಸ್ವಪ್ನಿಲ್ ಜೋಶಿ ಬಾಲ ಕೃಷ್ಣನಾಗಿ ಕಾಣಿಸಿಕೊಂಡರೆ, ಸರ್ವಧಾಮನ್​ ಬ್ಯಾನರ್ಜಿ ವಯಸ್ಕ ಶ್ರೀಕೃಷ್ಣನ ಅವತಾರ ಎತ್ತಿದ್ದಾರೆ. ಈಗಾಗಲೇ ಮರುಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ, ಶಕ್ತಿಮಾನ್​ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts