ಸಿನಿವಾಣಿ

ಸಹೋದರನ ಚಿತ್ರದಲ್ಲಿ ಸೋನಾಕ್ಷಿ: ನಿಖಿತಾ ರಾಯ್ ಮೂಲಕ ಕುಶ ಸಿನ್ಹಾ ನಿರ್ದೇಶಕ

ಸೋನಾಕ್ಷಿ ಸಿನ್ಹಾ ಇತ್ತೀಚಿನ ದಿನಗಳಲ್ಲಿ ಹೊಸ ಚಿತ್ರಗಳು ಮತ್ತು ಪಾತ್ರಗಳಿಂದ ಸುದ್ದಿಯಾಗಿದ್ದಕ್ಕಿಂತ ಜಹೀರ್ ಇಕ್ಬಾಲ್ ಜತೆಗಿನ ಒಡನಾಟಕ್ಕೆ ಹೆಚ್ಚು ಸುದ್ದಿಯಲ್ಲಿದ್ದರು. ಈಗ ಬಹಳ ದಿನಗಳ ನಂತರ ಅವರು ಚಿತ್ರವೊಂದರ ಸಂಬಂಧ ಸುದ್ದಿಯಲ್ಲಿದ್ದಾರೆ.

ಸೋನಾಕ್ಷಿ ಇದೀಗ ‘ನಿಖಿತಾ ರಾಯ್ ಆಂಡ್ ದಿ ಬುಕ್ ಆಫ್ ಡಾರ್ಕ್​ನೆಸ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ವಿಶೇಷವೆಂದರೆ ಈ ಚಿತ್ರವನ್ನು ಅವರ ಸಹೋದರ ಕುಶ ಸಿನ್ಹಾ ನಿರ್ದೇಶನ ಮಾಡುತ್ತಿದ್ದಾರೆ. ಗುರುವಾರ, ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಈ ಪೋಸ್ಟರನ್ನು ಸೋನಾಕ್ಷಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ನಟಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. (ಏಜೆನ್ಸೀಸ್)