ಸಿನಿವಾಣಿ

ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ

ಕೊಚ್ಚಿ: ಜವಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಸಮಾಜದಲ್ಲಿ ಗುರುತಿಸಿಕೊಂಡಿರುವರು ಮಾತನಾಡುವಾಗ ಎಚ್ಚರವಹಿಸಬೇಕು. ಯಾಕೆಂದರೆ ಅವರನ್ನು ಅನುಸರಿಸುವವರು ಹಲವರು ಇರುತ್ತಾರೆ. ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುವ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ಬೇಡವಾದ ವಿಚಾರಗಳನ್ನು ಹೇಳಿದರೆ, ಹಲವರ ಕೆಂಗಣ್ಣಿಗೆ ಗುರಿಯಾಬೇಕಾಗುತ್ತದೆ. ಇದೀಗ ಮಲಯಾಳಂ ನಟಿ ಕೂಡ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಮಲಯಾಳಂ ನಟಿ ನಿಮಿಷಾ ಸಾಜಯನ್​ ಅವರು ಬೋಲ್ಡ್​ ಪಾತ್ರಗಳಿಂದಲೇ ಹೆಚ್ಚು ಸದ್ದು ಮಾಡಿರುವ ನಟಿ. ದಿ ಗ್ರೇಟ್​ ಇಂಡಿಯನ್​ ಕಿಚನ್​, ತೊಂಡಿಮುತಾಳುಂ ದೃಕ್ಷಾಕ್ಷಿಯುಂ ಮತ್ತು ಮಲಿಕ್ ಸಿನಿಮಾಗಳಲ್ಲಿ ತಮ್ಮ ಬೋಲ್ಡ್​ ನಟನೆಯ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ. ಅಲ್ಲದೆ, ತಮ್ಮ ಅತ್ಯುತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದೀಗ ನಿಮಿಷಾ ಸಾಜಯನ್​ ಅವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಅಂದರೆ, ಬೆತ್ತಲೆ ಮಹಿಳೆಯ ಚಿತ್ರವನ್ನು ಬಿಡಿಸಲಾಗಿದ್ದು, ಅದರ ಮೇಲೆ ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.

ಇಂಗ್ಲಿಷ್​ನಲ್ಲಿ ಏನೆಂದು ಬರೆಯಲಾಗಿದೆ ಅಂದರೆ, ಕೆಲವು ರಾತ್ರಿಗಳಲ್ಲಿ ನಾನು ನನ್ನ ಕೂದಲಿನ ಮೂಲಕ ಮತ್ತು ನನ್ನ ತೊಡೆಯ ಉದ್ದಕ್ಕೂ ನನ್ನ ಬೆರಳುಗಳೊಂದಿಗೆ ಚಲಿಸುತ್ತೇನೆ. ನನ್ನ ಕಣ್ಣುಗಳು ಮುಚ್ಚಲ್ಪಟ್ಟಿರುತ್ತವೆ. ಆದರೆ, ನನ್ನ ತಲೆಯ ತುಂಬಾ ನಿಮ್ಮ ಆವೃತ್ತಿಗಳಿಂದ ತುಂಬಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ನಿಮಿಷಾ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದು, ಅದನ್ನು ಪೋಸ್ಟ್ ಮಾಡಿ ಕಾಮೆಂಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರ-ವಿರೋಧ ಚರ್ಷಚೆಯಾಗುತ್ತಿದೆ. ನಿಮಿಷಾ ಅವರ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿದ್ದಾರೆಯೇ ಎಂದು ಕೆಲ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕೆಲ ಅಭಿಮಾನಿಗಳು ನಿಮಿಷಾ ಅವರ ಎದೆಗಾರಿಕೆಯನ್ನು ಮೆಚ್ಚಿದ್ದಾರೆ. ಇನ್ನು ಕೆಲವರು ನಿಷಿಮಾ ಮಾತುಗಳಿಂದ ಕೆರಳಿದ್ದು, ಆಕ್ರೋಶ ಹೊರಹಾಕಿದ್ದಾರೆ. ನಿಮ್ಮಿಂದ ಅಶ್ಲೀಲ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)