ಹಳ್ಳಿಯಲ್ಲಿ ಮನೆ, ಮರಗಿಡ, ಪ್ರಾಣಿಪಕ್ಷಿ ನಡುವೆ ಬದುಕು ಕಟ್ಟಿಕೊಂಡಿದ್ದ ನಾನಾ ಪಾಟೇಕರ್
ಸ್ಟಾರ್ಡಮ್ನಿಂದ ನಾನಾ ಪಾಟೇಕರ್ ದೂರದೂರ, ರೈತರು ಪರಿಸರದ ಜೊತೆಗೆ ಜೀವನ
27 ಎಕರೆ ಫಾರ್ಮ್ ಹೌಸ್ನಲ್ಲಿ ವ್ಯವಸಾಯ, ಸಾಕು ಪ್ರಾಣಿ ಸಾಕಾಣಿಕೆಯೊಟ್ಟಿಗೆ ಬೆಳೆದ ನಾನಾ
Nana Patekar’s 27-acre farmhouse in Khadakwasla Pune: ಬಾಲಿವುಡ್ ತಾರೆಯರು ಮುಂಬೈ ಸುತ್ತ ಕೋಟಿ ಕೋಟಿ ಸುರಿದು ಬಂಗಲೆ, ಪಬ್, ಹೋಟೆಲ್ ಕಟ್ಟಿದರೆ, ದಶಕಗಳ ಕಾಲ ಸಿನಿ ಲೋಕದಲ್ಲಿ ಮಿಂಚಿದ ನಾನಾ ಪಾಟೇಕರ್ ಮಾತ್ರ ಗ್ಲಾಮರ್ ಲೋಕದಿಂದ ಮೈಲು ದೂರವಿದ್ದರು. ಅವರ ನಿವಾಸದಲ್ಲಿ ದುಬಾರಿ ಫ್ರೇಮ್‌ಗಳಿಲ್ಲ, ಹೈ-ಪ್ರೊಫೈಲ್ ಭದ್ರತೆಯಿಲ್ಲ. ಬದಲಾಗಿ ಇರುವುದು ಹಸಿರು ಮರಗಳು, ಪ್ರಾಣಿಗಳು ಮತ್ತು ಶಾಂತಿಯುತ ಹಳ್ಳಿ ಬದುಕು. ಪುಣೆಯ ಸಿಂಹಗಡದ ತಪ್ಪಲಿನ ದೋಂಜೆ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಅವರು ಕಟ್ಟಿಕೊಂಡಿದ್ದ ಸರಳ ಬದುಕೇ ಅವರನ್ನು ಸ್ಟಾರ್ ಡಮ್ನಿಂದ ಹೊರಗಿಟ್ಟಿತ್ತು. ಮಹಾರಾಷ್ಟ್ರದ ಪುಣೆಯ ಸಿಂಹಗಡದ ತಪ್ಪಲಿನಲ್ಲಿರುವ ದೋಂಜೆ ಗ್ರಾಮದಲ್ಲಿ ನಾನಾ ಪಾಟೇಕರ್ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಹಳ್ಳಿ ಜೀವನವನ್ನು ಬದುಕುತ್ತಿದ್ದರು ನಾನಾ ಪಾಟೇಕರ್.
ಬಾಲಿವುಡ್ನಲ್ಲಿ ದಶಕಕ್ಕೂ ಹೆಚ್ಚು ಕಾಲ ಮರೆಯಾದ ಮಿಂಚಿ ನಾನಾ ಪಾಟೇಕರ್ ಹೃದಯಾಘಾತದಿಂದ ಇಂದು ಅ.8ರಂದು ಅವರ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯು ಸಿನಿಮಾರಂಗಕ್ಕೆ ತುಂಬಲಾರದ ನಷ್ಟ. ನಟ ಅಕ್ಷಯ್ ಕುಮಾರ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅವರ ಅಂತಿಮ ವಿಧಿ ವಿಧಾನವು ನೆಮ್ಮದಿಯ ತಾಣವಾಗಿದ್ದ ಅವರ ಫಾರ್ಮ್‌ಹೌಸ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ಪುಣೆ ಬಳಿಯ ಖಡಕ್‌ವಾಸ್ಲಾದಲ್ಲಿರುವ 27 ಎಕರೆ ವಿಸ್ತೀರ್ಣದಲ್ಲಿ ನಾನಾ ಪಾಟೇಕರ್ ಫಾರ್ಮ್ ಹೌಸ್ ಇತ್ತು. ಇಲ್ಲಿ ನಿವಾಸವಷ್ಟೇ ಅಲ್ಲ. ಗೋಧಿ, ಅಕ್ಕಿ, ಬೇಳೆ ಕಾಳು ಸೇರಿದಂತೆ ಇತರ ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಕ್ಯಾಮೇರಾಗಳಿಂದ ದೂರ ಇರುತ್ತಿದ್ದ ಅವರು, ಅಡುಗೆ ಮಾಡುತ್ತಿದ್ದರು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ರೈತರಿಗಾಗಿ ಹಣ ಖರ್ಚು ಮಾಡುತ್ತಿದ್ದರು. ತಮಗೆ ಸಿಗುವ ಹಣದಲ್ಲಿ ಶೇ.90ರಷ್ಟು ಹಣವನ್ನು ಸಾಮಾನ್ಯ ಜನರ ಏಳಿಗೆಗಾಗಿ ವ್ಯಯಿಸುತ್ತಿದ್ದರು. ಜಮೀನಿನಲ್ಲಿ ಕೆಲಸ ಮಾಡುವ ರೈತರ ಬಗ್ಗೆ ಅವರಿಗೆ ಅಪಾರ ಗೌರವವಿತ್ತು.
ನಾನಾ ಪಾಟೇಕರ್ ಅವರು ಎಂದಿಗೂ ಬಾಲಿವುಡ್ ಸ್ಟಾರ್ ನಟರಂತಲ್ಲ. ದುಬಾರಿ ಕಟ್ಟಡ, ಆಳು, ಕಾಳು, ದುಬಾರಿ ಪೀಠೋಪಕರಣವನ್ನು ಹೊಂದಿರಲಿಲ್ಲ. ಬದಲಾಗಿ, ಅವರ ಫಾರ್ಮ್ ಹೌಸ್ ಸುತ್ತ ಹಸಿರು ನೆಲ, ಮರ ಗಿಡ, ತೆಂಗು, ಅಚ್ಚ ಹಸಿರು ಹುಲ್ಲು, ಹಸುಗಳು, ಎತ್ತುಗಳು, ಆಡುಗಳು ಮತ್ತು ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದರು. ಸರಳವಾದ ಮರದ ಪೀಠೋಪಕರಣಗಳು ಮತ್ತು ಟೆರಾಕೊಟಾ ನೆಲಹಾಸಿನೊಂದಿಗೆ ಕೂಡಿತ್ತು.
ನಾನಾ ಮಾಡುತ್ತಿದ್ದ ಪ್ರಮುಖ ಕೆಲಸಗಳಲ್ಲಿ ಒಂದು ಎಂದರೆ, ಅದು ಹೊಲಗಳಲ್ಲಿ ನಡೆದಾಡುವುದು, ಬೆಳೆಗಳನ್ನು ಬೆಳೆಯುವುದು. ಸಾಮಾನ್ಯರೊಟ್ಟಿಗೆ ಕಾಲ ಕಳೆಯುವುದು, ಅಡುಗೆ ಮಾಡಿಕೊಳ್ಳುವುದು. ತಮ್ಮ ಫಾರ್ಮ್‌ನಲ್ಲಿದ್ದ ಪ್ರಾಣಿಗಳೊಂದಿಗೆ ಕುಳಿತುಕೊಳ್ಳುವುದು ಇವರ ಏಕೈಕ ಅಭ್ಯಾಸವಾಗಿತ್ತು.
ಮಾನವ ಲೋಕದ ಕೃತಕತೆಗೆ ಬೇಸತ್ತಾಗ ಪ್ರಕೃತಿಯತ್ತ ಹೊರಳುತ್ತೇನೆ. ಇಲ್ಲಿ ಮರ, ಹೊಲ, ಹಾಗೂ ಪ್ರಾಣಿಗಳೊಟ್ಟಿಗೆ ಕಳೆಯುವ ಕ್ಷಣವು ಮನಸ್ಸಿಗೆ ಹಿತವೆನಿಸುತ್ತದೆ. ಶಾಂತಿ ಸಿಗುತ್ತದೆ. ಇಲ್ಲಿ ಯಾವುದೇ ಧರ್ಮ, ಪಂಥ, ಜಾತಿ ಅಥವಾ ಬಣ್ಣ ಆಧಾರದ ಮೇಲೆ ಬೇಸರ ಮಾಡುವವರಿಲ್ಲ ಎಂದು ತಮ್ಮ ಸರಳ ಜೀವನದ ಬಗ್ಗೆ ನಾನಾ ಪಾಟೇಕರ್ ಅವರು ಹಿಂದೊಮ್ಮೆ ಮಾಧ್ಯಮದ ಜೊತೆಗೆ ಮಾತನಾಡಿದ್ದರು.
ನಾನಾ ಪಾಟೇಕರ್ ಸಾಮಾನ್ಯ ಮನುಷ್ಯರಲ್ಲ. ಅವರು ಆರ್ಥಿಕ ಸಂಕಷ್ಟವನ್ನು ಎದುರಿಸಿ ಬಂದವರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವವರೆಗೂ ಅಸಾಧಾರಣ ಬದುಕು ಕಂಡುಕೊಂಡವರು. ಅವರು ನಟ ಮಾತ್ರವಲ್ಲ ನಿರ್ದೇಶಕರು ಹೌದು. 'ಪರಿಂದಾ', 'ಕ್ರಾಂತಿವೀರ್', 'ಅಗ್ನಿ ಸಾಕ್ಷಿ', 'ನಟಸಮ್ರಾಟ್' ಮತ್ತು 'ವೆಲ್ಕಮ್' ಇವರ ಅದ್ಭುತ ಸಿನಿಮಾಗಳಿವು.
ಹಿಂದಿನ ಸಂದರ್ಶನವೊಂದರಲ್ಲಿ, ಅವರು ನಾನಾ ತಮ್ಮ ಅಂತಿಮ ವಿಧಿವಿಧಾನಗಳ ಬಗ್ಗೆ ಬಹಳ ನೇರವಾಗಿ ಮಾತನಾಡಿದ್ದರು. ಅಂತ್ಯಸಂಸ್ಕಾರಕ್ಕಾಗಿ ಮರವನ್ನು ತೆಗೆದಿರಿಸಿದ್ದೇನೆ. ಮರದಲ್ಲೇ ನನ್ನನ್ನು ಸುಡಬೇಕು ಎಂದು ಮಾತನಾಡಿದ್ದರು,
ಒಟ್ಟಾರೆಯಾಗಿ, ನಾನಾ ಪಾಟೇಕರ್ ಸುತ್ತ ಸದಾ ಕ್ಯಾಮೆರಾ ಸುತ್ತುಕೊಳ್ಳುತ್ತಿದ್ದರೂ ಸಹ ಅವರು ಆರಿಸಿಕೊಂಡಿದ್ದು ನೆಮ್ಮದಿಯ ಬದುಕು. ಯಾವುದೇ ಆಡಂಬರವಿಲ್ಲದೆ, ಖಾದಿ ಬಟ್ಟೆಗಳನ್ನು ತೊಟ್ಟು ನಾನಾ ಹೊಲ, ಗದ್ದೆ, ಬೆಳೆ, ರೈತರು ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು, (ಏಜೆನ್ಸೀಸ್).