

ನಾನಾ ಪಾಟೇಕರ್ ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್ ತಾರೆಯರು
ಅಕ್ಷಯ್ ಕುಮಾರ್, ಸ್ಮೃತಿ ಇರಾನಿ ಸೇರಿದಂತೆ ಹಲವರಿಂದ ಸಂತಾಪ
ಲಾರಿ ಬಂದು ಡಿಕ್ಕಿ ಹೊಡೆದಂತೆ ಭಾಸವಾಗುತ್ತಿದೆ ಎಂದ ರಿತೇಷ್ ದೇಶ್ ಮುಖ್
'ಪ್ರಯತ್ನವನ್ನೇ ಪಡದೆ ಗಮನ ಸೆಳೆಯುವ ಅಪರೂಪದ ನಟ. ಅವರ ಧ್ವನಿ, ತೀವ್ರತೆ, ಪ್ರತಿಯೊಂದು ಪಾತ್ರದಲ್ಲಿ ಅವರಿಗಿದ್ದ ಪ್ರಾಮಾಣಿಕತೆ ಸೇರಿದಂತೆ ಎಲ್ಲ ವಿಚಾರದಲ್ಲಿ ಅವರು ವಿಭಿನ್ನ. ಅವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಲು ಮನಸ್ಸಿಗೆ ತುಂಬಾ ಘಾಸಿಯಾದಂತೆ ಭಾಸವಾಗುತ್ತಿದೆ' ಹೀಗೆಂದು ನಟ ಸಾರ್ವಭೌಮ ನಾನಾ ಪಾಟೇಕರ್ ಬಗ್ಗೆ ಮನದಾಳದ ಮಾತನ್ನು ಹೊರ ಹಾಕಿದ್ದು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು.
ಬಾಲಿವುಡ್ನ ನಟ ಸಾರ್ವಭೌಮ ನಾನಾ ಪಾಟೇಕರ್ ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಿಗ್ಗೆ 5:20ಕ್ಕೆ ತಮ್ಮ ನಿವಾಸದಲ್ಲಿ ಹೃದಯಘಾತಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು 45 ನಿಮಿಷ ಸಿಪಿಆರ್ ನಡೆಸಿದರು, ಬದುಕುಳಿಯಲಿಲ್ಲ.ಮೆಡಿಕೋ ಲೀಗಲ್ ಕೇಸ್ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಣಿಪಾಲ್ ಆಸ್ಪ್ಪತ್ರೆಯ ವೈದ್ಯ ಡಾ. ಶೇಖರ್ ಸಾಲ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ನಾನಾ ಪಾಟೇಕರ್ ಅವರ ನಿಧನ ಸುದ್ದಿಯು ಇಡೀ ಭಾರತೀಯ ಚಿತ್ರರಂಗಕ್ಕೆ ಅಘಾತವನ್ನುಂಟು ಮಾಡಿದೆ. ನಾನಾ ಪಾಟೇಕರ್ ಬಹುಭಾಷಾ ನಟ ಅವರು ತಮಿಳು, ಕನ್ನಡ, ಹಿಂದಿ, ಮರಾಠಿ ಸೇರಿಂದತೆ ವಿವಿಧ ಭಾಷೆಯಲ್ಲಿ 75ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ, ಗಮನ ಸೆಳೆದಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್ ಸೇರಿದಂತೆ ಸಿನಿಮಾರಂಗದ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
'ನಾನಾ ಪಾಟೇಕರ್ ಅವರು ನಿಧನರಾದ ಸುದ್ದಿಯು ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಪ್ರಯತ್ನವೇ ಪಡದೆ ಗಮನ ಸೆಳೆಯುವ ವಿಭಿನ್ನ ವ್ಯಕ್ತಿತ್ವದ ನಟ ನಾನಾ ಪಾಟೇಕರ್. ವೆಲ್‌ಕಮ್' ಸಿನಿಮಾದಿಂದ ಹಿಡಿದು, ಇತ್ತೀಚೆಗೆ ರಿಲೀಸ್ ಆಗಿದ್ದ 'ಹೌಸ್‌ಫುಲ್ 5' ಸಿನಿಮಾದವರೆಗೂ ಅವರೊಂದಿಗೆ ನಟಿಸಿದ್ದೇನೆ. ಅವರೊಂದಿಗೆ ಕೆಲಸ ಮಾಡಲು ಸಿಕ್ಕ ಅವಕಾಶ ನನ್ನ ಅದೃಷ್ಟ. ನಾನಾ ಜಿ ನೀವು ನಿಜಕ್ಕೂ ಒಬ್ಬ ಭಾವನಾತ್ಮಕ, ದಯಾಳು ಸ್ವಭಾವದ ಜೀವಿ. ನೀವು ಅಗಲಿರುವ ವಿಚಾರ ನಂಬಲು ಕಷ್ಟವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ನನಗೆ ಮಾತೆ ಹೊರಡುತ್ತಿಲ್ಲ. ಬೆಳ್ಳಂಬೆಳಗ್ಗೆ ಲಾರಿಯೊಂದು ಜೋರಾಗಿ ಬಂದು ಡಿಕ್ಕಿ ಹೊಡೆದಂತೆ ಭಾಸವಾಗುತ್ತಿದೆ. ಶ್ರೇಷ್ಠ ನಟ, ಅವರ ವಿಶಿಷ್ಟ ಶೈಲಿಯ ನಟನೆಯಿಂದಾಗಿ ಜನರ ಮನ ಗೆದ್ದು ಕೊಂಡಿದ್ದರು. ಅವರು ನಟಿಸದ ಪಾತ್ರಗಳಿಲ್ಲ. ಭಯಾನಕ ಖಳನಾಯಕ, ಕಾಮಿಡಿ ಪಾತ್ರ ಎಲ್ಲವನ್ನೂ ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು.
ಅವರು ತೆರೆಮೇಲೆ ಮಾತ್ರವಲ್ಲ ಹಿಂದೆಯೂ ಒಬ್ಬ ಉತ್ತಮ ನಾಯಕ. ಮಧ್ಯಮ ವರ್ಗ ಹಾಗೂ ಬಡ ಜನರ ಒಳಿತಿಗಾಗಿ ತಮ್ಮ ಚಾರಿಟಿ ಮೂಲಕ ಕೆಸಲ ಮಾಡುತ್ತಿದ್ದರು. 'ಬ್ಲಫ್‌ಮಾಸ್ಟರ್' ಮತ್ತು 'ಹೌಸ್‌ಫುಲ್ 5' ಚಿತ್ರಗಳಲ್ಲಿ ಅವರೊಂದಿಗೆ ತೆರೆ ಹಂಚಿಕೊಳ್ಳುವ ಸೌಭಾಗ್ಯ ನನಗೆ ಸಿಕ್ಕಿತು, ಆದರೆ, ಮರಾಠಿ ಸಿನಿಮದಲ್ಲಿ ನಟಿಸುವ ಆಸೆ ಇತ್ತು ಈಡೇರಲಿಲ್ಲ. ಈಗದು ಕನಸಾಗಿ ಉಳಿದಿದೆ ಎಂದು ಬರೆದುಕೊಂಡಿದ್ದಾರೆ ರಿತೇಶ್ ದೇಶ್ಮುಖ್.
ನಿಮ್ಮ ಮಾರ್ಗದರ್ಶನಕ್ಕೆ, ನನ್ನೊಂದಿಗೆ ನಡೆಸಿದ ಮಾತುಕತೆಗಳಿಗೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ, ಒಟ್ಟಿಗೆ ನಕ್ಕ ಕ್ಷಣಗಳಿಗೆ ಮತ್ತು ಒಬ್ಬ ವ್ಯಕ್ತಿಯಾಗಿ ನನ್ನನ್ನು ಶ್ರೀಮಂತಗೊಳಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ರಿತೇಶ್ ದೇಶ್ಮುಖ್ ಸಂತಾಪ ಸೂಚಿಸಿದರು.
ನನ್ನ ಪ್ರೀತಿಯಾ ನಾನಾ ಪಾಟೇಕರ್. ನಿಮ್ಮ ನೆನಪು ನನಗೆ ಕಾಡುತ್ತಿದೆ. ನಾವು ಒಟ್ಟಾಗಿ ಕಳೆದ ಕ್ಷಣ, ಮಾತುಕತೆಗಳು, ವಾಗ್ವಾದಗಳು, ನೀವು ಅಡುಗೆ ಮಾಡಿದ್ದು, ನೀವು ಹಂಚಿಕೊಂಡ ಜ್ಞಾನ ಎಲ್ಲವನ್ನೂ ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ನನ್ನ ಜೀವನದ ಪಯಣದಲ್ಲಿ ಒಟ್ಟಾಗಿದ್ದಕ್ಕೆ ಧನ್ಯವಾದ. ಶಾಂತಿ ಸಿಗಲಿ ಎಂದು ನಟ ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ.
ಜಗತ್ತು ನಾನಾ ಪಾಟೇಕರ್ ಎಂದರೆ ನಾನು ಅವರನ್ನು ದಾದಾ ಎಂದು ಕರೆಯುತ್ತಿದ್ದೆ. ನಾವು ಒಟ್ಟಿಗೆ ಕಳೆದ ಕ್ಷಣಗಳ ಫೋಟೋಗಳನ್ನು ತೆಗೆದಿದ್ದೇ ಅಪರೂಪ. ಬಹುಶಃ ಫೋಟೋಗಳು ಮಾತ್ರವೇ ನನ್ನ ಬಳಿ ಉಳಿಯುವ ಒಂದು ದಿನ ಬರುತ್ತದೆ ಎಂದು ಊಹಿಸಿರಲಿಕ್ಕಿಲ್ಲ. ನನ್ನ ಬಳಿ ಇರುವ ಅತ್ಯಂತ ಆಪ್ತವಾದ ನೆನಪುಗಳಲ್ಲಿ, ಅವರು ನನಗೆ ಅಡುಗೆ ಮಾಡಿಕೊಟ್ಟ ಕ್ಷಣವೂ ಒಂದು. ಕೊನೆಯ ಸಂಭಾಷಣೆ ಇನ್ನೂ ನೆನಪಿದೆ. ಪುಣೆಗೆ ಬಾ, ಯಾವಾಗ ಬರುತ್ತೀಯ?. ನಾನು "ಶೀಘ್ರದಲ್ಲೇ ಬರುತ್ತೇನೆ" ಎಂದಿದ್ದೆ. ಆದರೆ ಆ "ಶೀಘ್ರ" ಅಷ್ಟು ಬೇಗ ಬರುತ್ತದೆ ಎಂದು ಊಹಿಸಿರಲಿಲ್ಲ. ಮತ್ತೊಂದು ಲೋಕದಲ್ಲಿ ಭೇಟಿಯಾಗೋಣ, ದಾದಾ ಎಂದು ಸ್ಮೃತಿ ಇರಾನಿ ನೆನೆದು, ಸಂತಾಪ ಸೂಚಿಸಿದ್ದಾರೆ.
ಹೌದು, ಯಾರೂ ಅಮರರಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ನಾನಾ ಪಾಟೇಕರ್ ಅವರಂತಹ ಬಲಶಾಲಿ ವ್ಯಕ್ತಿ ಇಷ್ಟು ಬೇಗ ನಿಧನರಾಗುತ್ತಾರೆ ಎನ್ನುವುದನ್ನು ನಂಬಲಾಗುತ್ತಿಲ್ಲ. ನಟನೆಯ ದೇವರೆಂದೇ ಕರೆಯಲ್ಪಡುವ ನಾನಾ ಪಾಟೇಕರ್ ಅವರನ್ನು ಬಲಿ ತೆಗೆದುಕೊಂಡ ಆ ದೇವರನ್ನೇ ಕೊಂದುಬಿಡಬೇಕೆನಿಸುತ್ತಿದೆ ಎಂದು ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸಂಸದೆ, ನಟಿ ಕಂಗನಾ ರಣಾವತ್, ನಟಿ ರವೀನಾ ಟಂಡನ್, ಸುನೀಲ್ ಶೆಟ್ಟಿ ಹಾಗೂ ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್, ಊರ್ಮಿಳಾ ಮಾತೋಂಡ್ಕರ್, ಪ್ರಭುದೇವ, ಸನ್ನಿ ಡಿಯೋಲ್, ರವಿ ಕಿಶನ್ ಸೇರಿದಂತೆ ರಾಜಕೀಯ ಗಣ್ಯರು ನಾನಾ ಪಾಟೇಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, (ಏಜೆನ್ಸೀಸ್).