ತಮ್ಮ ಧೂಮಪಾನದ ಚಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ನಟ ನಾನಾ ಪಾಟೇಕರ್ 
ಸಿನಿವಾಣಿ

ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್… ಆ ಮಹಾ ಚಟದಿಂದ ಹೊರಬಂದಿದ್ದು ಹೇಗೆ ಗೊತ್ತಾ? Nana Patekar Smoking

ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಟ ನಾನಾ ಪಾಟೇಕರ್ ಆ ಮಹಾ ಚಟಕ್ಕೆ ಏಕಾಏಕಿ ಗುಡ್‌ಬೈ ಹೇಳಿದ್ದು ಹೇಗೆ? ತಂಗಿಯ ಆ ಒಂದು ಮಾತು ಬದುಕನ್ನೇ ಬದಲಿಸಿದ ರೋಚಕ ಘಟನೆಯ ವಿವರ ಇಲ್ಲಿದೆ.

ಮುಂಬೈ: ಬಾಲಿವುಡ್​ನ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್​ (75) ಗುರುವಾರ (ಅ.8) ತೀವ್ರ ಹೃದಯಾಘಾತದಿಂದ ಗೋವಾದಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.

ನಾನಾ ಪಾಟೇಕರ್​, ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ 5.20 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕುಟುಂಬದವರು ಪಣಜಿಯ ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾನಾ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಾನಾ ಅವರ ಜೀವನಶೈಲಿ, ಸಿನಿಮಾ ಜೀವನ ಹಾಗೂ ಬದುಕಿನ ಸುತ್ತಲಿನ ಹಲವು ಘಟನೆಗಳು ಈಗ ಮತ್ತೆ ಚರ್ಚೆಗೆ ಹಾಗೂ ಮುನ್ನಲೆಗೆ ಬರುತ್ತಿವೆ.

ದಿನಕ್ಕೆ 60 ಸಿಗರೇಟ್​ ಸೇದುತ್ತಿದ್ದ ನಾನಾ!

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ನಾನಾ ಪಾಟೇಕರ್​ ತಮ್ಮ ಸಿಗರೇಟ್​ ಸೇದುವ ಚಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ನಾನಾ ಹೇಳುವಂತೆ ಅವರು ದಿನಕ್ಕೆ 20 ರ ಮೂರು ಪ್ಯಾಕ್​ ಎಂದರೆ ಭರ್ತಿ 60 ಸಿಗರೇಟನ್ನು ಸೇದುತ್ತಿದ್ದರಂತೆ. ನಾನು ದಿನವೀಡಿ ಸಿಗರೇಟ್​ ಸೇದುತ್ತಲೇ ಇರುತ್ತಿದೆ. ಊಟ ಮಾಡುವಾಗ, ಸ್ನಾನ ಮಾಡುವಾಗ, ಟಿವಿ ನೋಡುವಾಗ ಎಲ್ಲಾ ಸಮಯದಲ್ಲಿ ನನಗೆ ಸಿಗರೇಟ್​ ಬೇಕೇ ಬೇಕಿತ್ತು. ನಾನು ನನ್ನ ಕಾರಿನಲ್ಲಿ ಸಹ ಸಿಗರೇಟ್​ ಸೇದುತ್ತಿದ್ದೆ. ಅದರ ಕೆಟ್ಟ ವಾಸನೆ ನನ್ನ ಕಾರನ್ನು ಆವರಿಸಿರುತ್ತಿತ್ತು. ಹೀಗಾಗಿ ನನ್ನ ಕಾರಿನಲ್ಲಿ ಯಾರು ಕುಳಿತುಕೊಳ್ಳಲು ಬರುತ್ತಿರಲಿಲ್ಲ ಎಂದು ನಾನ ಪಾಟೇಕರ ಹೇಳಿದ್ದರು.

ತಂಗಿಯ ಆ ಒಂದು ಮಾತು ಚಟ ಬಿಡಿಸಿತು!

ಹೀಗೆ ನಾನು, ಮತ್ತು ನನ್ನ ಸಿಗರೇಟ್​ ಚಟ ಮುಂದುವರಿದಿತ್ತು. ನನ್ನ ಸಿಗರೇಟ್​ ಚಟದಿಂದ ಇತರರಿಗೆ ತೊಂದರೆ ಆಗುತ್ತಿದೆ ಎಂದು ನನಗೂ ಕೂಡ ಅನ್ನಿಸಿತ್ತು. ಆದರೆ ಬಿಡಲು ಆಗುತ್ತಿರಲಿಲ್ಲ. ಮದ್ಯದ ಸೇವನೆಯಲ್ಲಿ ನನಗೆ ಹಿಡಿತವಿತ್ತು. ಆದರೆ ಈ ಸಿಗರೇಟಿಗೆ ನಾನು ದಾಸನಾಗಿದ್ದೆ.

ಒಂದು ದಿನ ನಾನು ಟಿವಿ ನೋಡುತ್ತಾ ಸಿಗರೇಟ್​ ಸೇದುತ್ತಾ ಕುಳಿತಿದ್ದೆ. ಆಗ ನಾನು ಜೋರಾಗಿ ಕೆಮ್ಮ ತೊಡಗಿದೆ. ಕೋಣೆಯೊಳಗಿದ್ದ ನನ್ನ ತಂಗಿ ಹೊರಬಂದಳು. ಆ ಸಮಯದಲ್ಲಿ ಆಕೆಯ 30 ವರ್ಷದ ಮಗನೊಬ್ಬ ಅಕಾಲಿಕ ಮರಣಹೊಂದಿದ್ದ. ಹೊರಬಂದ ಆಕೆ, ನನ್ನ ನೋಡುತ್ತಾ, ಈ ಜೀವನದಲ್ಲಿ ಇನ್ನು ಏನೇನು ನೋಡಬೇಕೋ ಎಂದು ದುಃಖಿಸಿದಳು. ಅವಳ ಆ ಮಾತು ನನ್ನ ಮನಸ್ಸನ್ನು ತೀವ್ರವಾಗಿ ನಾಟಿತು.

ಆ ದಿನದಿಂದ ನಾನು ಸಿಗರೇಟ್​ ಸೇದಬಾರದು ಎಂದು ನಿರ್ಧರಿಸಿದೆ. ಒಂದೆರಡು ಸೇದುವುದನ್ನು ಬಿಟ್ಟೆ. ಆಮೇಲೆ ನಾನು ಮುಂಬೈಗೆ ಬಂದೆ. ಸಿನಿಮಾ ಸೆಟ್​ನಲ್ಲಿ ಕೂಡ ಸೇದಲಿಲ್ಲ. ಇದನ್ನು ನೋಡಿದ ಕೆಲವರು ಏನಾಯಿತು ಸರ್​? ಏಕೆ ಸಿಗರೇಟ್​ ಸೇದುತ್ತಿಲ್ಲ? ಎಂದು ಕೇಳಿದರು. ಐದು ದಿನ ಆಗಿದೆ ನಾನು ಸಿಗರೇಟ್​ ಬಿಟ್ಟು ಎಂದೆ. ನಾನು ಇವತ್ತಿಗೂ ಇವತ್ತು ಒಂದು ದಿನ ಸೇದೋದಿಲ್ಲ ಎಂದು ಹೇಳುತ್ತೇನೆ, ಈಗ ನಾನು ಸಿಗರೇಟ್​ ಬಿಟ್ಟು 20 ವರ್ಷ ಕಳೆದಿದೆ ಎಂದು ನಾನಾ ಹೆಮ್ಮೆಯಿಂದ ಹೇಳಿದ್ದರು, (ಏಜೆನ್ಸೀಸ್​).