ಟಾಲಿವುಡ್ ನಟ ನಾಗಾರ್ಜುನ್ ಇಂದು 61ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇಡೀ ಭಾರತೀಯ ಸಿನಿಮಾರಂಗ ಅವರ ಜನ್ಮ ದಿನಕ್ಕೆ ಶುಭಾಶಯ ಹೇಳುತ್ತಿದೆ. ಅದೇ ರೀತಿ ಸಿನಿಮಾ ತಂಡಗಳು ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಂಡು ವಿಶ್ ಮಾಡುತ್ತಿವೆ.
ಅದೇ ರೀತಿ ನಾಗಾರ್ಜುನ್ ಜನ್ಮದಿನಕ್ಕೆ ಕಾಡು ನಾಯಿ ಕಡೆಯಿಂದಲೂ ಉಡುಗೊರೆ ಬಂದಿದೆ. ಅಂದರೆ, ಅಹಿಸೋರ್ ಸೋಲೊಮನ್ ನಿರ್ದೇಶನದಲ್ಲಿ ಸಿದ್ಧವಾಗಿರುವ ವೈಲ್ಡ್ ಡಾಗ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಕುತೂಹಲಭರಿತವಾಗಿದೆ.
ಈ ಚಿತ್ರದಲ್ಲಿ ಎನ್ಐಎ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಾಗಾರ್ಜುನ್, ಅರಣ್ಯದಲ್ಲಿ ಶತ್ರುಗಳ ಸಂಹಾರ ಮಾಡಲು ಸಂಚು ಹಾಕುತ್ತಿರುವ ಭಂಗಿಯಲ್ಲಿ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಶೇ. 70 ಭಾಗದ ಶೂಟಿಂಗ್ ಮಾಡಲಾಗಿದೆ.
ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸಹಾಮಿ ಖೇರ್ ಸಹ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮ್ಯಾಟಿನಿ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರ ನೈಜ ಘಟನೆ ಆಧರಿತವಾಗಿದೆ. (ಏಜೆನ್ಸೀಸ್)