ಸಿನಿವಾಣಿ

'ಅವಳ ಖುಷಿಯೇ, ನನ್ನ ಖುಷಿ' ಎಂದ ನಾಗ ಚೈತನ್ಯ! ಯಾರದು?

ಹೈದರಾಬಾದ್: ಸಮಂತಾ, ನಾಗ ಚೈತನ್ಯ ಎಂಬ ಎರಡು ಸೆಲೆಬ್ರಿಟಿ ಹೆಸರುಗಳು ಈ ವರ್ಷ ಮಾಡಿರುವ ಸದ್ದು, ಸುದ್ದಿ ಅಷ್ಟಿಷ್ಟಲ್ಲ. 11 ವರ್ಷದ ಪ್ರೇಮಾಯಣಕ್ಕೆ ಪೂರ್ಣ ವಿರಾಮ ಇಟ್ಟ ಈ ಜೋಡಿ ಅವರ ಅಭಿಮಾನಿಗಳಿಗೆ ನೋವು ಉಳಿಸಿ, ಉಳಿದವರ ಟೀಕೆಗಳಿಗೆ ತುತ್ತಾದರು. ಹೀಗಾಗಿ, ಹಲವಾರು ವಿಚಾರಗಳಿಂದ ನಟಿ ಸಮಂತಾ ಮತ್ತು ಅವರ ಮಾಜಿ ಪತಿ ನಟ ನಾಗಚೈತನ್ಯ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ. ಅವರಿಬ್ಬರು ಏನು ಮಾಡಿದರೂ, ಏನು ಮಾತಾಡಿದರು ಎಲ್ಲವೂ ಸುದ್ದಿಯಾಗಿ, ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತೆ. ಇದೀಗ, ನಟ ನಾಗಚೈತನ್ಯ ಅವರ ಒಂದು ಹೇಳಿಕೆ ಎಲ್ಲರ ಮನಸ್ಸು ಗೆದ್ದಿದೆ. ಹೌದು, ನಟ ನಾಗಚೈತನ್ಯ ಸದ್ಯ ಅವರ 'ಬಂಗಾರ್​ರಾಜು' ಸಿನಿಮಾದ ರಿಲೀಸ್​ಗೆ ರೆಡಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ, ನಟ ಹಲವಾರು ಸಂದರ್ಶನಗಳಲ್ಲಿ ಚಿತ್ರದ ಪ್ರಚಾರಕ್ಕೆಂದು ಭಾಗವಹಿಸುತ್ತಿದ್ದಾರೆ. 
ಹಾಗೇ ಭಾಗವಹಿಸಿದ ಒಂದು ಸಂದರ್ಶನದಲ್ಲಿ, ನಟನನ್ನು ತಮ್ಮ ವಿಚ್ಛೇದನದ ಕುರಿತು ಒಂದು ಪ್ರಶ್ನೆ ಕೇಳಲಾಗಿತ್ತು. ಆಗ ನಾಗಚೈತನ್ಯ ಅವರು ಮೊದಲ ಬಾರಿಗೆ ಮಾಜಿ ಪತ್ನಿಯ ಬಗ್ಗೆ ಮಾತಾಡಿದ್ದು, 'ನಮ್ಮಿಬ್ಬರ ಒಳಿತಿಗಾಗಿ ತೆಗೆದುಕೊಂಡ ನಿರ್ಣಯವದು. ಆಕೆ ಸಂತೋಷವಾಗಿದ್ದರೆ, ನಾನೂ ಸಂತೋಷವಾಗಿರುತ್ತೇನೆ. ಆಗ ನಾವಿದ್ದ ಸಂದರ್ಭದಲ್ಲಿ ಈ ನಿರ್ಣಯ ಸೂಕ್ತ ಎನಿಸಿತು', ಎಂದು ನಟ ಉತ್ತರಿಸಿದ್ದಾರೆ. ಸದ್ಯ, ಈ ಉತ್ತರ ಎಲ್ಲರ ಮನಸ್ಸು ಗೆದ್ದಿದೆ ಎಂದೇ ಹೇಳಬೇಕು. ಈ ಸೆಲೆಬ್ರಿಟಿ ಜೋಡಿಯ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿರುವ ಈ ಸಮಯದಲ್ಲಿ, ನಟನ ಈ ಕೇಳಿಕೆ ನಿಜಕ್ಕೂ ಎಲ್ಲರನ್ನೂ ಯೋಚಿಸುವಂತೆ ಮಾಡಿದೆ ಎನ್ನಬಹುದು.