Hrithik Roshan 
ಸಿನಿವಾಣಿ

ನಟ ಹೃತಿಕ್ ರೋಶನ್​ಗೆ ಸಮನ್ಸ್ ನೀಡಿದ ಮುಂಬೈ ಪೊಲೀಸರು

ಮುಂಬೈ: ಕಂಗನಾ ರಾನೌತ್ ಇ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಹೃತಿಕ್ ಅವರನ್ನು ಕರೆಸುವುದಕ್ಕಾಗಿ ಸಮನ್ಸ್ ನೀಡಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಗನಾ ರನೌತ್ ಅವರು ನಕಲಿ ಇಮೇಲ್ ಐಡಿಯಿಂದ ಇಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ರೋಶನ್ 2016 ರಲ್ಲಿ ದೂರು ದಾಖಲಿಸಿದ್ದರು. ಕೈಟ್ಸ್ (2010) ಮತ್ತು ಕ್ರಿಶ್ 3 (2013) ಚಿತ್ರಗಳಲ್ಲಿ ಈ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಕಂಗನಾ ನಕಲಿ ಈ ಮೇಲ್ ಮೂಲಕ ತನಗೆ ಅಸಂಬದ್ಧ ಇಮೇಲ್‌ಗಳನ್ನು ಕಳುಹಿಸುತ್ತಿರುವುದಾಗಿ ಹೃತಿಕ್ ಹೇಳಿಕೊಂಡಿದ್ದರು.

2016 ರಲ್ಲಿ ಹೃತಿಕ್ ಅವರು ಕಂಗನಾ ಅವರನ್ನು ಸಿಲ್ಲಿ ನಟಿ ಎಂದು ಉಲ್ಲೇಖಿಸಿದ ನಂತರ ಕಂಗನಾ ಲೀಗಲ್ ನೋಟಿಸ್ ಕಳುಹಿಸಿದ್ದರು. ಈ ಘಟನೆಯ ನಂತರ ಇಬ್ಬರ ನಡುವೆಯೂ ಬಹುದೊಡ್ಡ ವಾಕ್ಸಮರ ನಡೆದಿತ್ತು.

2016 ರ ಡಿಸೆಂಬರ್‌ನಲ್ಲಿ, ಹೃತಿಕ್ ರೋಷನ್ ಅವರ ವಕೀಲರು 2016 ರಲ್ಲಿ ಸಲ್ಲಿಸಿದ ದೂರನ್ನು ಪರಿಶೀಲಿಸುವಂತೆ ಮನವಿ ಮಾಡಿದ ನಂತರ ಈ ಪ್ರಕರಣವನ್ನು ಸಿಐಯುಗೆ ವರ್ಗಾಯಿಸಲಾಯಿತು. ಈ ಹಿಂದೆ ಈ ಪ್ರಕರಣವು ಮುಂಬೈ ಪೊಲೀಸರ ಸೈಬರ್ ಸೆಲ್‌ನಲ್ಲಿತ್ತು. 2016 ರಲ್ಲಿ, ಸೈಬರ್ ಸೆಲ್ ಹೃತಿಕ್ ಅವರ ಲ್ಯಾಪ್ಟಾಪ್ ಮತ್ತು ಫೋನ್ ಅನ್ನು ತನಿಖೆಗೆ ತೆಗೆದುಕೊಂಡಿತ್ತು.