ಸಿನಿವಾಣಿ

ರಾಮ್​ಚರಣ್​-ಉಪಾಸನಾ ದಂಪತಿಗೆ ಮುಕೇಶ್​ ಅಂಬಾನಿಯಿಂದ ಚಿನ್ನದ ತೊಟ್ಟಿಲು ಗಿಫ್ಟ್​: ಬೆಲೆ ಕೇಳಿದ್ರೆ ಬೆರಗಾಗ್ತೀರಾ!

ಹೈದರಾಬಾದ್​​: ಟಾಲಿವುಡ್​ನ ಮೆಗಾ ಕುಟಂಬಕ್ಕೆ ಹೊಸ ಅತಿಥಿಯ ಆಗಮನವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಸೂಪರ್​ಸ್ಟಾರ್​ ರಾಮ್​ಚರಣ್​ ಅವರ ಪತ್ನಿ ಉಪಾಸನಾ ಅವರು ಜೂನ್​ 20ರ ಬೆಳಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ನಿನ್ನೆಯಷ್ಟೇ ಮೆಗಾ ಕುಟುಂಬದಲ್ಲಿ ನಾಮಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಇದರ ಬೆನ್ನಲ್ಲೇ ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ರಾಮಚರಣ್​-ಉಪಾಸನ ದಂಪತಿಗೆ ನೀಡಿರುವ ದುಬಾರಿ ಉಡುಗೊರೆಯೊಂದು ಬೆಳಕಿಗೆ ಬಂದಿದೆ.

ರಾಮ್​ಚರಣ್​ ಮತ್ತು ಉಪಾಸನಾ ಅವರ 11 ವರ್ಷಗಳ ವೈವಾಹಿಕ ಜೀವನದಲ್ಲಿ ಮೊದಲ ಮಗು ಜನಿಸಿದೆ. ಉಪಾಸನಾ ಅವರು ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಜೂ. 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನಿನ್ನೆ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದೆ.

ಮುದ್ದಾದ ಹೆಣ್ಣು ಮಗುವಿಗೆ ‘ಕ್ಲಿನ್ ಕಾರ ಕೊನಿಡೆಲಾ’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿಡಲು ಕಾರಣವೇನೆಂದರೆ, ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆಯಂತೆ. ಕ್ಲಿನ್ ಕಾರ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ ಎಂದು ಮೆಗಾ ಕುಟುಂಬ ಹೇಳಿದೆ.

1 ಕೋಟಿ ರೂ. ಮೌಲ್ಯ

ಇದೀಗ ತಾಜಾ ನ್ಯೂಸ್​ ಒಂದು ಹೊರಬಿದ್ದಿದ್ದು, ರಾಮ್​ಚರಣ್​ ದಂಪತಿಗೆ ಮುಕೇಶ್​ ಅಂಬಾನಿ ಅವರು ದುಬಾರಿ ಉಡುಗೊರೆ ನೀಡಿದ್ದಾರೆ. ಯಾವುದು ಆ ದುಬಾರಿ ಉಡುಗೊರೆ ಅಂದರೆ, ಚಿನ್ನದ ತೊಟ್ಟಿಲು. ಅದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದಂತು ಖಚಿತ. ಚಿನ್ನದ ತೊಟ್ಟಿಲಿನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿ.

ಅಂದಹಾಗೆ ರಾಮ್​ಚರಣ್​ ಮತ್ತು ಉಪಾಸನ 2012ರ ಜೂನ್​ 14ರಂದು ಮದುವೆಯಾದರು. ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ರಾಮ್​ಚರಣ್​-ಉಪಾಸನಾ ದಂಪತಿ ಘೋಷಣೆ ಮಾಡಿದ್ದರು. (ಏಜೆನ್ಸೀಸ್​)