ಸಿನಿವಾಣಿ

'ಮಿಸ್ಟರ್​ ನಟ್ವರ್​ಲಾಲ್' ಆದ ತನುಷ್; ಚಿತ್ರದ ಟೀಸರ್​ ಬಿಡುಗಡೆ ...

chetannadiger

ಬೆಂಗಳೂರು: ಈ ಹಿಂದೆ 'ಮಡಮಕ್ಕಿ', 'ನಂಜುಂಡಿ ಕಲ್ಯಾಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ, ತನುಷ್ ಈಗ 'ಮಿಸ್ಟರ್​ ನಟ್ವರ್​ಲಾಲ್' ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಆ ಚಿತ್ರದ ಟೀಸರ್​ ಇತ್ತೀಚೆಗೆ ಬಿಡುಗಡೆಯಾಗಿದೆ.

'ಮಿಸ್ಟರ್​ ನಟ್ವರ್​ಲಾಲ್' ಚಿತ್ರದ ಫಸ್ಟ್​ಲುಕ್​ ಮತ್ತು ಟೀಸರ್​ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತನುಷ್​ಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಅಭಿನಯಿಸುತ್ತಿದ್ದಾರೆ.

ವಿ.ಲವ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕರ್ನಾಟಕದ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆದಿದ್ದು, ಹೆಚ್ಚಿನ ಚಿತ್ರೀಕರಣ ವಿವಿಧ ಸೆಟ್​​ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಈ ವರ್ಷದ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ತನುಷ್​ ಮತ್ತು ಸೋನಲ್​ ಜತೆಗೆ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, 'ಕಾಕ್ರೋಜ್' ಸುಧೀ, 'ಕಾಮಿಡಿ ಕಿಲಾಡಿಗಳು' ನಯನ, ರಾಜೇಂದ್ರ ಕಾರಂತ್, ರಘು ರಾಮನಕೊಪ್ಪ, ಸುಂದರರಾಜ್, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ ಮುಂತಾದವರು ನಟಿಸಿದ್ದು, ಧರ್ಮ ವಿಶ್ ಸಂಗೀತ ಸಂಯೋಜಿಸಿದರೆ, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.