More

    ಪುಷ್ಕರ್ ಬಿಜಿನೆಸ್ ಫ್ರೆಂಡ್ ಅಲ್ಲ; ಒಡಕಿನ ಬಗ್ಗೆ ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮುಹೂರ್ತದಲ್ಲೇ ಅಂಥದ್ದೊಂದು ಹಿಂಟ್ ಸಿಕ್ಕಿತ್ತು. ಆ ಚಿತ್ರವನ್ನು ನಿರ್ವಿುಸಬೇಕಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಹೆಸರು ಪೋಸ್ಟರ್​ನಲ್ಲಿ ಇರಲಿಲ್ಲ. ಇಷ್ಟಕ್ಕೂ ಪುಷ್ಕರ್ ಯಾಕೆ ಚಿತ್ರದಿಂದ ಹೊರನಡೆದಿದ್ದಾರೆ? ರಕ್ಷಿತ್ ಮತ್ತು ಪುಷ್ಕರ್ ನಡುವೆ ಕಿತ್ತಾಟ ಆಗಿದೆಯಾ? ಎಂಬಂಥ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ, ಪುಷ್ಕರ್ ಬೇರೆ ಚಿತ್ರಗಳಲ್ಲಿ ಬಿಜಿ ಆಗಿದ್ದರಿಂದ, ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ರಕ್ಷಿತ್ ಹೇಳಿದ್ದರು. ಯಾವಾಗ ‘777 ಚಾರ್ಲಿ’ ಚಿತ್ರದ ನಿರ್ಮಾಣದಿಂದಲೂ ಪುಷ್ಕರ್ ಹೊರಗೆ ಬಂದರೋ, ಆಗ ರಕ್ಷಿತ್ ಮತ್ತು ಪುಷ್ಕರ್ ಮಧ್ಯೆ ಸಂಬಂಧ ಹಳಿಸಿದೆ ಎಂಬ ಗುಮಾನಿ ಮೂಡಿತ್ತು. ಈಗ ರಕ್ಷಿತ್ ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ತೆರೆಗೆ ಬರುತ್ತಿದ್ದಂತೆ, ಮೆಚ್ಚುಗೆಯ ಜತೆಗೆ ಈ ಚಿತ್ರದ ಬಗ್ಗೆ ಲೂಸ್ ಟಾಕ್ಸ್ ಸಹ ಕೇಳಿಬಂದವು. ಹೊರಗಡೆ ಏನು ನಡೆಯುತ್ತಿದೆ ಎಂಬುದು ನನ್ನ ಕಿವಿಗೆ ಬೀಳುತ್ತಿದ್ದರೂ, ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಪುಷ್ಕರ್ ಸಹ ನನ್ನ ಮುಂದೆ ಬಂದು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುತ್ತಿದ್ದರು. ಬಿಜಿನೆಸ್​ಗೆ ಸಮಸ್ಯೆ ಆದರೆ, ನಾನು ನಿಮ್ಮ ಜತೆಗೆ ನಿಲ್ಲುತ್ತೇನೆ ಎಂದೂ ಪುಷ್ಕರ್​ಗೆ ಹೇಳಿದ್ದೆ. ಏಕೆಂದರೆ, ಅಲ್ಟಿಮೇಟ್ ಅದು ನನ್ನ ಸಿನಿಮಾ. ಅದರ ಬಗ್ಗೆ ಯಾರೂ ಬೆರಳು ಮಾಡಬಾರದು. ಹೀಗಾಯ್ತು, ಹಾಗಾಯ್ತು ಎಂದು ಯಾರೂ ಹೇಳಬಾರದು. ಆ ಚಿತ್ರಕ್ಕೆ ನಾನು ನನ್ನ ಅಮೂಲ್ಯವಾದ ಮೂರು ವರ್ಷ ಕೊಟ್ಟಿದ್ದೇನೆ. ನಿರ್ದೇಶಕ ಸಚಿನ್ ಮತ್ತು ಅವರ ತಂಡ ಮೂರು ವರ್ಷ ಕೆಲಸ ಮಾಡಿದೆ. ಇಷ್ಟೆಲ್ಲ ಇರುವಾಗ, ಅಪಪ್ರಚಾರ ಮಾಡಿದರೆ ಅವಮಾನ ಮಾಡಿದಂತೆ. ಆ ಚಿತ್ರದಿಂದ ಎಷ್ಟೇ ನಷ್ಟವಾದರೂ ನಾನು ಜತೆಗಿರುತ್ತೀನಿ ಎಂದು ಭರವಸೆ ನೀಡಿದ್ದರೂ, ನನ್ನ ಬೆನ್ನ ಹಿಂದೆ ಲೂಸ್ ಟಾಕ್ ಮಾಡುತ್ತಿರುವ ವಿಷಯ ಕಿವಿಗೆ ಬೀಳುತ್ತಲೇ ಇತ್ತು. ಕೊನೆಗೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಫ್ರೀ ಡೇಟ್ಸ್ ನೀಡಿದೆ. ಆದ ನಷ್ಟವನ್ನು ಭರಿಸಲು ಮುಂದಾದೆ. ಆದರೂ ಇದು ನಿಲ್ಲಲಿಲ್ಲ’ ಎನ್ನುತ್ತಾರೆ ರಕ್ಷಿತ್.

    ‘ಆಗ ಒಂದು ನಿರ್ಧಾರಕ್ಕೆ ಬಂದೆ. ವ್ಯಾವಹಾರಿಕವಾಗಿ ಪುಷ್ಕರ್​ಗೆ ಏನೆಲ್ಲ ಕೊಡಬೇಕಿತ್ತೋ, ಅದನ್ನೆಲ್ಲ ಕೊಟ್ಟು ಈ ರಗಳೆಯಿಂದ ಹೊರಬರಬೇಕು ಎಂದು ತೀರ್ವನಿಸಿದೆ. ‘777 ಚಾರ್ಲಿ’ಯಲ್ಲಿ 3.5 ಕೋಟಿ ಬಂಡವಾಳ ಪುಷ್ಕರ್ ಅವರಿದ್ದಿತ್ತು. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ 80 ಲಕ್ಷ, ಪಿನಾಕಾ ಸ್ಟುಡಿಯೊದ 80 ಲಕ್ಷ ರೂ ಬಾಕಿ ಇತ್ತು. ಸಿನಿಮಾಕ್ಕೆ ಸಂಬಂಧಿಸಿದಂತೆ ದುಬೈನಲ್ಲಿರುವ ನನ್ನ ಸ್ನೇಹಿತರಿಗೂ ಹಣ ನೀಡಬೇಕಿತ್ತು. ಇದೆಲ್ಲ ಒಂದೇ ಏಟಿನಲ್ಲಿ ಕ್ಲಿಯರ್ ಮಾಡಿಕೊಡ್ತೀನಿ ಅಂದಿದ್ದೆ. ಅದರಂತೆ, ‘777 ಚಾರ್ಲಿ’ಯಿಂದ 20 ಕೋಟಿ ರೂ. ಬಂತು. ಅದರಿಂದಲೇ ಯಾರ್ಯಾರಿಗೆ ಏನೆಲ್ಲಾ ಕೊಡಬೇಕಿತ್ತೋ, ಅದನ್ನು ಕ್ಲಿಯರ್ ಮಾಡಿದ್ದೇನೆ. ಹೇಳಿದಂತೆ ನಾನು ನಡೆದುಕೊಂಡಿದ್ದೇನೆ. ಇನ್ನು ಮುಂದೆ ಯಾವುದೇ ವ್ಯವಹಾರ ಬೇಡ, ಸ್ನೇಹಿತರಾಗಿರೋಣ ಅಂತ ಪುಷ್ಕರ್​ಗೆ ಹೇಳಿದ್ದೇನೆ. ಅಲ್ಲಿಂದ ಇಲ್ಲಿಯವರೆಗೂ ಅವರಿಂದ ಯಾವುದೇ ಫೋನ್ ಇಲ್ಲ …’ ಎಂದು ರಕ್ಷಿತ್ ಸ್ಪಷ್ಟಪಡಿಸಿದ್ದಾರೆ.

    ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಕೊನೆಗೂ ಅಗ್ನಿಶಾಮಕ ಅಧಿಕಾರಿ-ಸಿಬ್ಬಂದಿ ಕೊರಳನ್ನು ಅಲಂಕರಿಸಲಿದೆ ಸಿಎಂ ಪದಕ; 5 ವರ್ಷಗಳ ಬಳಿಕ ಪ್ರದಾನ!

    ಎಚ್ಚರಿಕೆ.. ಝಿಕಾ ವೈರಸ್ ಬಂದಿದೆ, ಮಕ್ಕಳ ಕುರಿತಿರಲಿ ಹೆಚ್ಚು ನಿಗಾ: ಡಾ. ಜಿ.ವಿ. ಬಸವರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts