ಸಿನಿವಾಣಿ

ಅಬುಧಾಬಿಗೆ ಗುಡ್​ಬೈ ಹೇಳಿದ ಮೌನಿ!

‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯಲ್ಲಿ ‘ಗಲೀ ಗಲೀ ಮೇ ಫಿರ್ತಾ ಹೂಂ ...’ ಎಂಬ ಹಾಡಿಗೆ ಯಶ್ ಜತೆಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್, ನಾಲ್ಕು ತಿಂಗಳ ನಂತರ ಕೊನೆಗೂ ಅಬುಧಾಬಿಯಿಂದ ಹೊರಟಿದ್ದಾರೆ.

ಮಾರ್ಚ್​ನಲ್ಲಿ ಮ್ಯಾಗಜೀನ್​ವೊಂದರ ಫೋಟೋ ಶೂಟ್​ಗಾಗಿ ಮೌನಿ ಅಬುಧಾಬಿಗೆ ಹೋಗಿದ್ದರು. ಕೆಲಸ ಮುಗಿದು ಇನ್ನೇನು ವಿಮಾನ ಹತ್ತಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ಇಂಟರ್​ನ್ಯಾಷನಲ್ ಫ್ಲೈಟುಗಳು ರದ್ದಾದವು. ಬೇರೆ ದಾರಿ ಇಲ್ಲದೆ ಒಮ್ಮ ಹಳೆಯ ಸ್ನೇಹಿತೆಯ ಜತೆಗೆ ಉಳಿದರು. ವಾರ, ಹತ್ತು ದಿವಸದಲ್ಲಿ ಎಲ್ಲ ಸರಿ ಹೋಗಬಹುದು ಎಂದು ಕಾದಿದ್ದ ಮೌನಿಗೆ ನಿರಾಸೆ ಹೆಚ್ಚಾಯಿತು. ಏಕೆಂದರೆ, ಲಾಕ್​ಡೌನ್ ಎರಡು ತಿಂಗಳವರೆಗೂ ಮುಂದುವರಿಯಿತು. ಈ ಮಧ್ಯೆ ತಮ್ಮ ತಾಯಿ ಮತ್ತು ಸಹೋದರನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ವಿಡಿಯೋ ಚಾಟಿಂಗ್ ಮೂಲಕವೇ ಮನೆಯವರ ಜತೆಗೆ ದಿನಾ ಸಂಪರ್ಕದಲ್ಲಿದ್ದ ಮೌನಿ, ಅದರ ಮೂಲಕವೇ ತಾಯಿಯಿಂದ ಅಡುಗೆ ಮಾಡುವುದನ್ನೂ ಹೇಳಿಸಿಕೊಳ್ಳುತ್ತಿದ್ದರಂತೆ. ಹೀಗೆ ಹಲವು ದಿನಗಳ ನಂತರ ಲಾಕ್​ಡೌನ್ ಮುಗಿಯಿತು. ಆದರೆ, ಅಂತಾರಾಷ್ಟ್ರೀಯ ಫ್ಲೈಟುಗಳ ಹಾರಾಟ ಮಾತ್ರ ಪ್ರಾರಂಭವಾಗರಲಿಲ್ಲ. ಈಗ ಕೊನೆಗೂ ವಿಮಾನ ಪ್ರಯಾಣ ಪ್ರಾರಂಭ ವಾಗಿದ್ದು, ಮೌನಿ ಸಹ ವಿಮಾನ ಹತ್ತಿದ್ದಾರೆ. ಹಾಗಂತ ಅವರು ಭಾರತಕ್ಕೆ ಬರುತ್ತಿಲ್ಲ. ಲಂಡನ್​ಗೆ ಹಾರಿದ್ದಾರೆ. ಅಲ್ಲೊಂ ದಿಷ್ಟು ಕೆಲಸ ಮುಗಿಸಿ ಭಾರತಕ್ಕೆ ವಾಪಸ್ಸಾಗು ತ್ತಾರಂತೆ. - (ಏಜನ್ಸೀಸ್)