ಮಲಯಾಳಂ ನಟಿ ಪಾರ್ವತಿ ಥಿರುವೊತ್ತು  
ಮಾಲಿವುಡ್

ಸಖತ್​​ ಬೋಲ್ಡ್​ ಆಗಿ ಬಂದ ನಟಿ ಪಾರು: ಹಾಟ್​ ಫೋಟೋಗಳು ವೈರಲ್​, ಕುಸ್ತಿಪಟು ಎಂದಿದ್ದೇಕೆ ನೆಟ್ಟಿಗರು! Parvathy Thiruvottu

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ
  • ಪುನೀತ್​ ರಾಜ್​ಕುಮಾರ್​ ಅಭಿನಯದ ಮಿಲನ ಹಾಗೂ ಪೃಥ್ವಿ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ
  • ನಟಿಯರು ಸಾಮಾನ್ಯವಾಗಿ ಎದುರಿಸುವ ಬಾಡಿ ಶೇಮಿಂಗ್​ಗೆ ನಟಿ ಪಾರ್ವತಿ ಕೂಡ ಗುರಿಯಾಗಿದ್ದಾರೆ
Parvathy Thiruvottu : ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ. ದಿವಂಗತ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪಾರ್ವತಿ ನಟಿಸಿದ್ದು, ತಮ್ಮ ನಟನೆಯಿಂದಲೇ ಒಳ್ಳೆಯ ಹೆಸರು ಮಾಡಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ, ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಪಾರ್ವತಿ ಅವರು ಸದಾ ಧ್ವನಿ ಎತ್ತುತ್ತಾರೆ. ಹೀಗಾಗಿ, ಪಾರ್ವತಿ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.
ತಾಜಾ ಸಂಗತಿ ಏನೆಂದರೆ, ನಟಿಯರು ಸಾಮಾನ್ಯವಾಗಿ ಎದುರಿಸುವ ಬಾಡಿ ಶೇಮಿಂಗ್​ಗೆ ನಟಿ ಪಾರ್ವತಿ ಕೂಡ ಗುರಿಯಾಗಿದ್ದಾರೆ. ಇತ್ತೀಚೆಗೆ ಪಾರ್ವತಿ ಅವರು ವೆರೈಟಿ ಮ್ಯಾಗಜಿನ್​ನ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್ ತಾರೆಯರೊಂದಿಗೆ ಮಿಂಚಿದರು. ಈ ವೇಳೆ ಅವರು ಧರಿಸಿದ್ದ ಬೋಲ್ಡ್​ ಉಡುಪು ಚರ್ಚೆಗೆ ಗ್ರಾಸವಾಗಿದೆ.
ಈ ಈವೆಂಟ್​​​ನಲ್ಲಿ ಪಾರ್ವತಿ ಅವರು ಕಪ್ಪು ಬಣ್ಣದ ಸ್ಟ್ರಾಪ್‌ಲೆಸ್ ಕಾರ್ಸೆಟ್ ರವಿಕೆ ಧರಿಸಿ, ಸೀರೆಯಂತೆ ಹೊದಿಸಿದ ಸ್ಕರ್ಟ್ ಧರಿಸಿ, ಸಖತ್​ ಸ್ಟೈಲಿಶ್ ಮತ್ತು ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಂಡರು. ಪಾರ್ವತಿ ಅವರ ನೆಕ್ಲೆಸ್​ ಕೂಡ ಎಲ್ಲರ ಗಮನ ಸೆಳೆಯಿತು. ಎದೆ ಸೀಳು ಕಾಣುವಂತೆ ಸಖತ್​ ಹಾಟ್​ ಆಗಿ ಉಡುಗೆ ಧರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಇಲ್ಲಿ ಪಾರ್ವತಿ ಅವರ ಫ್ಯಾಷನ್ ಚಾಯ್ಸ್​ ಅನೇಕ ಮಂದಿಗೆ ಇಷ್ಟವಾಗಿಲ್ಲ. ಪಾರ್ವತಿ ಅವರು ತುಂಬಾ ದಪ್ಪಗಾಗಿರುವುದರಿಂದ ಅನೇಕರು ಆಕೆಯನ್ನು ಟೀಕಿಸಿದ್ದಾರೆ. ಇಂತಹ ಡ್ರೆಸ್​ ತೊಡಲು ಪಾರ್ವತಿ ಅನರ್ಹರು ಎಂದು ಕಾಮೆಂಟ್​ ಮಾಡಿದ್ದಾರೆ. ಓರ್ವ ನೆಟ್ಟಿಗನಂತೂ ಪಾರ್ವತಿ ಅವರನ್ನು "ಕುಸ್ತಿಪಟು" ಎಂದು ಕರೆದಿದ್ದಾರೆ. ಅನೇಕರು ಕೆಟ್ಟ, ಕೊಳಕು ಮತ್ತು ಅಸಹ್ಯಕರ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಉಡುಗೆ ಪಾರ್ವತಿ ಅವರಿಗೆ ಸ್ವಲ್ಪವೂ ಸರಿಹೊಂದುವುದಿಲ್ಲ ಎಂದಿದ್ದಾರೆ.
ಪಾರ್ವತಿ ಅವರನ್ನು ಟ್ರೋಲ್​ ಮಾಡುವವರ ನಡುವೆ ಅನೇಕರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಪಾರ್ವತಿ ಅವರ ಗ್ಲಾಮರಸ್​ ಲುಕ್​ ಮತ್ತು ಅವರ ಆತ್ಮವಿಶ್ವಾಸ ಹಾಗೂ ಆಕೆಯ ಸ್ಟೈಲ್​ ಅನ್ನು ಕೊಂಡಾಡಿದ್ದಾರೆ. ಇಲ್ಲಿ ಬಂದಿರುವ ನೆಗೆಟಿವ್​ ಕಾಮೆಂಟ್​ಗಳ ಪಾರ್ವತಿ ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅನೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಪಾರ್ವತಿ ಜತೆಗೆ ಮೃನಾಲ್ ಠಾಕೂರ್, ನಿಮ್ರತ್ ಕೌರ್, ಸನ್ನಿ ಲಿಯೋನ್, ಮಾಳವಿಕಾ ಮೋಹನನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಇತರ ನಟಿಯರು ಕೂಡ ಕಾಣಿಸಿಕೊಂಡರು. ಆದರೆ, ಪಾರ್ವತಿ ಅವರ ಫೋಟೋಗಳು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).