ಮುಸ್ಲಿಂ ಮಹಿಳೆಯಿಂದ ಹಿಂದೂ ಹೆಸರು ಬಳಕೆ... ಜಾಲತಾಣದಲ್ಲಿ ಬಿರುಗಾಳಿ ಎಬ್ಬರಿಸಿ ಅಡಲ್ಟ್ ಒಟಿಟಿ ಸರಣಿ! Lola Cottage
- ಮಲಯಾಳಂ ಚಿತ್ರರಂಗದ ಒಟಿಟಿ ಸರಣಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ
- ಲೋಲಾ ಕಾಟೇಜ್ ಎಂಬ ಮಲಯಾಳಂ ಒಟಿಟಿ ಸರಣಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದೆ
- ನಿರ್ದೇಶಕಿ ನೀಲಾ ನಂಬಿಯಾರ್ ಅವರ ಹಿನ್ನೆಲೆಯ ಬಗ್ಗೆ ಸಾರ್ವಜನಿಕರನ್ನು ದಾರಿತಪ್ಪಿಸಲಾಗಿದೆ ಎಂಬ ಆರೋಪವಿದೆ
- ನಿರ್ದೇಶಕಿ ಹಾಗೂ ನಟಿ ನೀಲಾ ನಂಬಿಯಾರ್ ಅವರ ಮೂಲ ಹೆಸರು 'ಆಸಿಯಾ ಖಾತೂನ್' ಎಂದು ಹೇಳಲಾಗುತ್ತಿದೆ
Lola Cottage : ಮಲಯಾಳಂ ಚಿತ್ರರಂಗದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ ಒಟಿಟಿ ಸರಣಿಯೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ಸಂಚಲನ ಮೂಡಿಸುತ್ತಿದೆ. ಈ ಸರಣಿಯು ಕೇವಲ ಮನರಂಜನೆಯಾಗಿ ಉಳಿಯದೆ, ಅದರಲ್ಲಿನ ವ್ಯಕ್ತಿತ್ವದ ಗುರುತು, ಪಾರದರ್ಶಕತೆ ಮತ್ತು ಸಾರ್ವಜನಿಕ ದೃಷ್ಟಿಕೋನ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.
ಹೌದು, 2025, ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ 'ಲೋಲಾ ಕಾಟೇಜ್' (Lola Cottage) ಎಂಬ ಮಲಯಾಳಂ ಒಟಿಟಿ ಸರಣಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಸರಣಿಯ ನಿರ್ದೇಶಕಿ ನೀಲಾ ನಂಬಿಯಾರ್ ಅವರ ಹಿನ್ನೆಲೆಯ ಬಗ್ಗೆ ಸಾರ್ವಜನಿಕರನ್ನು ದಾರಿತಪ್ಪಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅವರ ನಿಜವಾದ ಗುರುತು, ಹಿನ್ನೆಲೆ ಮತ್ತು ವೃತ್ತಿಜೀವನದ ಆರಂಭದ ಬಗ್ಗೆ ನೆಟ್ಟಿಗರು ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಸರಣಿಯಲ್ಲಿ ನೀಲಾ ನಂಬಿಯಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಣೆಗೆ ಕುಂಕುಮ ಕೂಡ ಇಟ್ಟುಕೊಂಡಿದ್ದಾರೆ. ಹೀಗಾಗಿ, ಸಾಕಷ್ಟು ಮಂದಿ ಈ ಸರಣಿಯ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಪ್ರಕಾರ, ನೀಲಾ ನಂಬಿಯಾರ್ ಅವರ ಮೂಲ ಹೆಸರು 'ಆಸಿಯಾ ಖಾತೂನ್' ಎಂದು ಹೇಳಲಾಗುತ್ತಿದೆ. ಅವರು ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು, ನಂತರ ತಮ್ಮ ಸಮುದಾಯದಿಂದ ದೂರ ಸರಿದು ಹಿಂದೂ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂಬ ವಾದಗಳು ಕೇಳಿಬರುತ್ತಿವೆ. ಈ ಹೆಸರಿನ ಬದಲಾವಣೆ ಉದ್ದೇಶಪೂರ್ವಕವಾಗಿಯೇ ನಡೆದಿದೆ ಎಂಬ ಗಂಭೀರ ಚರ್ಚೆಗಳು ಈಗ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿವೆ. ಅಲ್ಲದೆ, ನೀಲಾ ನಂಬಿಯಾರ್, ಇಸ್ಲಾಂನಲ್ಲಿ ತನ್ನ ಅಶ್ಲೀಲ ಚಿತ್ರ ವೃತ್ತಿ ಸ್ವೀಕಾರಾರ್ಹವಲ್ಲದ ಕಾರಣ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ ಅಂತಾನೂ ನೆಟ್ಟಿಗರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೋಲಾ ಕಾಟೇಜ್ ಸರಣಿ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಮನರಂಜನೆ ಮತ್ತು ವಯಸ್ಕರ ಚಲನಚಿತ್ರೋದ್ಯಮದಲ್ಲಿ ಕಲಾವಿದರು ವೈಯಕ್ತಿಕ ಕಾರಣಗಳಿಗಾಗಿ ಅಥವಾ ಗೌಪ್ಯತೆಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದು ಅಥವಾ ಅನ್ವರ್ಥ ನಾಮಗಳನ್ನು ಬಳಸುವುದು ಸಾಮಾನ್ಯ ಸಂಗತಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಹೆಸರು ಬದಲಾವಣೆ ಮಾಡುವ ಮೂಲಕ ಒಂದು ಧರ್ಮಕ್ಕೆ ಅಪಮಾನ ಮಾಡುವುದು ಎಷ್ಟು ಸರಿ ಎಂಬ ಆಕ್ರೋಶ ಕೇಳಿಬಂದಿದೆ.
ಲೋಲಾ ಕಾಟೇಜ್ ವಿರುದ್ಧದ ಆಕ್ರೋಶವು ಈಗ ಸಿನಿ ಉದ್ಯಮದಲ್ಲಿನ ನೈತಿಕತೆ, ಮುಕ್ತತೆ ಮತ್ತು ಪ್ರಾತಿನಿಧ್ಯದ ಕುರಿತಾದ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರ ಅಭಿಪ್ರಾಯ ರೂಪಿಸುವಲ್ಲಿ ಸಾಮಾಜಿಕ ಜಾಲತಾಣಗಳು ಎಷ್ಟು ಪ್ರಬಲವಾಗಿವೆ ಎಂಬುದನ್ನು ಈ ಒಂದು ವಿವಾದವು ತೋರಿಸಿಕೊಟ್ಟಿದೆ. ಈ ವಿಚಾರವಾಗಿ ಈವರೆಗೂ ಲೋಲಾ ಕಾಟೇಜ್ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಸಿಗದೇ ಇರುವುದರಿಂದ ವಾದ-ಪ್ರತಿವಾದಗಳು ನಿರಂತರವಾಗಿ ಮುಂದುವರಿಯುತ್ತಲೇ ಇವೆ, (ಏಜೆನ್ಸೀಸ್).