ಹೈದರಾಬಾದ್: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ( Samantha ) ಸದ್ಯ ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣ ಗಮನಹರಿಸಿದ್ದಾರೆ. ನಾಯಕಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿಯೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಸಮಂತಾ, ವೆಬ್ ಸರಣಿಯಲ್ಲೂ ನಟಿಸುವ ಮೂಲಕ ಪ್ರೇಕ್ಷಕರ ಮನಸೂರೆಗೊಳಿಸುತ್ತಿದ್ದಾರೆ.
ನಟಿಯಾಗಿ ವೃತ್ತಿ ಜೀವನದಲ್ಲಿ ತುಂಬಾ ಬಿಜಿಯಾಗಿರುವ ಸಮಂತಾ, ಶೀಘ್ರದಲ್ಲೇ ಸಿಟಡೆಲ ಹನಿಬನ್ನಿ ಎಂಬ ವೆಬ್ ಸರಣಿ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ಹಾಲಿವುಡ್ ವೆಬ್ ಸರಣಿ ಸಿಟಾಡೆಲ್ ರಿಮೇಕ್ ಇದಾಗಿದ್ದು, ಹನಿ ಬನ್ನಿ ಎಂಬ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಈ ವೆಬ್ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 1ರಿಂದ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಲಂಡನ್‌ನಲ್ಲಿ ಈ ಸರಣಿಯ ಪ್ರಥಮ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಸಮಂತಾ ಸಹ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿರುವ ಸಮಂತಾ ಈ ಪ್ರೀಮಿಯರ್ ಶೋಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಆ ಪೋಸ್ಟ್ ಜತೆಗೆ ಮಿಸ್ ಯು ಮೈ ಮ್ಯಾನ್ ವರುಣ್ ಧವನ್ ಎಂದು ಬರೆದುಕೊಂಡಿದ್ದಾರೆ.
ಐ ಮಿಸ್ ಯೂ ಮೈ ಮ್ಯಾನ್ ಎಂದು ಸಮಂತಾ ಮಾಡಿರುವ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ವೆಬ್ ಸರಣಿಯಲ್ಲಿ ಸಮಂತಾ ಜೊತೆಗೆ ವರುಣ್ ಧವನ್ ನಟಿಸಿರುವುದು ತಿಳಿದಿದೆ. ಈ ಸರಣಿಯ ಪ್ರೀಮಿಯರ್ ಶೋಗಳಿಗಾಗಿ ವರುಣ್ ಧವನ್ ಲಂಡನ್‌ಗೆ ಹೋಗಿರಲಿಲ್ಲ. ಅದಕ್ಕಾಗಿಯೇ ಸಮಂತಾ ಅವರನ್ನು ಮಿಸ್ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.
ಸದ್ಯ ವೈಯಕ್ತಿಕ ವಿಚಾರಕ್ಕೆ ಬಂದರೆ ಸಮಂತಾ ಒಂಟಿಯಾಗಿ ಜೀವನ ನಡೆಸುತ್ತಿರುವುದು ಗೊತ್ತೇ ಇದೆ. ನಾಗಚೈತನ್ಯ ಅವರನ್ನು ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ ಸಮಂತಾ ಕೆಲ ಭಿನ್ನಾಭಿಪ್ರಾಯಗಳಿಂದ ಪತಿಗೆ ವಿಚ್ಛೇದನ ನೀಡಿ ಒಂಟಿ ಜೀವನ ನಡೆಸುತ್ತಿದ್ದಾರೆ. ಆದರೆ ನಾಗ ಚೈತನ್ಯ ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ. ಅವರು ಈಗಾಗಲೇ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)