ಸಿನಿವಾಣಿ

20ರ ಹರೆಯದ ನೆನಪು ಮರುಕಳಿಸಿದಾಗ; ಟ್ವಿಟರ್​ನಲ್ಲಿ #ಮೀಆ್ಯಟ್​20 ಕಲರವ​..

ಟ್ವಿಟರ್​ನಲ್ಲಿ ಆಗಾಗ ಏನಾದರೊಂದು ಟ್ರೆಂಡ್​ ಆಗುತ್ತಲೇ ಇರುತ್ತದೆ. ಇದೀಗ ಕರೊನಾ ಹಾವಳಿಯ ದೊಡ್ಡ ಟ್ರೆಂಡ್​ ನಡುವೆ ಮೀಆ್ಯಟ್​20 ಸಹ ಟ್ರೆಂಡ್​ನಲ್ಲಿದೆ. ಅರೇ ಏನಿದು ಮೀಆ್ಯಟ್​20? ಟ್ವಿಟರ್​ನಲ್ಲಿ ಸದ್ಯ ಎಲ್ಲರ ಯೌವನದ ದಿನಗಳ ಫೋಟೋ ಕಾಣಿಸುತ್ತಿವೆ. 20ರ ವಯಸ್ಸಿನಲ್ಲಿ ಹೇಗಿದ್ದೆ? ಎಂಬುದನ್ನು ತೋರಿಸಲು ಅಂದಿನ ಫೋಟೋವೊಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯನಿಂದ ಹಿಡಿದು, ರಾಜಕಾರಣಿಗಳು, ಸಿನಿಮಾ ನಟರು, ಉದ್ಯಮಿಗಳೆಲ್ಲರೂ ತಂತಮ್ಮ 20ರ ಹರೆಯದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್​ನ ಅನುಪಮ್​ ಖೇರ್​, ರಣದೀಪ್​ ಹೂಡಾ, ವಿವೇಕ್​ ಅಗ್ನಿಹೋತ್ರಿ, ಹನ್ಸಲ್​ ಮೆಹ್ತಾ, ಟಿಸ್ಕಾ ಚೋಪ್ರಾ, ಅಲಿ ಫೈಝಲ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್​, ಪಾಕಿಸ್ತಾನಿ ಆಟಗಾರ ಶೋಯೆಬ್​ ಅಖ್ತರ್​ ಸಹ 20ರ ವಯಸ್ಸಲ್ಲಿ ಹೇಗಿದ್ದೆ ಎಂಬುದಕ್ಕೆ ಫೋಟೋ ನೀಡಿದ್ದಾರೆ. ಕನ್ನಡದ ಗಾಯಕ ರಾಜೇಶ್​ ಕೃಷ್ಣನ್​ 20ರ ಹರೆಯದಲ್ಲಿ ಹೇಗಿದ್ದೆ ಎಂಬುದಕ್ಕೆ ಫೋಟೋ ಸಮೇತ ಸಾಕ್ಷ್ಯ ನೀಡಿದ್ದಾರೆ. ರಾಜಕಾರಣಿ ಎಂ ಬಿ ಪಾಟೀಲ್​ ಸಹ ತಮ್ಮ ಹರೆಯದ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.