ಸಿನಿವಾಣಿ

ಇಂದು ನಟಿ ಮಯೂರಿ ಮದುವೆ: ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ಸಜ್ಜು

ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಮಯೂರಿ ಕ್ಯಾತರಿ, ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಖಾಸಗೀ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್, ಮಯೂರಿ ಅವರಿಗೆ ಬಹಳ ವರ್ಷಗಳ ಪರಿಚಯವಂತೆ. ಸುಮಾರು 10 ವರ್ಷಗಳ ಗೆಳೆತನದ ಬಳಿಕ ಅರುಣ್ ಮತ್ತು ಮಯೂರಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ಇದೊಂದು ಲವ್ ಕಂ ಅರೇಂಜ್ಡ್ ಮದುವೆಯಾಗಿದ್ದು, ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅತ್ಯಂತ ಸರಳವಾಗಿ ನಡೆಯಲಿದೆ.