ಸಿನಿವಾಣಿ

ಹಸ್ತಮೈಥುನವೇ ಸಾಕು, ಗಂಡನ ಅವಶ್ಯಕತೆ ಇಲ್ಲ; ಸ್ಯಾಂಡಲ್​ವುಡ್ ನಟಿಯ ಬೋಲ್ಡ್ ಮಾತು!

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬಿಜಿಯಾಗಿರುವ ನಟಿ ಓವಿಯಾ, ಕನ್ನಡಿಗರಿಗೂ ಚಿರಪರಿಚಿತ. ಸೋಷಿಯಲ್​ ಮೀಡಿಯಾದಲ್ಲಿಯೂ ಸಖತ್​ ಆ್ಯಕ್ಟಿವ್​. ಸದಾ ಒಂದಿಲ್ಲೊಂದು ಪೋಸ್ಟ್ ಹಾಕುತ್ತ, ಕಮೆಂಟ್​ಗಳಿಗೆ ಉತ್ತರಿಸುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗಲೇ ಇದೇ ನಟಿಗೆ ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಪ್ರಶ್ನೆಯೊಂದನ್ನು ಕೇಳಿದ್ದ. ಆ ಪ್ರಶ್ನೆ ಮುಜುಗರಕ್ಕೀಡಾಗುವಂತದ್ದು. ಆದರೆ, ಅದ್ಯಾವುದನ್ನೂ ಲೆಕ್ಕಿಸದೇ ನೇರವಾಗಿ ಉತ್ತರಿಸಿ ನೆಟ್ಟಿಗರಿಂದ ಸೈ ಎನಿಸಿಕೊಂಡಿದ್ದಾರೆ.

ಹಾಗಾದರೆ ಓವಿಯಾ ಅಭಿಮಾನಿಯಿಂದ ಎದುರಿಸಿದ ಪ್ರಶ್ನೆ ಏನು? ಅದಕ್ಕೆ ನಟಿ ಕೊಟ್ಟ ಬೋಲ್ಡ್ ಉತ್ತರ ಹೇಗಿತ್ತು? ಇಲ್ಲಿದೆ ನೋಡಿ. ‘ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ?’ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್​ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ..’ ಎಂದೂ ಅವರು ಉತ್ತರಿಸಿದ್ದಾರೆ.

ಕೇವಲ ಇದಷ್ಟೇ ಅಲ್ಲದೆ, ಮುಂದಿನ ಸಿನಿಮಾಗಳು, ಬದಲಾದ ಕಾಲಘಟ್ಟದಲ್ಲಿ ವೆಬ್​ಸಿರೀಸ್ ಮತ್ತುನರಾಜಕೀಯ ಸಂಬಂಧಿ ಪ್ರಶ್ನೆಗಳೂ ಓವಿಯಾ ಅವರ ಬಳಿ ಬಂದಿದ್ದವು. ಎಲ್ಲದಕ್ಕೂ ಸಂಯಮದಿಂದಲೇ ಉತ್ತರಿಸಿದ್ದಾರೆ. ಅಂದಹಾಗೆ, ರಾಕಿಂಗ್​ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ, ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಸದ್ಯ ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ತೆಲುಗು, ಮಲಯಾಳಂ ಸಿನಿಮಾರಂಗವೂ ಇವರಿಗೆ ಪರಿಚಯವಿದೆ. (ಏಜೆನ್ಸೀಸ್​)