ಸಿನಿವಾಣಿ

ಫ್ಯಾಶನ್​ ಡಿಸೈನರ್​ ಮಸಬಾರೊಂದಿಗೆ ಗೋವಾದಲ್ಲಿ ಲಾಕ್​ ಆಗಿರುವ ಬಾಲಿವುಡ್​ ನಟನ್ಯಾರು ಗೊತ್ತೇ?

ಪಣಜಿ: ಇಂಡಿಯನ್​ ಫ್ಯಾಶನ್​ ಡಿಸೈನರ್​ ಮಸಬಾ ಗುಪ್ತಾರೊಟ್ಟಿಗೆ ಬಾಲಿವುಡ್​ ನಟ ಸತ್ಯದೀಪ್​ ಮಿಶ್ರಾ ಅವರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿತ್ತು. ಇದೀಗ ಇಬ್ಬರು ಗೋವಾದಲ್ಲಿ ಬೀಡುಬಿಟ್ಟಿದ್ದಾರೆ.

ಮಾರ್ಚ್​ ತಿಂಗಳಲ್ಲಿ ಮಸಬಾ ಮತ್ತು ಮಿಶ್ರಾ ಒಟ್ಟಿಗೆ ಗೋವಾಗೆ ತೆರಳಿದರು. ಆದರೆ, ಮಾರ್ಚ್​ 25ರಂದು ಹೇರಿಕೆಯಾದ ಕರೊನಾ ಲಾಕ್​ಡೌನ್​ನಿಂದಾಗಿ ಇಬ್ಬರು ಗೋವಾದಲ್ಲಿ ಲಾಕ್​ ಆಗಿದ್ದಾರೆ. ಮಿಶ್ರಾ ಅವರ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿರುವಂತೆ ಅವರಿಗೆ ಗೋವಾದಲ್ಲಿ ಒಂದು ಮನೆ ಇರುವುದಾಗಿ ತಿಳಿದುಬಂದಿದೆ.

ಮಸಬಾ ಅವರು ಈ ಹಿಂದೆ ನಿರ್ದೇಶಕ ಮಧು ಮಂಟೇನಾ ವರ್ಮಾ ಅವರನ್ನು ವರಿಸಿದ್ದರು. ಕಳೆದ ವರ್ಷವಷ್ಟೇ ಅವರಿಬ್ಬರಿಗೂ ವಿಚ್ಛೇದನವಾಗಿತ್ತು. ಇನ್ನು ಮಿಶ್ರಾ ಸಹ 2009ರಲ್ಲಿ ಆದಿತಿ ರಾವ್ ಎಂಬುವರ ಜತೆಯಲ್ಲಿ ಮದುವೆಯಾಗಿ 2013ರಲ್ಲಿ ವಿಚ್ಛೇಧನ ಪಡೆದುಕೊಂಡಿದ್ದಾರೆ.

ಮಸಬಾ ಮತ್ತು ಮಿಶ್ರಾ ಇಬ್ಬರು ಗೋವಾದಲ್ಲಿ ಕಳೆದ ಅನೇಕ ಕ್ಷಣಗಳ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ಮಿಶ್ರಾ ಅವರು, ನೋ ಒನ್​ ಕಿಲ್ಡ್​, ಜಸ್ಸಿಕಾ, ಚಿಲ್ಲರ್​ ಪಾರ್ಟಿ, ಫೆರಾರಿ ಕಿ ಸವಾರಿ ಮತ್ತು ಬಾಂಬೆ ವೆಲ್ವೆಟ್​ ಚಿತ್ರದಲ್ಲಿ ನಟಿಸಿದ್ದಾರೆ. ಮಸಬಾ ಅವರು ತಮ್ಮ ಡಿಸೈನ್​ನಿಂದಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)