ಸಿನಿವಾಣಿ

ನಟಿಗೆ ಮರ್ಮಾಂಗ ಫೋಟೋ ಶೇರ್​ ಮಾಡಿದ ಕಿರಾತಕ..! ​

ಮುಂಬೈ: ಸೆಲೆಬ್ರಿಟಿಗಳ ಪಾಲಿಗೆ ಸಾಮಾಜಿಕ ಜಾಲತಾಣ ಎಷ್ಟು ಮುಖ್ಯವೋ? ಅಷ್ಟೇ ಶಾಪವೂ ಹೌದು. ಸೈಬರ್​ ತೊಂದರೆಯಲ್ಲಿ ಸಿಲುಕೊಂಡವರಲ್ಲಿ ಬಹುತೇಕರು ಕಲಾವಿದರೆ. ಕೆಲವರು ಜಾಲತಾಣದಲ್ಲಿ ಎದುರಾಗುವ ಸಮಸ್ಯೆಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ, ಇನ್ನು ಕೆಲವರು ಮಾನಸಿಕವಾಗಿ ಕುಗ್ಗಿ ಬಿಡುತ್ತಾರೆ.

ಇದೇ ರೀತಿಯ ಸಮಸ್ಯೆಯೊಂದು ಬಾಲಿವುಡ್​ ಕಿರುತೆರೆ ನಟಿ ಕವಿತಾ ಕೌಸಿಕ್​ಗೆ ಎದುರಾಗಿದೆ. ಕವಿತಾ ಅವರು ಇತ್ತೀಚೆಗಷ್ಟೇ ತಮ್ಮ ಟ್ವಿಟರ್​ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ವ್ಯಕ್ತಿಯೊಬ್ಬ ತನ್ನ ಮರ್ಮಾಂಗದ ಆಕ್ಷೇಪಾರ್ಹ ಫೋಟೋವನ್ನು ಶೇರ್​ ಮಾಡಿಕೊಂಡಿರುವುದು ನಟಿಗೆ ಮುಜುಗರ ಅನುಭವಿಸುವಂತಾಗಿದೆ.

ಇದೀಗ ಮುಂಬೈ ಪೊಲೀಸ್​, ಸೈಬರ್​ ಸೆಲ್ ಮತ್ತು ಸರ್ಕಾರದ​ ಮೊರೆ ಹೋಗಿರುವ ಕವಿತಾ, ಅಶ್ಲೀಲ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಆರೋಪಿಯ ಫೋಟೋ ಶೇರ್​ ಮಾಡುವ ಮೂಲಕ ಈತನನ್ನು ಬಂಧಿಸುವುದು ಕಷ್ಟವೇನಲ್ಲ ಎಂದು ಕವಿತಾ ಅವರು ಟ್ವೀಟ್​ ಮಾಡಿದ್ದು, @MumbaiPolice @MahaCyber1, @sushant_says, @AUThackeray@NCWIndia" ಟ್ಯಾಗ್​ ಮಾಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಆರೋಪಿಯ ಬಗ್ಗೆ ಕೆಲ ಮಾಹಿತಿ ನೀಡಿರುವ ಕವಿತಾ, ಆತನ ಹೆಸರು ಶಂಕರ್​. ಈತ ಬೇಕಂತಲೇ ಸೆಲೆಬ್ರಿಗಳಿಗೆ ತನ್ನ ಮರ್ಮಾಂಗದ ಫೋಟೋಗಳನ್ನು ಕಳುಹಿಸುತ್ತಾನೆ. ಈತ ಎಲ್ಲಿದ್ದಾನೆ ಎಂದು ನೋಡಿ ಈತನ ಬಗ್ಗೆ ತಿಳಿಸಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)