ಇತ್ತೀಚೆಗೆ ಬಾಲಿವುಡ್ ನಟಿ ಮಲೈಕಾ ಅರೋರಾ ಈಜುಕೊಳದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಜತೆಗೆ, ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಬಿಕಿನಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋದೇ ಹವಾ, ಸದ್ದು, ಸೌಂಡು ಎನ್ನಬಹುದು. ಈ ಫೋಟೋ ಮೇಲೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಇವೆ.
ಹೌದು, ಕಿತ್ತಳೆ ಬಣ್ಣದ ಬಿಕಿನಿ ಟಾಪ್ ಮತ್ತು ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿರುವ ಮಲೈಕಾ ಕ್ಯಾಮೆರಾಗೆ ಒಂದು ಸ್ಟೈಲಿಶ್ ಪೋಸ್ ನೀಡಿದ್ದಾರೆ. ಫೋಟೋದಲ್ಲಿ 48 ವರ್ಷದ ಮಲೈಕಾ ಸಖತ್ ಹಾಟ್ ಆಗಿ ಕಾಣಿಸುತ್ತಿರುವುದು ಕೇವಲ ಪಡ್ಡೆ ಹುಡುಗರಿಗೆ ಮಾತ್ರವಲ್ಲ, ಬದಲಿಗೆ ನಟಿಯ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಅವರ ನಿದ್ದೆಯನ್ನು ಗೆಡಿಸಿದೆಯಂತೆ. ನಟಿ ತಮ್ಮ ಫೋಟೋಗೆ 'ಸನ್ನಿ ಸೈಡ್ ಅಪ್' ಎಂಬ ಕ್ಯಾಪ್ಷನ್ ನೀಡಿದ್ದಾರೆ.
ನಟಿಯ ಈ ಫೋಟೋ ಮೇಲೆ ಅರ್ಜುನ್ ಕಪೂರ್ ಸೂಪರ್ ಕ್ಯಾಪ್ಷನ್ ಎಂದು ಕಾಮೆಂಟ್ ಮಾಡಿದ್ದು, ಅದಕ್ಕೆ ನಟಿ ಕೂಡಾ ಉತ್ತರಿಸಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಮಲೈಕಾ ಮತ್ತು ಅರ್ಜುನ್ ಅವರ ಪ್ರೀತಿಯಲ್ಲಿ ಬಿರುಕು ಎಂಬ ಸುದ್ದಿಗಳು ಕೇಳಿಬಂದವು. ಆದರೆ, ಈ ಜೋಡಿ ಅವು ಸುಳ್ಳು ಸುದ್ದಿಗಳು ಎಂದು ತಿಳಿಸಿದರು.