ಗ್ಲಾಮರಸ್ ಸೀರೆ ಧರಿಸಿ ಕೇರಳಕ್ಕೆ ಭೇಟಿ ನೀಡಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಎಸಗಿದ ದುಷ್ಕೃತ್ಯ ಬಿಚ್ಚಿಟ್ಟ ಕಸ್ತೂರಿ ಶಂಕರ್! Kasthuri Shankar
- ಶಿಫಾನ್ ಸೀರೆ ಉಟ್ಟಿದ್ದಕ್ಕೆ ತೀರಾ ಕೆಟ್ಟ ಆಂಗಲ್‌ನಲ್ಲಿ ವಿಡಿಯೋ ಮಾಡಿದ್ರು
- ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಹಿಂದೆ ಇತ್ತು ಪಾಪರಾಜಿಗಳ ಕೈಚಳಕ
- ಕೇರಳ ಪಾಪರಾಜಿಗಳ ಅಸಲಿ ಮುಖವಾಡ ಕಳಚಿದ ಖ್ಯಾತ ನಟಿ ಕಸ್ತೂತಿ ಶಂಕರ್
- ವಿಡಿಯೋ ಮಿಸ್‌ಯೂಸ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸ್ಟಾರ್ ನಟಿ ತೀವ್ರ ಬೇಸರ
ಹೈದರಾಬಾದ್: ನಟಿ ಕಸ್ತೂರಿ ಶಂಕರ್ ( Kasthuri Shankar ) ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. ತಮ್ಮ ಮುಕ್ತವಾದ ಮಾತುಗಳಿಂದಲೇ ಕಸ್ತೂರಿ ಅವರು ಆಗಾಗ ವಿವಾದಕ್ಕೆ ಗುರಿಯಾಗುತ್ತಿರುತ್ತಾರೆ.
ತಾಜಾ ಸಂಗತಿ ಏನೆಂದರೆ, ಕೇರಳದಲ್ಲಿ ಸಿನಿಮಾ ಪ್ರಿವ್ಯೂ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ತಮಗೆ ಎದುರಾದ ಕಹಿ ಅನುಭವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋವೊಂದನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ ವೈರಲ್ ಮಾಡಿದ ಬಗ್ಗೆ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಕಸ್ತೂರಿ ಶಂಕರ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಾನು ನನ್ನ ಸ್ನೇಹಿತರು ನಿರ್ಮಿಸಿದ್ದ ಚಿತ್ರವೊಂದರ ಪ್ರಿವ್ಯೂ ಶೋಗಾಗಿ ಕೇರಳಕ್ಕೆ ತೆರಳಿದ್ದೆ. ಮಲಯಾಳಂ ಚಿತ್ರರಂಗದಲ್ಲಿ ನಾನು ಮಾಡಿದ ಪಾತ್ರಗಳನ್ನು ನೆನೆದು ಕೇರಳದ ಜನ ಇಂದಿಗೂ ನನ್ನ ಮೇಲೆ ಅಪಾರ ಪ್ರೀತಿ ತೋರಿಸುತ್ತಾರೆ. ನಾನು ಅಲ್ಲಿಗೆ ಹೋಗಿದ್ದ ಸಮಯದಲ್ಲಿ, ಇಳಯದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾದ ಹಳೆಯ ವಿಂಟೇಜ್ ಹಾಡೊಂದು ಆ ರಾಜ್ಯದಲ್ಲಿ ಸಖತ್ ವೈರಲ್ ಆಗುತ್ತಿತ್ತು.
ಆ ಕಾರ್ಯಕ್ರಮಕ್ಕಾಗಿ ನಾನು ಸುಂದರವಾದ ಶಿಫಾನ್ ಸೀರೆಯನ್ನು ಉಟ್ಟುಕೊಂಡಿದ್ದೆ, ಅದು ಗ್ಲಾಮರಸ್ ಆಗಿತ್ತೇ ಹೊರತು ಯಾವುದೇ ರೀತಿಯಲ್ಲಿ ಅಶ್ಲೀಲವಾಗಿರಲಿಲ್ಲ. ಅಲ್ಲಿ ನೆರೆದಿದ್ದ ಕೆಲವರು ವೈರಲ್ ಆಗುತ್ತಿದ್ದ ಲಿಯೋ ಚಿತ್ರದ ಆ ಹಿಟ್ ಹಾಡಿಗೆ ರೀಲ್ಸ್ ಅಥವಾ ವಿಡಿಯೋ ಪ್ರದರ್ಶನ ನೀಡುವಂತೆ ವಿನಂತಿಸಿದಾಗ ನಾನು ಪ್ರೀತಿಯಿಂದ ಒಪ್ಪಿಕೊಂಡೆ. ಆದರೆ, ಆ ಕಂಟೆಂಟ್ ಅನ್ನು ಶೂಟ್ ಮಾಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೊಬೈಲ್‌ನಲ್ಲಿ ತೀರಾ ಕೆಟ್ಟ ಆ್ಯಂಗಲ್‌ನಿಂದ ನನ್ನ ವಿಡಿಯೋ ಮಾಡುತ್ತಿರುವುದನ್ನು ನಾನು ಗಮನಿಸಿದೆ.
ಇದಾದ ನಂತರ ನಡೆದ ಘಟನೆ ನಿಜಕ್ಕೂ ಆಘಾತಕಾರಿಯಾಗಿತ್ತು. ಅಲ್ಲಿನ ಪಾಪರಾಜಿಗಳು (ಮಾಧ್ಯಮದವರು) ಆ ಹುಡುಗ ಮೊಬೈಲ್‌ನಲ್ಲಿ ಶೂಟ್ ಮಾಡಿದ್ದ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿದ್ದರು. ಅದರಲ್ಲಿ ನನ್ನ ಸೊಂಟ ಮತ್ತು ಹೊಕ್ಕಳಿನ ಭಾಗ ಎದ್ದು ಕಾಣುವಂತೆ ಕಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆ ಎಡಿಟೆಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗಿತ್ತು.
ಆ ವಿಡಿಯೋದ ಕೆಳಗೆ ಬಂದಿದ್ದ ಕಮೆಂಟ್‌ಗಳನ್ನು ನೋಡಿ ನನಗೆ ತೀವ್ರ ಆಕ್ರೋಶ ಮತ್ತು ಬೇಸರವಾಯಿತು. ಅವು ಅತ್ಯಂತ ಅಸಭ್ಯ ಮತ್ತು ಅಶ್ಲೀಲ ಕಮೆಂಟ್‌ಗಳಾಗಿದ್ದವು. ಕೇರಳದ ಇತ್ತೀಚಿನ ಕೆಲವು ಮಾಧ್ಯಮಗಳ/ಪಾಪರಾಜಿಗಳ ಕಹಿ ವಾಸ್ತವ ಇದು ಎಂದು ತಿಳಿದಿದ್ದರಿಂದ, ಇದರ ವಿರುದ್ಧ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ನಟಿ ಕಸ್ತೂರಿ ಶಂಕರ್ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ, (ಏಜೆನ್ಸೀಸ್).