ಸಿನಿವಾಣಿ

ಸಾಲು ಸಾಲು ಸವಾಲುಗಳು... 47 ವರ್ಷದ ವಿಶಾಲ್​ ತಡವಾಗಿ ಮದುವೆಯಾಗಲು ಇದೇ ಕಾರಣವಂತೆ! Actor Vishal

Actor Vishal : ತಮಿಳು ಚಿತ್ರರಂಗದ ಸ್ಟಾರ್​ ನಟ ವಿಶಾಲ್, ಇತ್ತೀಚೆಗೆ ಸಿನಿಮಾ ವೇದಿಕೆ ಒಂದರಲ್ಲಿ ತಮ್ಮ ಮದುವೆಯನ್ನು ಘೋಷಿಸಿದರು. ತಮಿಳು ನಟಿ ಸಾಯಿ ಧನ್ಶಿಕಾರನ್ನು ಆಗಸ್ಟ್ 29 ರಂದು ವರಿಸಲಿದ್ದಾರೆ. 47ನೇ ವಯಸ್ಸಿನಲ್ಲಿ ತಡವಾಗಿ ಮದುವೆ ಆಗುತ್ತಿರುವುದಕ್ಕೆ ಕೆಲ ಕಾರಣಗಳೂ ಇವೆ. ಅವುಗಳನ್ನು ನಟ ಮತ್ತು ನಿರ್ದೇಶಕ ಅಲೆಪ್ಪಿ ಅಶ್ರಫ್ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿವರಿಸಿದ್ದಾರೆ. ವಿಶಾಲ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ಕೆಲವು ಸವಾಲುಗಳು ಮತ್ತು ಅವರ ಆರೋಗ್ಯದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

12 ವರ್ಷಗಳ ಹಿಂದೆ ಪೂರ್ಣಗೊಂಡ ವಿಶಾಲ್ ಅವರ ಮದಗಜರಾಜ ಚಿತ್ರ ಈ ವರ್ಷದ ಆರಂಭದಲ್ಲಿ ಸಂಕ್ರಾಂತಿಯಂದು ಬಿಡುಗಡೆಯಾಯಿತು. ಆ ಕಾರ್ಯಕ್ರಮದಲ್ಲಿ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಆಘಾತಕ್ಕೊಳಗಾದರು. ಆ ಸಮಯದಲ್ಲಿ ವಿಶಾಲ್ ಅವರ ಆರೋಗ್ಯ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ವೇದಿಕೆ ಮೇಲೆ ಮಾತನಾಡುವಾಗ ಕೈ ನಡುಗುತ್ತಿತ್ತು ಮತ್ತು ಮಾತು ತೊದಲುತ್ತಿತ್ತು. ಹೀಗಾಗಿ ಅವರ ಆರೋಗ್ಯದ ಅನೇಕ ಜನರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಂದು ವರ್ಗದ ಜನರಂತೂ ವಿಶಾಲ್ ಅವರ ಈ ಸ್ಥಿತಿಗೆ ಅತಿಯಾದ ಮದ್ಯಪಾನವೇ ಕಾರಣ ಎಂದಿದ್ದರು. ಇನ್ನು ಕೆಲವರು ಇವನ್​ ಅವನ್​ ಚಿತ್ರಕ್ಕಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದರು ಎಂದು ಅಶ್ರಫ್​ ಅವರು ಹಳೆಯದ್ದನ್ನು ನೆನೆಪಿಸಿದ್ದಾರೆ.

ಇದರ ನಡುವೆ ವಿಶಾಲ್ ಅವರು ಕೆಲವು ಸಮಯದಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ಗಂಭೀರವಾದ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆಯ ಮೂಲಗಳೇ ಮಾಹಿತಿಯನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲಿ ವಿಶಾಲ್​ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಇತ್ತೀಚೆಗೆ ಟ್ರಾನ್ಸ್​ಜೆಂಡರ್​ ಸೌಂದರ್ಯ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ವಿಶಾಲ್​ ಅಸ್ವಸ್ಥರಾಗಿ ಕೆಳಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಅಲ್ಲದೆ, ವಿಶಾಲ್​ ಅವರಿಗೆ ಏನೋ ಒಂದು ಸಮಸ್ಯೆ ಇದೆ ಎಂಬ ಮಾತು ಇಂದಿಗೂ ಕೇಳಿಬರುತ್ತಲೇ ಇದೆ ಎಂದು ಅಶ್ರಫ್​ ಹೇಳಿದರು.

ಅಂದಹಾಗೆ, ವಿಶಾಲ್ ಅವರು ನಟ ಅರ್ಜುನ್ ಅವರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಅವರು ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದರು. ವಿಶಾಲ್ ನಟಿಸಿದ ಬಹುತೇಕ ಸಿನಿಮಾಗಳು ಭಾರಿ ಯಶಸ್ಸನ್ನು ಕಂಡಿವೆ. ನಟ ಅರ್ಜುನ್ ನಂತರ, ತಮಿಳುನಾಡು ಜನರು ವಿಶಾಲ್ ಅವರಿಗೆ ಆಕ್ಷನ್ ಹೀರೋ ಎಂಬ ಬಿರುದನ್ನು ನೀಡಿದ್ದಾರೆ. ವಿಶಾಲ್​ ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ವಿಶಾಲ್ ಅವರನ್ನು ಕಲಾವಿದರ ಸಂಘದ ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು. ನಟ ಶರತ್ ಕುಮಾರ್ ಅವರ ಸಮಿತಿಯನ್ನು ಸೋಲಿಸುವ ಮೂಲಕ ಅವರು ಕಲಾವಿದರ ಸಂಘದ ಚುನಾವಣೆಯಲ್ಲಿ ಗೆದ್ದರು ಎಂದು ಅಶ್ರಫ್​ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಶರತ್ ಕುಮಾರ್ ಅವರ ಪುತ್ರಿ ಮತ್ತು ನಟಿ ವರಲಕ್ಷ್ಮಿ ವಿಶಾಲ್ ಜೊತೆಗಿದ್ದರು. ಅದು ತಮಿಳುನಾಡಿನಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರಿಂದಾಗಿ ತಂದೆ ಮತ್ತು ಮಗಳು ಹಲವು ವರ್ಷಗಳ ಕಾಲ ಮೌನವಾಗಿದ್ದರು. ವರಲಕ್ಷ್ಮಿ ಮತ್ತು ವಿಶಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳೂ ಇದ್ದವು. ಆದರೆ, ಸ್ವಲ್ಪ ಸಮಯದ ನಂತರ, ವಿಶಾಲ್ ಮಲಯಾಳಂ ನಟಿ ಲಕ್ಷ್ಮಿ ಮೆನನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿತು. ಆದರೆ, ನಂತರದಲ್ಲಿ ಆ ಸುದ್ದಿಯೂ ತಣ್ಣಗಾಯಿತು ಎಂದು ಅಶ್ರಫ್​ ತಿಳಿಸಿದ್ದಾರೆ.

ವಿಶಾಲ್​ ಅವರು ರಾಜಕೀಯದಲ್ಲೂ ಮಿಂಚಲು ಸಾಧ್ಯವಾಗಲಿಲ್ಲ. ಅಲ್ಲದೆ, ಅವರ ಕಂಪನಿ ನಿರ್ಮಿಸಿದ ಹಲವು ಚಿತ್ರಗಳು ವಿಫಲವಾದವು. 47ನೇ ವಯಸ್ಸಿನ ವರೆಗೂ ವಿಶಾಲ್​ ಮದುವೆಯಾಗದಿರಲು ಇನ್ನೊಂದು ಕಾರಣವಿದೆ. ಅದೇನೆಂದರೆ, ಅವರು ಮಾಡಿದ ಪ್ರತಿಜ್ಞೆಯೂ ಹೌದು. ವಿಶಾಲ್ ಅವರು 37 ವರ್ಷದವರಾಗಿದ್ದಾಗ, ಕಲಾವಿದರ ಸಂಘದ ಆಳ್ವಿಕೆ ನಡೆಸುತ್ತಿದ್ದಾಗ ಈ ಪ್ರತಿಜ್ಞೆ ಮಾಡಿದರು. ಕಲಾವಿದರ ಸಂಘಕ್ಕೆ ಕಟ್ಟಡ ಕಟ್ಟಿದ ನಂತರವೇ ಮದುವೆಯಾಗುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ, ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ವಿಶಾಲ್ ಅವರ ವೈಫಲ್ಯಕ್ಕೆ ಅವರ ಸ್ನೇಹಿತರೊಂದಿಗಿನ ದುಂದುವೆಚ್ಚವೇ ಕಾರಣ ಎಂದು ಅನೇಕ ಪ್ರಮುಖರು ಹೇಳಿದ್ದಾರೆ. ವಿಶಾಲ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಮಾರಿ ಈಗ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ್ದರು ಎಂದು ಅಲೆಪ್ಪಿ ಅಶ್ರಫ್ ವಿಶಾಲ್​ ಕುರಿತ ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್​)