ಬೆಂಗಳೂರು: ಕಳೆದ ವರ್ಷವೇ ನವರಸನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ನ ಸಿನಿಮಾ ರಂಗನಾಯಕ ಘೋಷಣೆಯಾಗಿತ್ತು. ಘೋಷಣೆ ಸಂದರ್ಭದಲ್ಲಿ ವಿಶೇಷ ಹಾಡೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾ ಅಧಿಕೃತವಾಗಿ ಮುಹೂರ್ತ ನೆರವೇರಿಸಿಕೊಂಡಿದೆ.
ಬಸನವಗುಡಿಯ ರಾಯಮಠದಲ್ಲಿ ಚಿತ್ರದ ಸರಳ ಮುಹೂರ್ತ ನಡೆದಿದ್ದು, ನಿರ್ಮಾಪಕ ವಿಖ್ಯಾತ್ ಸೇರಿ ಹಲವರು ಸಾಕ್ಷಿಯಾಗಿದ್ದರು. ಈ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.
‘ಬ್ರಾಹ್ಮೀ ಮುಹೂರ್ತದ ಶುಭಸಮಯ ರಂಗನಾಯಕ ಚಿತ್ರ ಬಸವನಗುಡಿ ರಾಯರಮಠದಲ್ಲಿ ಪ್ರಥಮ ಆರಂಭ ಫಲಕ ಹಾಗೂ ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು. ಮಠ, ಎದ್ದೇಳು ಮಂಜುನಾಥ ನಂತರ ಗುರುಪ್ರಸಾದ್ ನನ್ನ ಸಮ್ಮಿಲನ.. ನಗಿಸಲು ನಾವು ರೆಡಿ ಶುಭಹಾರೈಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮಿತಾಭ್ಗೆ ಮಗಳಾಗಿ ರಶ್ಮಿಕಾ ಮಂದಣ್ಣ!
ಗುರುಪ್ರಸಾದ್ ನಿರ್ದೇಶನದ ಎರಡು ಸಿನಿಮಾಗಳಿಗೆ ಸಂಗೀತ ನೀಡಿದ್ದ ಅನೂಪ್ ಸೀಳಿನ್ ಇಲ್ಲಿಯೂ ಮುಂದುವರಿಯುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡಿರುವ ನಿರ್ದೇಶಕರು, ಇನ್ನೇನು ಶೂಟಿಂಗ್ ಆರಂಭಿಸಲಿದ್ದಾರಂತೆ.